ಉತ್ತಮ ಅಂಕಗಳಿಸಿದ ಮೀಸಲು ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಬರುತ್ತಾರೆ: ಸುಪ್ರೀಂಕೋರ್ಟ್​ ತೀರ್ಪು

ಅಭ್ಯರ್ಥಿಗಳನ್ನು ಮೊದಲು ಅವರು ಪಡೆದಿರುವ ಅಂಕಗಳು ಮತ್ತು ಸಾಮಾನ್ಯ ವರ್ಗದಲ್ಲಿರುವ ಹುದ್ದೆಗಳಿಗೆ ಅನುಗುಣವಾಗಿ ವಿಂಗಡಿಸಬೇಕು. ನಂತರ ಬ್ಯಾಕ್​ಲಾಗ್​ ಹುದ್ದೆಗಳನ್ನು ಮೀಸಲು ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಉತ್ತಮ ಅಂಕಗಳಿಸಿದ ಮೀಸಲು ಅಭ್ಯರ್ಥಿಗಳು ಸಾಮಾನ್ಯ ವರ್ಗಕ್ಕೆ ಬರುತ್ತಾರೆ: ಸುಪ್ರೀಂಕೋರ್ಟ್​ ತೀರ್ಪು
ಸುಪ್ರೀಂ ಕೋರ್ಟ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Mar 07, 2021 | 8:26 PM

ಹಿಂದುಳಿದ ವರ್ಗದ ಅಭ್ಯರ್ಥಿಯು ಉತ್ತಮ ಅಂಕ ಗಳಿಸಿದರೆ ಅವರನ್ನು ಸಾಮಾನ್ಯ ವರ್ಗಕ್ಕೆ ಪರಿಗಣಿಸಲಾಗುತ್ತದೆ. ಮೀಸಲಾತಿ ವಿಭಾಗದಲ್ಲಿ ಹಿಂದುಳಿದ ವರ್ಗಗಳ ಇತರ ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ ಎಂದು ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ಕೆ.ಶೋಭನಾ ಮತ್ತು ತಮಿಳುನಾಡು ಸರ್ಕಾರದ ನಡುವಣ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕೃಷ್ಣ ಕೌಲ್ ನೇತೃತ್ವದ ನ್ಯಾಯಪೀಠವು ತಮಿಳುನಾಡು ಸರ್ಕಾರಿ ನೌಕರರ ಕಾಯ್ದೆ (2016) ಬಗ್ಗೆ ವಿಚಾರಣೆ ನಡೆಸುವ ವೇಳೆ ಮೇಲಿನಂತೆ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್​ ರಾಯ್ ನ್ಯಾಯಪೀಠದಲ್ಲಿದ್ದರು.

ಈ ಪ್ರಕರಣದ ಅರ್ಜಿದಾರರು ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಪೋಸ್ಟ್​ ಗ್ರಾಜುಯೇಟ್ ಅಸಿಸ್ಟೆಂಟ್ಸ್​ ಹುದ್ದೆಯ ಆಕಾಂಕ್ಷಿಯಾಗಿದ್ದರು. ‘ಅತಿ ಹಿಂದುಳಿದ ವರ್ಗಕ್ಕೆ (Most Backward Class – MBC) ಸೇರಿದ ಕೆಲವರು ಯಾವುದೇ ಮೀಸಲಾತಿ ಇಲ್ಲದೆ ಆಯ್ಕೆಯಾಗಿದ್ದಾರೆ. ಈ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದಲ್ಲಿ ಪರಿಗಣಿಸಿಲ್ಲ. ಅವರನ್ನು ಎಂಬಿಸಿ ವರ್ಗದಲ್ಲಿಯೇ ನೇಮಕ ಮಾಡಲಾಗಿದೆ. ಹೀಗಾಗಿಯೇ ನಮಗೆ ಅವಕಾಶ ತಪ್ಪಿಹೋಗಿದೆ ಎಂದು ಅರ್ಜಿದಾರರು ದೂರಿದ್ದರು.

ಅಭ್ಯರ್ಥಿಗಳನ್ನು ಮೊದಲು ಅವರು ಪಡೆದಿರುವ ಅಂಕಗಳು ಮತ್ತು ಸಾಮಾನ್ಯ ವರ್ಗದಲ್ಲಿರುವ ಹುದ್ದೆಗಳಿಗೆ ಅನುಗುಣವಾಗಿ ವಿಂಗಡಿಸಬೇಕು. ನಂತರ ಬ್ಯಾಕ್​ಲಾಗ್​ ಹುದ್ದೆಗಳನ್ನು ಮೀಸಲು ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು. ನಂತರ ವಿವಿಧ ಕೋಟಾಗಳ ಅನ್ವಯ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅರ್ಜಿದಾರರು ವಾದಿಸಿದ್ದರು.

ತಮಿಳುನಾಡು ಸರ್ಕಾರಿ ನೌಕರರ ಕಾಯ್ದೆಯ 27ನೇ (ಎಫ್) ವಿಧಿಯ ಪ್ರಕಾರ ಮೀಸಲು ಹುದ್ದೆಗಳು ನಿರ್ದಿಷ್ಟ ವರ್ಷದಲ್ಲಿ ಭರ್ತಿಯಾಗದಿದ್ದರೆ ಅದನ್ನು ಸಾಮಾನ್ಯ ವರ್ಗಗಳಿಗೆ ನೀಡುವ ಬದಲು ಮತ್ತೊಂದು ವರ್ಷಕ್ಕೆ ಮುಂದೂಡಲಾಗುತ್ತದೆ. ಆಗಲೂ ಹುದ್ದೆಗಳು ಭರ್ತಿಯಾಗದಿದ್ದರೆ ಇತರ ವರ್ಗಗಳಿಗೆ ಅಂಥ ಹುದ್ದೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಅಂತ ಸಂದರ್ಭದಲ್ಲಿ ಮೊದಲು ಬ್ಯಾಕ್​ಲಾಗ್ ಹುದ್ದೆಗಳನ್ನು, ನಂತರ ಸಾಮಾನ್ಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ವಿಚಾರಣೆ ವೇಳೆ ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ಅಂಕಗಳ ಆಧಾರದ ಮೇಲೆ ಆಯ್ಕೆಯಾದವರಿಗೆ 27ನೇ ವಿಧಿ ಅನ್ವಯಿಸುವುದಿಲ್ಲ. ಇದು ಕೇವಲ ಮೀಸಲಾತಿ ಹುದ್ದೆಗಳನ್ನು ತೀರ್ಮಾನಿಸುವ ಹಂತದಲ್ಲಿ ಅನ್ವಯವಾಗುತ್ತದೆ. ಗುರುತಿಸಿದ ಗುಂಪುಗಳ ಎರಡು ಪಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ಬ್ಯಾಕ್​ಲಾಗ್ ಪಟ್ಟಿ, ಮತ್ತೊಂದು ಸದ್ಯದ ಪಟ್ಟಿ. ಹೆಚ್ಚು ಅಂಕ ಪಡೆದು ಆಯ್ಕೆಯಾದ ಅಭ್ಯರ್ಥಿಗಳ ಹಿತಾಸಕ್ತಿಯು ಬ್ಯಾಕ್​ಲಾಗ್​ ಪಟ್ಟಿಯ ಅಭ್ಯರ್ಥಿಗಳ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದು ಹೇಳಿದರು.

ವಾದವನ್ನು ಆಲಿಸಿದ ನಂತರ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘27 (ಎಫ್) ವಿಧಿಯು ಒಂದು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಟ್ಟಿದ್ದ ಹುದ್ದೆಗಳನ್ನು ಭರ್ತಿ ಮಾಡಲು ಆಗದಿದ್ದರೆ, ಅಂಥ ಹುದ್ದೆಗಳನ್ನು ಬ್ಯಾಕ್​ಲಾಗ್​ ಎಂದು ಪರಿಗಣಿಸಬೇಕು. ಈ ಹಿಂದೆ ನೀಡಿರುವ ಹಲವು ತೀರ್ಪುಗಳ ಅನ್ವಯ, ಉತ್ತಮ ಅಂಕಗಳಿಸಿದ ಅಭ್ಯರ್ಥಿಗಳು ಸಾಮಾನ್ಯ ವರ್ಗದ ಜೊತೆಗೆ ನೇಮಕಗೊಳ್ಳಬೇಕು ತಿಳಿಸಿತು.

‘ತಮಿಳುನಾಡು ಉದ್ಯೋಗ ಕಾಯ್ದೆಯ 27 (ಎಫ್) ವಿಧಿಯನ್ನು ಮೀಸಲಾತಿಗೆ ಅನ್ವಯಿಸಬೇಕು. ಸಾಮಾನ್ಯ ಅಭ್ಯರ್ಥಿಗಳ ಪಟ್ಟಿ ಅಥವಾ ಸಾಮಾನ್ಯ ಅಭ್ಯರ್ಥಿಗಳಾಗಿ ಮಾರ್ಪಟ್ಟವರಿಗೆ ಸಿಗುವ ಹುದ್ದೆಗಳೊಂದಿಗೆ ಈ ವಿಧಿಗೆ ಯಾವುದೇ ಸಂಬಂಧವಿಲ್ಲ. ಹೆಚ್ಚು ಅಂಕಪಡೆದವರು ಸಹಜವಾಗಿಯೇ ಸಾಮಾನ್ಯ ವರ್ಗದ ವ್ಯಾಪ್ತಿಗೆ ಬರುತ್ತಾರೆ. ಸಾಮಾನ್ಯ ಹುದ್ದೆಗಳು ಭರ್ತಿಯಾದ ನಂತರವೇ ಮೀಸಲು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭವಾಗುತ್ತದೆ’ ಎಂದು ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.

ಅತ್ಯಂತ ಹಿಂದುಳಿದ ಅಥವಾ ಅನುಸೂಚಿತ ವರ್ಗಕ್ಕೆ (Most Backward Class / Denotified Category – MBC/DNC) ಸೇರಿದ ಅಭ್ಯರ್ಥಿಗಳ ಸಂಖ್ಯೆಯ ಹೆಚ್ಚಳವು ಇತರ ವರ್ಗಗಳ ಮೀಸಲಾತಿ ಹುದ್ದೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಸಂವಿಧಾನದ ಯಾವುದೇ ಆಶಯವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿತು. ತೀರ್ಪಿನ ಪೂರ್ಣ ಪಠ್ಯ ಓದಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿ ನೇಮಕಕ್ಕೆ ಸುಪ್ರೀಂಕೋರ್ಟ್​ನ ಕೊಲಿಜಿಯಂ ಶಿಫಾರಸು

ಇದನ್ನೂ ಓದಿ: ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸೇನಾಧಿಕಾರಿ ವಿಚ್ಛೇದನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಉಲ್ಲೇಖ​

Published On - 8:16 pm, Sun, 7 March 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು