ತಮಿಳುನಾಡಿನ ದಿಂಡಿಗಲ್‌ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 7 ಮಂದಿ ಸಾವು

ತಮಿಳುನಾಡಿನ ದಿಂಡಿಗಲ್‌ನ ತಿರುಚ್ಚಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯಲ್ಲಿ ರಾಗುರುವಾರ ರಾತ್ರಿ 9.30ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರ ಜೊತೆಗೆ ಆಸ್ಪತ್ರೆಯಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ತಮಿಳುನಾಡಿನ ದಿಂಡಿಗಲ್‌ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: ಕನಿಷ್ಠ 7 ಮಂದಿ ಸಾವು
ದಿಂಡಿಗಲ್‌ ಆಸ್ಪತ್ರೆಯಲ್ಲಿ ರಕ್ಷಣಾ ಕಾರ್ಯಾಚರಣೆImage Credit source: ANI
Follow us
Ganapathi Sharma
|

Updated on:Dec 13, 2024 | 7:38 AM

ಚೆನ್ನೈ, ಡಿಸೆಂಬರ್ 13: ತಮಿಳುನಾಡಿನ ದಿಂಡಿಗಲ್‌ನಲ್ಲಿರುವ ಪ್ರಮುಖ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 6 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಘಟನೆ ಸಂಭವಿಸಿದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ನೆಲ ಮಹಡಿಯಲ್ಲಿನ ರಿಸೆಪ್ಷನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಕ್ಷಣಮಾತ್ರದಲ್ಲಿ ಅದು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದೆಂದು ಶಂಕಿಸಲಾಗಿದೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಕಾರ, ಅಗ್ನಿ ಅವಘಡದಿಂದಾಗಿ ಆಸ್ಪತ್ರೆಯಲ್ಲಿ ಆವರಿಸಿದ ದಟ್ಟವಾದ ಹೊಗೆಯಿಂದ ಹಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ರಿಸೆಪ್ಷನ್​ ಹಾಲ್​ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ಸರಿಸುಮಾರು 50 ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಂಡು ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ, ಸಮೀಪದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕನಿಷ್ಠ 30 ರೋಗಿಗಳನ್ನು ಚಿಕಿತ್ಸೆಗಾಗಿ ದಿಂಡುಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟರು. ಕೊನೆಗೂ ಬೆಂಕಿ ನಂದಿಸುವಲ್ಲಿ ಅವರು ಯಶಸ್ವಿಯಾಗಿದ್ದು, ಆಸ್ಪತ್ರೆಯ ಒಳಗೆ ಸಿಲುಕಿರುವವರನ್ನು ಪತ್ತೆಹಚ್ಚಿ ರಕ್ಷಿಸುವ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ: ವಂದೇ ಮಾತರಂ ಹಾಡಿ ಪ್ರಧಾನಿ ಮೋದಿ ಮನ ಗೆದ್ದ ಮಿಜೋರಾಂ ಬಾಲಕಿ

ಮೂವರ ಸ್ಥಿತಿ ಗಂಭೀರ: ಸಾವಿನ ಸಂಖ್ಯೆ ಹೆಚ್ಚಳ ಭೀತಿ

ದುರಂತದಲ್ಲಿ ಮೃತಪಟ್ಟವರನ್ನು ಸುರುಳಿ (50 ವರ್ಷ), ಸುಬ್ಬುಲಕ್ಷ್ಮೀ (45 ವರ್ಷ), ಮರಿಯಮ್ಮಾಳ್ (50 ವರ್ಷ), ಮಣಿಮುರುಗನ್ (28 ವರ್ಷ), ರಾಜಶೇಖರ್ (35 ವರ್ಷ) ಎಂದು ಗುರುತಿಸಲಾಗಿದೆ. ಇವರು ಮಾತ್ರವಲ್ಲದೆ ಒಂದು ಹೆಣ್ಣು ಮಗು ಕೂಡ ಮೃತಪಟ್ಟಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಇಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 am, Fri, 13 December 24

ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಹಿಮಾಲಯದಲ್ಲಿ ಸಿಕ್ಕಿ ಬಿದ್ದ ಕಂದು ಕರಡಿಯನ್ನು ರಕ್ಷಿಸಿದ ಭಾರತೀಯ ಸೈನಿಕರು
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಮಾತಿಗೆ ಅಡ್ಡಿಪಡಿಸುತ್ತಿದ್ದ ರಾಯರೆಡ್ಡಿಯವರಿಗೆ ಸುಮ್ಮನಿರಲು ಹೇಳಿದ ಯತ್ನಾಳ್
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಗೋಡೆ ಬಳಿ ಹೋಗಿ ಅಳುತ್ತಿರುವ ಹನುಮಂತ; ಬಿಗ್ ಬಾಸ್​ ಮನೆಯಲ್ಲಿ ಏನಾಯ್ತು?
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ಮಂತ್ರಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ಶಾಸಕರು ನಿಲ್ಲೋದ್ಯಾಕೆ? ಯತ್ನಾ
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ವಿರೋಧಫಕ್ಷದವರು ಸಭಾತ್ಯಾಗ ಮಾಡೋದು ವಾಡಿಕೆ, ಆದರೆ ಇಲ್ಲಿ ಸಿಎಂ!
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಎಲ್ಲರ ಆಟಕ್ಕೆ ಅಡ್ಡಗಾಲು ಹಾಕಿದ ಮಂಜು, ಗೌತಮಿ ಫುಲ್ ಗರಂ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸಿಎಂ ಕರೆದಿರುವ ವಿಷಯ ಹೇಳಿದಾಗ ಸಿಸಿ ಪಾಟೀಲ್ ಕುಂಟುನೆಪ ಹೇಳಿದರು: ಸಚಿವೆ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ
ಸ್ವಾಮೀಜಿ ಬಿಜೆಪಿಯವರಾ ಅಂತ ಕೇಳುತ್ತಿರೋದು ಹಾಸ್ಯಾಸ್ಪದ: ಅಶೋಕ