ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಗಾಂಧಿ ಮತ್ತು ನೆಹರು ಹೆಸರು ಸೂಚಿಸಿದ ಎಂ.ಕೆ ಸ್ಟಾಲಿನ್
ಎಂ.ಕೆ ಸ್ಟಾಲಿನ್ ಅವರು ಮುನ್ಸಿಪಲ್ ಆಡಳಿತ ಸಚಿವರಾಗಿ ಹಾಗೂ ನಗರ ಮತ್ತು ನೀರು ಸರಬರಾಜಿನ ಉಸ್ತುವಾರಿ ಸಚಿವರಾಗಿ ಕೆ.ಎನ್ ನೆಹರೂ ಅವರ ಹೆಸರನ್ನು ಸೂಚಿಸಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಮತ್ತೋರ್ವ ಮಂತ್ರಿ ಆರ್. ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ದೆಹಲಿ: ಎಂ.ಕೆ ಸ್ಟಾಲಿನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಮೇ 7ರಂದು (ಶುಕ್ರವಾರ) ಪ್ರಮಾಣವಚನ ಸ್ವೀಕರಿಸಲು ಸಜ್ಜಾಗುತ್ತಿದ್ದಂತೆಯೇ, ಸಚಿವ ಸಂಪುಟದಲ್ಲಿ ಗಾಂಧಿ ಅವರ ಜೊತೆಗೆ ನೆಹರೂ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸ್ಟಾಲಿನ್ ಘೋಷಿಸಿದ ನೂತನ ಕ್ಯಾಬಿನೇಟ್ನ 34 ಸದಸ್ಯರಲ್ಲಿ ಇದೀಗ ಗಾಂಧಿ ಮತ್ತು ನೆಹರೂ ಅವರ ಹೆಸರೂ ಕೇಳಿ ಬಂದಿದೆ.
ಮುನ್ಸಿಪಲ್ ಆಡಳಿತ ಸಚಿವರಾಗಿ ಹಾಗೂ ನಗರ ಮತ್ತು ನೀರು ಸರಬರಾಜಿನ ಉಸ್ತುವಾರಿ ಸಚಿವರಾಗಿ ಕೆ.ಎನ್ ನೆಹರೂ ಅವರ ಹೆಸರನ್ನು ಸ್ಟಾಲಿನ್ ಸೂಚಿಸಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಮತ್ತೋರ್ವ ಮಂತ್ರಿ ಆರ್. ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಆರ್. ಗಾಂಧಿ ಮತ್ತು ನೆಹರೂ ಅವರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳಿದ್ದು, ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ನ್ಯಾಯಾಲಯ ಈ ಕುರಿತಂತೆ ಆರೋಪಗಳನ್ನು ರದ್ದುಗೊಳಿಸಿದೆ. ಆರ್. ಗಾಂಧಿ ಅವರು ರಾಣಿಪೇಟೆ ಕ್ಷೇತ್ರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನಾಲ್ಕು ಬಾರಿ ಶಾಸಕರಾಗಿರುತ್ತಾರೆ. ಪಕ್ಷದ ಹಿರಿಯ ನಾಯಕ ಕೆ.ಎನ್ ನೆಹರೂ ಅವರು ತಿರುಚಿ ಪಶ್ಚಿಮ ಕ್ಚೇತ್ರದ ಶಾಸಕರಾಗಿದ್ದರು.
ಇದನ್ನೂ ಓದಿ: MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಪ್ರಮಾಣ ವಚನ ಸ್ವೀಕಾರ
Published On - 2:17 pm, Fri, 7 May 21