ತಮಿಳುನಾಡು: ಸೆಪ್ಟಿಕ್ ಟ್ಯಾಂಕ್ನಲ್ಲಿ 9 ವರ್ಷದ ಬಾಲಕನ ಶವ ಪತ್ತೆ, ಅಪ್ರಾಪ್ತನ ಬಂಧನ
ತಮಿಳುನಾಡಿನ ಸೆಪ್ಟಿಕ್ ಟ್ಯಾಂಕ್ನಲ್ಲಿ 9 ವರ್ಷದ ಬಾಲಕನ ಶವ ಪತ್ತೆಯಾಗಿದೆ. ಮಗು ಬಿಹಾರ ಮೂಲದವರಾಗಿದ್ದು, ಇತರ 11 ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯಲ್ಲಿ ಓದುತ್ತಿದ್ದ. ಮಧುರೈನ ಕಥಾಪಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂಬತ್ತು ವರ್ಷದ ಬಾಲಕ ನಾಪತ್ತೆಯಾಗಿದ್ದ ಕಾರಣ ಸಂಸ್ಥೆಯ ವಾರ್ಡನ್ ಶನಿವಾರ (ಮೇ 25) ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟಿಕ್ ಟ್ಯಾಂಕ್ನಲ್ಲಿ 9 ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಈ ಘಟನೆ ಸಂಬಂಧ ಅಪ್ರಾಪ್ತ ಬಾಲಕನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಮದುರೈನಲ್ಲಿ ಉರ್ದು ಪ್ರಚಾರ ಸಂಸ್ಥೆಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕನನ್ನು ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಸೆಪ್ಟಿಕ್ ಟ್ಯಾಂಕ್‌ನಿಂದ ಹೊರತೆಗೆಯಲಾಗಿದೆ.
ಮಗು ಬಿಹಾರ ಮೂಲದವರಾಗಿದ್ದು, ಇತರ 11 ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯಲ್ಲಿ ಓದುತ್ತಿದ್ದ. ಮಧುರೈನ ಕಥಾಪಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒಂಬತ್ತು ವರ್ಷದ ಬಾಲಕ ನಾಪತ್ತೆಯಾಗಿದ್ದ ಕಾರಣ ಸಂಸ್ಥೆಯ ವಾರ್ಡನ್ ಶನಿವಾರ (ಮೇ 25) ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರು ಕೂಡಲೇ ತನಿಖೆಯನ್ನು ಪ್ರಾರಂಭಿಸಿದರು, ಎಲ್ಲೆಡಎ ಹುಡುಕಾಡಿದಾಗ ಸೆಪ್ಟೆಕ್ ಟ್ಯಾಂಕ್ನಲ್ಲಿ ಮೊದಲು ತಲೆ ಕಾಣಿಸಿತ್ತು, ಬಳಿಕ ದೇಹವನ್ನು ಹೊರತೆಗೆಯಲಾಗಿದೆ. ಹೊಟ್ಟೆ ಸೇರಿದಂತೆ ದೇಹದ ಇತರೆ ಭಾಗಗಳಲ್ಲಿ ಇರಿತದ ಗಾಯಗಳಿದ್ದವು.
ಪೊಲೀಸ್ ಮೂಲಗಳ ಪ್ರಕಾರ, 9 ವರ್ಷದ ಬಾಲಕ 13 ವರ್ಷದ ಬಾಲಕನೊಂದಿಗೆ ಜಗಳವಾಡಿದ್ದ, ಅವನು ಕೂಡ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಯಾಗಿದ್ದ, 13 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಉಡುಪಿ ಗ್ಯಾಂಗ್ ವಾರ್ ಬೆನ್ನಲ್ಲೇ ಕೋಲಾರದಲ್ಲೂ ಆತಂಕಕಾರಿ ಘಟನೆ: ಮಾರಕಾಸ್ತ್ರ ಹಿಡಿದು ಜನರಲ್ಲಿ ಭಯ ಹುಟ್ಟಿಸಿದ ಯುವಕ
ಆ ಬಾಲಕನೇ ಹತ್ಯೆ ಮಾಡಿದ್ದಾನೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ದೇಹದ ಮೇಲಿರುವ ಗಾಯದ ಗುರಿತು ಇದು ಸಹಜ ಸಾವಲ್ಲ ಕೊಲೆ ಎಂಬುದನ್ನು ಸಾರಿ ಸಾರಿ ಹೇಳುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ