Terrorists Encounter: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಯಿಂದ 3 ಉಗ್ರರ ಎನ್‌ಕೌಂಟರ್
Jammu Kashmir: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 3 ಉಗ್ರರನ್ನು ಸದೆಬಡಿಯಲಾಗಿದೆ. ಶ್ರೀನಗರದ ಬೆಮಿನಾದ ಹಮ್ದನಿಯಾ ಕಾಲೋನಿ ಪ್ರದೇಶದಲ್ಲಿ ಸಂಜೆ ಶ್ರೀನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಶ್ರೀನಗರದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಮುಜಾಹಿದ್ದೀನ್ ಗಜ್ವಾತುಲ್ ಹಿಂದ್‌ಗೆ ಸೇರಿದ ಖ್ರೂ ಪುಲ್ವಾಮಾದ ಅಮೀರ್ ರಿಯಾಜ್ ಎಂದು ಗುರುತಿಸಲಾದ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಈತ ಲೆಥ್‌ಪೋರಾ ಭಯೋತ್ಪಾದಕ ದಾಳಿಯ ಆರೋಪಿಗಳಲ್ಲಿ ಒಬ್ಬನ ಸಂಬಂಧಿಯಾಗಿದ್ದು, ಫಿದಾಯಿನ್ ದಾಳಿಯನ್ನು ನಡೆಸಲು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗರದಲ್ಲಿ ದಾಳಿ ನಡೆಸುವ ಮೊದಲು ಉಗ್ರರು ವೀಡಿಯೊವನ್ನು ಚಿತ್ರೀಕರಿಸಿದ್ದರು. ಆದರೆ ಅದಕ್ಕೂ ಮೊದಲು ಭದ್ರತಾ ಪಡೆಗಳು ಆ ದಾಳಿಯನ್ನು ತಟಸ್ಥಗೊಳಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 3 ಉಗ್ರರನ್ನು ಸದೆಬಡಿಯಲಾಗಿದೆ. ಶ್ರೀನಗರದ ಬೆಮಿನಾದ ಹಮ್ದನಿಯಾ ಕಾಲೋನಿ ಪ್ರದೇಶದಲ್ಲಿ ಸಂಜೆ ಶ್ರೀನಗರದಲ್ಲಿ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಎನ್‌ಕೌಂಟರ್‌ನಲ್ಲಿ “ಒಬ್ಬ ಅಪರಿಚಿತ ಭಯೋತ್ಪಾದಕನನ್ನು ಕೊಲ್ಲಲಾಗಿದೆ” ಎಂದು ಕಾಶ್ಮೀರ ವಲಯ ಪೊಲೀಸರು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಉಗ್ರರಿಂದ ಎಕೆ ರೈಫಲ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ, ಶೋಧ ಕಾರ್ಯಾಚರಣೆ ನಡೆಯುತ್ತಿದೆ.
Terrorist killed in Srinagar encounter identified as Aamir Riyaz of Khrew,Pulwama affiliated with proscribed terror outfit Mujahideen Gazwatul Hind. He was relative of an of the accused of Lethpora terror attack & was assigned to carry out fidayeen attack: IGP Kashmir Vijay Kumar pic.twitter.com/VtjDhpiQxp
— ANI (@ANI) November 12, 2021
ಓರ್ವ ಮೃತ ಭಯೋತ್ಪಾದಕನನ್ನು ಅಮೀರ್ ರಿಯಾಜ್ ಎಂದು ಗುರುತಿಸಲಾಗಿದೆ. ರಿಯಾಜ್ ಪುಲ್ವಾಮಾದ ಖ್ರೂ ಪ್ರದೇಶದವನು ಎಂದು ಪೊಲೀಸರು ತಿಳಿಸಿದ್ದಾರೆ. ಆತ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಮುಜಾಹಿದ್ದೀನ್ ಗಜ್ವಾತುಲ್ ಹಿಂದ್‌ನೊಂದಿಗೆ ಸಂಬಂಧ ಹೊಂದಿದ್ದನು. ಅವನು ಲೆಥ್‌ಪೋರಾ ಭಯೋತ್ಪಾದನಾ ದಾಳಿಯ ಆರೋಪಿಗಳಲ್ಲಿ ಒಬ್ಬನ ಸಂಬಂಧಿಯಾಗಿದ್ದನು ಮತ್ತು ಫಿದಾಯೀನ್ ದಾಳಿಯನ್ನು ನಡೆಸಲು ನಿಯೋಜಿಸಲಾಗಿತ್ತು ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.
ಇದನ್ನೂ ಓದಿ: Jammu Kashmir: ಜಮ್ಮು ಕಾಶ್ಮೀರದ ಎಲ್ಒಸಿ ಬಳಿ ಗಣಿಸ್ಫೋಟದಲ್ಲಿ ಇಬ್ಬರು ಸೈನಿಕರ ಸಾವು
Terrorists Encounter: ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ ಸೈನಿಕರು; ರಾಜೌರಿಯಲ್ಲಿ 6 ಎಲ್ಇಟಿ ಉಗ್ರರ ಹತ್ಯೆ