
ತತ್ಕಾಲ್ (Tatkal) ಟಿಕೆಟ್ ಬುಕಿಂಗ್ ಎಂಬುದು ಭಾರತೀಯ ರೈಲ್ವೆಯಲ್ಲಿ (Indian Railway) ಕೊನೆಯ ಕ್ಷಣದ ಪ್ರಯಾಣಕ್ಕಾಗಿ ಅಂದರೆ ತುರ್ತಾಗಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಲು ವಿನ್ಯಾಸಗೊಳಿಸಲಾದ ಪ್ರೀಮಿಯಂ ಕೋಟಾವಾಗಿದೆ. ತಕ್ಷಣದ ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ತತ್ಕಾಲ್ ಟಿಕೆಟ್ ಬುಕಿಂಗ್ (tatkal train tickets booking) ವಿಧಾನವನ್ನು ಜಾರಿಗೆ ತರಲಾಗಿದೆ. ಇದೀಗ ಭಾರತೀಯ ರೈಲ್ವೆ ಮೇ 25 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಬದಲಾವಣೆ ಪಾರದರ್ಶಕತೆಯನ್ನು ಹೆಚ್ಚಿಸುವ, ದುರುಪಯೋಗವನ್ನು ಕಡಿಮೆ ಮಾಡುವ ಹಾಗೂ ನಿಜವಾದ ಪ್ರಯಾಣಿಕರು ತಾವು ಕಾಯ್ದಿರಿಸಿದ ಸೀಟುಗಳನ್ನು ಪಡೆಯುವ ಸಾಧ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಮತ್ತು ರೈಲು ಹೊರಡುವ ಒಂದು ಗಂಟೆ ಮೊದಲು ಬುಕಿಂಗ್ ಮುಕ್ತಾಯವಾಗುತ್ತದೆ.
ಗಮನಿಸಿ: ಈ ಸಮಯ IRCTC ಮತ್ತು ಅಧಿಕೃತ ಏಜೆಂಟ್‌ಗಳ ಮೂಲಕ ಆನ್‌ಲೈನ್ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.
ಇದನ್ನೂ ಓದಿ: ತುಳಸಿ – ಶುಂಠಿ ಚಹಾ, ತಣ್ಣನೆಯ ಮಜ್ಜಿಗೆ ಈ ಬೇಸಿಗೆಯಲ್ಲಿ ಬರುವ ತಲೆನೋವಿಗೆ ರಾಮಬಾಣ
ದುರುಪಯೋಗವನ್ನು ತಡೆಯಲು ಮತ್ತು ಬುಕಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಲವೊಂದು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.
ಈ ಹೊಸ ನಿಯಮ ನಿಜವಾದ ಪ್ರಯಾಣಿಕರು ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದೆಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಇನ್ನೂ ಅನುಮಾನಾಸ್ಪದ ಖಾತೆಗಳನ್ನು ನಿರ್ಬಂಧಿಸಲು, ಒಂದೇ ಐಪಿ ವಿಳಾಸದಿಂದ ಬುಕಿಂಗ್ ಮಾಡಲು, ಬಾಟ್ ಮತ್ತು ಹೈ-ಫ್ರೀಕ್ವೆನ್ಸಿ ಲಾಗಿನ್‌ಗಳನ್ನು ಪತ್ತೆ ಹಚ್ಚಲು ಭಾರತೀಯ ರೈಲ್ವೆ ಎಐ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಪರಿಚಯಿಸಿದೆ.
ಸಾಮಾನ್ಯವಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡಿದ ನಂತರ ಅದನ್ನು ರದ್ದುಗೊಳಿಸಿದರೆ ಮರು ಪಾವತಿ ದೊರೆಯುವುದಿಲ್ಲ. ಅಂದರೆ ಕನ್‌ಫರ್ಮ್ ಆದ ತತ್ಕಾಲ್ ಟಿಕೆಟ್‌ಗೆ ಬುಕಿಂಗ್ ಮಾಡಿದ ನಂತರ ಮರು ಪಾವತಿಗೆ ಅವಕಾಶವಿಲ್ಲ. ವೇಯ್ಟ್‌ಲಿಸ್ಟ್ ಅಥವಾ ತುರ್ತು ಸಮಯದಲ್ಲಿ ರೈಲ್ವೆ ನಿಯಮಗಳ ಪ್ರಕಾರ ಕ್ಲರ್ಕೇಜ್ ಹೊರತು ಪಡಿಸಿ ಪೂರ್ಣ ಮರು ಪಾವತಿಗೆ ಅವಕಾಶವಿದೆ. ರೈಲ್ವೆ ರದ್ದುಗೊಳಿಸಿದ ಟಿಕೆಟ್‌ಗೆ ತತ್ಕಾಲ್ ಶುಲ್ಕಗಳು ಸೇರಿದಂತೆ ಪೂರ್ಣ ಮರು ಪಾವತಿ ಲಭ್ಯವಿದೆ.
ಹೊಸ ನಿಯಮಗಳ ಅಡಿಯಲ್ಲಿ ಕನ್‌ಫರ್ಮ್ ತತ್ಕಾಲ್ ಟಿಕೆಟ್ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ತ್ವರಿತ ಸಲಹೆಗಳು ಇಲ್ಲಿವೆ:
ಮೇ 25 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಮುಂಬರುವ ಬದಲಾವಣೆಗಳು ಹೆಚ್ಚಿನ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಸಲುವಾಗಿ ತೆಗೆದುಕೊಂಡ ಕ್ರಮವಾಗಿದೆ. ಉಲ್ಲೇಖಿಸಲಾದ ಬದಲಾವಣೆಗಳು ಭಾರತೀಯ ರೈಲ್ವೆಯ ಅಧಿಕೃತ ಸುತ್ತೋಲೆಗಳು ಮತ್ತು ಪ್ರಕಟಣೆಗಳನ್ನು ಆಧರಿಸಿವೆ. ಬುಕಿಂಗ್ ಮಾಡುವ ಮೊದಲು ಪ್ರಯಾಣಿಕರು ಅಧಿಕೃತ IRCTC ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Fri, 25 April 25