ಪತ್ನಿ ಮತ್ತವಳ ಪ್ರಿಯಕರನ ಕೊಂದು, ರುಂಡಗಳ ಜತೆ ಪೊಲೀಸರೆದುರು ಶರಣಾದ ವ್ಯಕ್ತಿ
ತಮಿಳುನಾಡಿನಲ್ಲಿ ಬರ್ಬರ ಹತ್ಯೆ ನಡೆದಿದೆ. ಪತಿಯೊಬ್ಬ ಪತ್ನಿ ಹಾಗೂ ಆಕೆಯ ಪ್ರಿಯಕರನ ಹತ್ಯೆ ಮಾಡಿ, ರುಂಡ ಹಿಡಿದು ಪೊಲೀಸ್ ಠಾಣೆಗೆ ಹೋಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಪತ್ನಿ(Wife) ಮತ್ತವಳ ಪ್ರಿಯಕರನನ್ನು ಕೊಂದು, ರುಂಡಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ವ್ಯಕ್ತಿಯೊಬ್ಬ ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ. ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಜೊತೆ ಸಂಬಂಧವಿದೆ ಎಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏನೋ ಕೆಲಸವಿದೆ ಹೋಗ್ತಿದ್ದೀನಿ, ಬರೋದು ತುಂಬಾ ತಡವಾಗುತ್ತೆ ಎಂದು ಪತ್ನಿ ಬಳಿ ಹೇಳಿ ಹೊರಟಿದ್ದ ಕೊಲಂಜಿ, ಸ್ವಲ್ಪ ಸಮಯದಲ್ಲೇ ಹಿಂದಿರುಗಿ ಬಂದಿದ್ದಾನೆ. ಮನೆಯ ತಾರಸಿಯಲ್ಲಿ ಇಬ್ಬರೂ ಜತೆಗಿರುವುದನ್ನು ಕಂಡಿದ್ದಾನೆ.

ಚೆನ್ನೈ, ಸೆಪ್ಟೆಂಬರ್ 11: ಪತ್ನಿ(Wife) ಮತ್ತವಳ ಪ್ರಿಯಕರನನ್ನು ಕೊಂದು, ರುಂಡಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ವ್ಯಕ್ತಿಯೊಬ್ಬ ಶರಣಾಗಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಡೆದಿದೆ. ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಜೊತೆ ಸಂಬಂಧವಿದೆ ಎಂದು ಶಂಕಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನೋ ಕೆಲಸವಿದೆ ಹೋಗ್ತಿದ್ದೀನಿ, ಬರೋದು ತುಂಬಾ ತಡವಾಗುತ್ತೆ ಎಂದು ಪತ್ನಿ ಬಳಿ ಹೇಳಿ ಹೊರಟಿದ್ದ ಕೊಲಂಜಿ, ಸ್ವಲ್ಪ ಸಮಯದಲ್ಲೇ ಹಿಂದಿರುಗಿ ಬಂದಿದ್ದಾನೆ. ಮನೆಯ ತಾರಸಿಯಲ್ಲಿ ಇಬ್ಬರೂ ಜತೆಗಿರುವುದನ್ನು ಕಂಡಿದ್ದಾನೆ.ಆಗ ತನಿಗಿದ್ದ ಅನುಮಾನ ಖಾತ್ರಿಯಾದಾಗ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಂದು, ಬಳಿಕ ರುಂಡವನ್ನು ದೇಹದಿಂದ ಬೇರೆ ಮಾಡಿದ್ದಾನೆ. ಅನದ್ನು ಹಿಡಿದು ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಆತ ತನ್ನ ದ್ವಿಚಕ್ರ ವಾಹನಕ್ಕೆ ಎರಡೂ ತಲೆಗಳನ್ನು ಕಟ್ಟಿ ವೆಲ್ಲೂರು ಕೇಂದ್ರ ಜೈಲಿಗೆ ಹೋಗಿ ಶರಣಾಗಿದ್ದಾನೆ. ವಂಜಾರಂ ಪೊಲೀಸರು ಮನೆಯಿಂದ ತಲೆ ಇಲ್ಲದ ಶವಗಳನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಸ್ಥಳದ ದೃಶ್ಯಗಳಲ್ಲಿ ತಲೆಯಿಲ್ಲದ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಪೊಲೀಸರು ಬಂದಾಗ ಗ್ರಾಮಸ್ಥರು ಮನೆಯ ಬಳಿ ಜಮಾಯಿಸಿದ್ದರು ಮತ್ತು ವಂಜಾರಂ ಪೊಲೀಸರು ಶವಗಳನ್ನು ವಶಪಡಿಸಿಕೊಂಡರು.
ಇದನ್ನೂ ಓದಿ: ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ
ಕೊಲಂಜಿ ನ್ಯಾಯಾಂಗ ಬಂಧನದಲ್ಲಿರುವುದರಿಂದ ದಂಪತಿಯ ಮೂವರು ಹೆಣ್ಣುಮಕ್ಕಳನ್ನು ಸಂಬಂಧಿಕರ ಆರೈಕೆಯಲ್ಲಿ ಬಿಡಲಾಗಿದೆ. ಜೂನ್‌ನಲ್ಲಿ, ಬೆಂಗಳೂರು ಬಳಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂದು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಕತ್ತರಿಸಿದ ರುಂಡದೊಂದಿಗೆ ಶರಣಾದ ಆರೋಪದ ಮೇಲೆ ಬಂಧಿಸಲಾಗಿತ್ತು, ಆರೋಪಿಯನ್ನು ಹೆನ್ನಾಗರ ನಿವಾಸಿ ಶಂಕರ್ (28) ಎಂದು ಗುರುತಿಸಲಾಗಿತ್ತು.
ಶಂಕರ್ ತನ್ನ ಹೆಂಡತಿಯನ್ನು ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದ ಮತ್ತು ದಂಪತಿ ಇತ್ತೀಚೆಗೆ ಬಾಡಿಗೆ ಮನೆಗೆ ತೆರಳಿದ್ದರು. ಜೂನ್ 3 ರಂದು ಕೆಲಸದಿಂದ ತಡವಾಗಿ ಮನೆಗೆ ಹಿಂದಿರುಗಿದಾಗ, ತನ್ನ ಹೆಂಡತಿಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಂಡಿದ್ದಾನೆ. ಅವರ ಮೇಲೆ ಹಲ್ಲೆ ನಡೆಸಿ ನಂತರ ತನ್ನ ಹೆಂಡತಿಯ ಶಿರಚ್ಛೇದ ಮಾಡಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Thu, 11 September 25




