Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್

ನುಸ್ರತ್ ಜಹಾನ್ ಅವರು ಗರ್ಭಿಣಿ ಎಂದು ಹೇಳಿದಾಗ ಮಗುವನ್ನು ಉಳಿಸಿಕೊಳ್ಳಬೇಕೆನ್ನುವುದು ನಮ್ಮಿಬ್ಬರ ನಿರ್ಧಾರವಾಗಿತ್ತು ಎಂದು ಯಶ್ ದಾಸ್‌ಗುಪ್ತಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.

Nusrat Jahan ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ; ಮದುವೆ ವಿವಾದದ ಬಗ್ಗೆ ಮೌನ ಮುರಿದ ನುಸ್ರತ್ ಜಹಾನ್
ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 12, 2021 | 12:49 PM

ದೆಹಲಿ: ನಟಿ-ರಾಜಕಾರಣಿ ನುಸ್ರತ್ ಜಹಾನ್ (Nusrat Jahan) ಮತ್ತು ಯಶ್ ದಾಸ್‌ಗುಪ್ತಾ (Yash Dasgupta)ಅವರು ಈಗಾಗಲೇ ಮದುವೆಯಾಗಿರುವ ಬಗ್ಗೆ ಇತ್ತೀಚೆಗೆ ಸುಳಿವು ನೀಡಿದ್ದಾರೆ. ಈ ದಂಪತಿಗೆ ಆಗಸ್ಟ್ ತಿಂಗಳಲ್ಲಿ ಮಗ ಹುಟ್ಟಿದ್ದು ಯಿಶಾನ್‌ (Yishaan) ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ ತಮ್ಮ ಸಂಬಂಧದ ಬಗ್ಗೆ ಇಬ್ಬರೂ ಮೌನವಹಿಸಿದ್ದರೂ ನಂತರ ಯಶ್ ಅವರೇ ಮಗುವಿನ ತಂದೆ ಎಂದು ಖಚಿತಪಡಿಸಿದರು. ನುಸ್ರತ್ ಮತ್ತು ಆಕೆಯ ಪತಿ ನಿಖಿಲ್ ಜೈನ್ (Nikhil Jain) ಕೆಲವು ತಿಂಗಳ ಹಿಂದೆ ಬೇರೆಯಾಗಿದ್ದರು. ಈ ವರ್ಷದ ಆರಂಭದಲ್ಲಿ ನುಸ್ರತ್ ಜಹಾನ್, ನಿಖಿಲ್ ಅವರೊಂದಿಗಿನ ವಿವಾಹವು ಭಾರತೀಯ ಕಾನೂನಿನ ಅಡಿಯಲ್ಲಿ ಮಾನ್ಯವಾಗಿಲ್ಲ ಎಂದು ಹೇಳಿದ್ದರು. ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರು 2019 ರಲ್ಲಿ ಟರ್ಕಿಯ ಬೋಡ್ರಮ್‌ನಲ್ಲಿ ಎರಡು ಬಾರಿ ವಿವಾಹ ಸಮಾರಂಭ ನಡೆಸಿದ್ದರು. ನಿಖಿನ್ ಜೈನ್ ನಿಂದ ದೂರವಾದ ನಂತರ ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತಾ ಅವರ ಪ್ರಣಯ ಆಗಾಗ ಸುದ್ದಿಯಾಗುತ್ತಿತ್ತು.  ತನ್ನ ಮದುವೆ ವಿಚಾರದಲ್ಲಿನ ವಿವಾದದ ಬಗ್ಗೆ ಕೇಳಿದಾಗ “ಅವರು ನನ್ನ ಮದುವೆಗೆ ಖರ್ಚು ಮಾಡಿಲ್ಲ, ಅವರು ಹೋಟೆಲ್ ಬಿಲ್‌ಗಳನ್ನು ಪಾವತಿಸಲಿಲ್ಲ. ಅವರಿಗೆ ನಾನು ಏನನ್ನೂ ಹೇಳಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ. ನನ್ನನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಈಗ ನಾನು ಅದನ್ನು ಸ್ಪಷ್ಟಪಡಿಸಿದ್ದೇನೆ ಎಂದು ಯಾರ ಹೆಸರನ್ನೂ ಹೇಳದೆ ನುಸ್ರತ್ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರನ್ನು ದೂಷಿಸುವುದು ಅಥವಾ ಇತರರನ್ನು ಕೆಟ್ಟದಾಗಿ ತೋರಿಸುವುದು ಸುಲಭ. ವಿವಾದದುದ್ದಕ್ಕೂ ತಾನು ಯಾರೊಬ್ಬರನ್ನೂ ಅವಮಾನ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ನುಸ್ರತ್ ಜಹಾನ್ ಅವರು ಗರ್ಭಿಣಿ ಎಂದು ಹೇಳಿದಾಗ ಮಗುವನ್ನು ಉಳಿಸಿಕೊಳ್ಳಬೇಕೆನ್ನುವುದು ನಮ್ಮಿಬ್ಬರ ನಿರ್ಧಾರವಾಗಿತ್ತು ಎಂದು ಯಶ್ ದಾಸ್‌ಗುಪ್ತಾ ಇತ್ತೀಚೆಗೆ ಬಹಿರಂಗಪಡಿಸಿದ್ದರು.ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ನೊಂದಿಗೆ ಮಾತನಾಡಿದ ಯಶ್ ನಾನು ಮಗು ಬೇಕು ಅಂದಿದ್ದೆ. ಆದರೆ ಅಂತಿಮ ನಿರ್ಧಾರವನ್ನು ಅವಳಿಗೆ ಬಿಟ್ಟಿದ್ದೆ. “ಅವಳು ಗರ್ಭಿಣಿ ಎಂದು ನನ್ನಲ್ಲಿ ಹೇಳಿದಾಗ ನಾನು ಹಿಂಜರಿಯಲಿಲ್ಲ. ಅವಳು ಅದರೊಂದಿಗೆ ಮುಂದುವರಿಯಲು ಬಯಸುತ್ತೀದ್ದಾಳಾ ಎಂದು ನಾನು ಅವಳನ್ನು ಕೇಳಿದೆ. ಇದು ನನ್ನ ದೇಹವಲ್ಲ – ಇದು ಅವಳದು. ಅವಳು ನಿರ್ಧರಿಸಬೇಕು. ನಾನು ಅವಳ ನಿರ್ಧಾರಗಳನ್ನು ಅಲ್ಲಗೆಳೆಯುವುದಿಲ್ಲ. ನಾನು ಮಗುವನ್ನು ಹೊಂದಲು ಬಯಸಿದ್ದೆ. ಆದರೆ ನನ್ನ ನಿರ್ಧಾರವನ್ನು ಅವಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಾಗಲಿಲ್ಲ. ನೀವು ಮಗುವಿಗೆ ಏನೂ ಮಾಡಲು ಬಯಸದಿದ್ದರೆ, ಪರವಾಗಿಲ್ಲ, ನಾನು ಮಗುವನ್ನು ಉಳಿಸಿಕೊಳ್ಳುತ್ತೇನೆ ಎಂದು ಅವಳು ನನಗೆ ಹೇಳಿದ್ದರು,” ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ: ಯಶ್​ ದಾಸ್​ಗುಪ್ತಾಗೆ ಪ್ರೀತಿಯಿಂದ ಗಂಡ ಎಂದ ನಟಿ ನುಸ್ರತ್​; ಬರ್ತ್​ಡೇ ಫೋಟೋ ವೈರಲ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ