ಐಸ್​ಕ್ರೀಂ ತಿನ್ನಿಸಲು ಮೂವರು ಮಕ್ಕಳನ್ನು ಬೈಕ್​ನಲ್ಲಿ ಕರೆದೊಯ್ಯುತ್ತಿದ್ದಾಗ, ಪಿಕ್​ಅಪ್​ ವ್ಯಾನ್ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ

ಮಕ್ಕಳಿಗೆ ಐಸ್​ಕ್ರೀಂ ಕೊಡಿಸಬೇಕೆಂದು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುತ್ತಿರುವಾಗ ಪಿಕ್​ಅಪ್​ ವ್ಯಾನ್​ ಗುದ್ದಿ ನಾಲ್ವರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನಲ್ಲಿ ರಸ್ತೆಯ ಎದುರುಗಡೆಯಿಂದ ವೇಗವಾಗಿ ಬಂದ ಪಿಕಪ್ ವ್ಯಾನ್ ಅವರ ಮೇಲೆ ಹರಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.

ಐಸ್​ಕ್ರೀಂ ತಿನ್ನಿಸಲು ಮೂವರು ಮಕ್ಕಳನ್ನು ಬೈಕ್​ನಲ್ಲಿ ಕರೆದೊಯ್ಯುತ್ತಿದ್ದಾಗ, ಪಿಕ್​ಅಪ್​ ವ್ಯಾನ್ ಡಿಕ್ಕಿ, ನಾಲ್ವರಿಗೆ ಗಂಭೀರ ಗಾಯ
ಅಪಘಾತ
Image Credit source: India Today

Updated on: Aug 21, 2023 | 8:48 AM

ಮಕ್ಕಳಿಗೆ ಐಸ್​ಕ್ರೀಂ ಕೊಡಿಸಬೇಕೆಂದು ಬೈಕ್​ನಲ್ಲಿ ಕೂರಿಸಿಕೊಂಡು ಹೋಗುತ್ತಿರುವಾಗ ಪಿಕ್​ಅಪ್​ ವ್ಯಾನ್​ ಗುದ್ದಿ ನಾಲ್ವರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನಲ್ಲಿ ರಸ್ತೆಯ ಎದುರುಗಡೆಯಿಂದ ವೇಗವಾಗಿ ಬಂದ ಪಿಕಪ್ ವ್ಯಾನ್ ಅವರ ಮೇಲೆ ಹರಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.

ಐಸ್​ಕ್ರೈಂ ಶಾಪ್ ಎದುರು ಬೈಕ್ ನಿಲ್ಲಿಸಿ ಇಬ್ಬರು ಮಕ್ಕಳು ಇಳಿದಿದ್ದಾರೆ, ಇನ್ನಿಬ್ಬರು ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಪಿಕ್ ಅಪ್ ವ್ಯಾನ್ ಅವರ ಮೇಲೆ ಹರಿದಿದೆ.

ವಾಹನದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ, ತಂದೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ತನ್ನ ಬೈಕ್ ಅನ್ನು ನಿಲ್ಲಿಸುತ್ತಿರುವುದು ಕಂಡುಬಂದಿದೆ. ಅವರನ್ನು ಮೀನಾಕ್ಷಿ ಆಸ್ಪತ್ರೆ ಬಳಿಯ ಐಸ್ ಕ್ರೀಮ್ ಪಾರ್ಲರ್​ಗೆ ಕರೆದುಕೊಂಡು ಹೋಗಬೇಕಿತ್ತು.

ಮತ್ತಷ್ಟು ಓದಿ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಚಾಲಕ, ಇಬ್ಬರು ಸಾವು

ಅವರು ತಮ್ಮ ಮಕ್ಕಳನ್ನು ಬೈಕ್‌ನಿಂದ ಇಳಿಸಲು ಸಹಾಯ ಮಾಡುತ್ತಿದ್ದಾಗ, ಮೆಟ್ಟುಪಾಳ್ಯಂನಿಂದ ಕರಾಮಡೈ ಕಡೆಗೆ ವೇಗವಾಗಿ ಬಂದ ಪಿಕಪ್ ವ್ಯಾನ್ ರಸ್ತೆಯ ಎದುರು ಬದಿಗೆ ನುಗ್ಗಿ ಟ್ರಾಫಿಕ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಘರ್ಷಣೆಯ ನಂತರ, ಹಲವಾರು ದಾರಿಹೋಕರು ಸಂತ್ರಸ್ತರಿಗೆ ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:47 am, Mon, 21 August 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us