ಚೆನ್ನೈ: ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ತಮಿಳುನಾಡಿನ 30 ರಸ್ತೆಗಳು ನೀರಿನಿಂದ ಆವೃತವಾಗಿದ್ದು, ಈಗಾಗಲೇ 14 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, 10 ಸಬ್ವೇಗಳನ್ನು ಬಂದ್ ಮಾಡಲಾಗಿದೆ. ಮಳೆ ನೀರಿನಿಂದ ಆವೃತವಾಗಿರುವ ಊರುಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು 75,000 ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಹಾಯಕ್ಕೆ ನಿಂತಿದ್ದಾರೆ.
ಚೆನ್ನೈನಲ್ಲಿ ಮಳೆಯಿಂದ 523 ಸ್ಥಳಗಳು ನೀರಿನಿಂದ ಸಂಪೂರ್ಣವಾಗಿ ಆವೃತವಾಗಿವೆ. ಅವುಗಳಲ್ಲಿ 68 ಸ್ಥಳಗಳಲ್ಲಿ ತುಂಬಿದ್ದ ಪ್ರವಾಹದ ನೀರನ್ನು ಕ್ಲೀನ್ ಮಾಡಲಾಗಿದೆ. 267 ಮರಗಳು ಬುಡಸಮೇತ ಉರುಳಿ ಬಿದ್ದಿದೆ. ಚೆನ್ನೈ ಪೊಲೀಸರು ಇದುವರೆಗೂ 4,810 ಜನರನ್ನು ರಕ್ಷಿಸಿದ್ದಾರೆ. ತಮಿಳುನಾಡಿನ ಬಹುತೇಕ ಡ್ಯಾಂಗಳು ಮಳೆಯಿಂದಾಗಿ ಭರ್ತಿಯಾಗಿವೆ. ಭಾರತೀಯ ಕರಾವಳಿ ಪಡೆಯ 5 ತಂಡಗಳನ್ನು ಚೆನ್ನೈನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ.
ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಮುನ್ನೆಚ್ಚರಿಕೆ ನೀಡಲಾಗಿದ್ದು, ಶುಕ್ರವಾರವೂ ರಾಜ್ಯದ ಕೆಲವು ಭಾಗಗಳಲ್ಲಿ ನಿರಂತರ ಮಳೆ ಮುಂದುವರಿದಿದೆ. ತಮಿಳುನಾಡಿನಲ್ಲಿ ಮಳೆ-ಸಂಬಂಧಿತ ಘಟನೆಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಬೆಳೆದ ಬೆಳೆಗಳು ಮುಳುಗಿ, ಮರಗಳು ನೆಲಕ್ಕುರುಳಿದ್ದಾವೆ. 1,000ಕ್ಕೂ ಹೆಚ್ಚು ವಸಾಹತುಗಳು, ಬಹುತೇಕ ಗುಡಿಸಲುಗಳು ರಾಜ್ಯದಾದ್ಯಂತ ಹಾನಿಗೊಳಗಾದವು. ನಡೆಯುತ್ತಿರುವ ಮುಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೆ ರಾಜ್ಯಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ 157 ಜಾನುವಾರುಗಳು ಸಾವನ್ನಪ್ಪಿವೆ, 1,146 ಗುಡಿಸಲುಗಳು ಮತ್ತು 237 ಮನೆಗಳು ಹಾನಿಗೊಳಗಾಗಿವೆ.
#WATCH Waterlogging persists in Korattur area following heavy rainfall in #Chennai #TamilNadu pic.twitter.com/xN3tEwquAh
— ANI (@ANI) November 12, 2021
ಗುರುವಾರ ತಡರಾತ್ರಿವರೆಗೂ ಚೆನ್ನೈನ ಹಲವು ಭಾಗಗಳು ನೀರಿನಿಂದ ಮುಳುಗಿದ್ದು, 75,000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ನಾಗರಿಕರಿಗೆ ಸಹಾಯ ಮಾಡಲು ಯುದ್ಧದ ಹೆಜ್ಜೆಯಲ್ಲಿದ್ದಾರೆ. ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಉಪನಗರಗಳನ್ನು ವರ್ಚುವಲ್, ದೊಡ್ಡ ಜಲಮೂಲವಾಗಿ ಮಾರ್ಪಡಿಸಿದೆ. ಚೆನ್ನೈ ಕಾರ್ಪೊರೇಷನ್ ಅಧಿಕಾರಿಗಳು ಒಟ್ಟು 6 ಲಕ್ಷಕ್ಕೂ ಹೆಚ್ಚು ಆಹಾರ ಪ್ಯಾಕೆಟ್‌ಗಳನ್ನು ಪೀಡಿತ ಪ್ರದೇಶಗಳಲ್ಲಿ ಜನರಿಗೆ ವಿತರಿಸಿದರು.
Rescue Operation of Trapped Victims by Team NDRF from Thirupporur and Varadharajapuram Areas of Tamil Nadu #NorthEastMonsoon #ChennaiRains #chennaifloods @NDRFHQ @satyaprad1 @mkstalin @chennaicorp @Chengalpattu01@ANI @pibchennai @PIB_India @DDIndialive @tnsdma pic.twitter.com/KtpLNYscHH
— 4 NDRF ARAKKONAM (@04NDRF) November 11, 2021
ಸಿಎಂ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಸಭೆ:
ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡಿನ ಮಳೆಯ ಪರಿಸ್ಥಿತಿ ಬಗ್ಗೆ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ. ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ವಿ. ಇರೈ ಅನ್ಬು ನೇತೃತ್ವದಲ್ಲಿ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ವಿಶೇಷವಾಗಿ ನಿಯೋಜಿತವಾಗಿರುವ ಅಧಿಕಾರಿಗಳಿಗೆ ಪರಿಹಾರ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಪರಿಹಾರ ಶಿಬಿರಗಳಲ್ಲಿ ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಿಎಂ ಸ್ಟಾಲಿನ್ ಸೂಚಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು ಬೆಳೆ ನಷ್ಟವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
Tamil Nadu | Stagnant water being pumped out at T-Nagar in Chennai, following incessant rainfall in the region as a result of cyclonic circulation in Bay of Bengal pic.twitter.com/Yd4BO6Y6X0
— ANI (@ANI) November 12, 2021
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವಾಗಿರುವುದರಿಂದ ಇಂದು ತಮಿಳುನಾಡಿನಲ್ಲಿ ಕೊಂಚ ಮಳೆ ಕಡಿಮೆಯಾಗಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದ್ದ ರೆಡ್ ಅಲರ್ಟ್ ಹಿಂಪಡೆಯಲಾಗಿದೆ. ಇಂದು ನೀಲಗಿರಿ, ಕೊಯಮತ್ತೂರು ಮತ್ತು ಕನ್ಯಾಕುಮಾರಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಪ್ರದೇಶದಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇಂದು ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.
ಇದನ್ನೂ ಓದಿ: Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ
Tamil Nadu Rains: ತಮಿಳುನಾಡಿನಲ್ಲಿ ಇಂದು ಸಂಜೆ ಭರ್ಜರಿ ಮಳೆ ಸಾಧ್ಯತೆ; ಚೆನ್ನೈನಲ್ಲಿ ರೆಡ್ ಅಲರ್ಟ್