Chandra Babu Naidu: ಎ1 ಆಗಿ ಚಂದ್ರಬಾಬು ನಾಯ್ಡುಗೆ ಕಾಡುತ್ತಿರುವ ಮತ್ತೊಂದು ಪ್ರಕರಣ! ಅದರ ವಿವರ ಇಲ್ಲಿದೆ

ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್‌ಎಸ್‌ಡಿಸಿ) ಪ್ರಕರಣದಲ್ಲಿ ಚಂದ್ರಬಾಬು ನಾಯ್ಡುಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನು, ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ವಿಜಯನಗರದ ರಾಮತೀರ್ಥಂ ದೇವಸ್ಥಾನದಲ್ಲಿ ವೈಎಸ್‌ಆರ್‌ಸಿಪಿ ನಾಯಕರ ಮೇಲಿನ ದಾಳಿ ಮತ್ತು ಕೊಲೆ ಯತ್ನ ಪ್ರಕರಣಗಳು ಸೇರಿವೆ. ಅನ್ನಮಯ್ಯ ಜಿಲ್ಲೆಯ ಅಂಗಲ್ಲು ಗ್ರಾಮದಲ್ಲಿ ಘರ್ಷಣೆ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಆರೋಪವೂ ಕೇಳಿಬಂದಿದೆ.

Chandra Babu Naidu: ಎ1 ಆಗಿ ಚಂದ್ರಬಾಬು ನಾಯ್ಡುಗೆ ಕಾಡುತ್ತಿರುವ ಮತ್ತೊಂದು ಪ್ರಕರಣ! ಅದರ ವಿವರ ಇಲ್ಲಿದೆ
ಚಂದ್ರಬಾಬು ನಾಯ್ಡುಗೆ ಕಾಡುತ್ತಿರುವ ಮತ್ತೊಂದು ಪ್ರಕರಣ!
Follow us
|

Updated on: Sep 14, 2023 | 1:02 PM

Chandra Babu Naidu arrest: ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಟಿಡಿಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆಂದ್ರದಲ್ಲಿ ಅವರ ಬಂಧನವನ್ನು ವಿರೋಧಿಸಿ ಟಿಡಿಪಿ ಕಾರ್ಯಕರ್ತರು ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇನ್ನೊಂದೆಡೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು ಚಂದ್ರಬಾಬು ಅವರನ್ನು ಭೇಟಿ ಮಾಡಲಿದ್ದಾರೆ. ಪವನ್ ಕಲ್ಯಾಣ್ ಅವರೊಂದಿಗೆ ಟಿಡಿಪಿ ಶಾಸಕ ಬಾಲಕೃಷ್ಣ, ನಾರಾ ಲೋಕೇಶ್ ಅವರು ಚಂದ್ರಬಾಬು ಅವರನ್ನು ಭೇಟಿ ಮಾಡಲು ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ತೆರಳಿದ್ದಾರೆ. ಮಧ್ಯಾಹ್ನ 12:00 ಗಂಟೆಗೆ ಈ ಮೂವರೂ ರಾಜಮಂಡ್ರಿ ಕೇಂದ್ರ ಕಾರಾಗೃಹಕ್ಕೆ ತೆರಳಿ ಚಂದ್ರಬಾಬು ಅವರನ್ನು ಭೇಟಿಯಾಗಲಿದ್ದಾರೆ. ಈ ನಡುವೆ.. ಮತ್ತೊಂದು ಪ್ರಕರಣ ಚಂದ್ರಬಾಬು ಅವರನ್ನು ಕಾಡುತ್ತಿದೆ. ವಿವರಗಳನ್ನು ನೊಡುವುದಾದರೆ ಅಂಗಲ್ಲು ಮತ್ತು ಪುಂಗನೂರು ಗ್ರಾಮದಲ್ಲಿ ನಡೆದ ಗಲಭೆಗಳಲ್ಲಿ ನೂರಾರು ಟಿಡಿಪಿ ಮುಖಂಡರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಈಗಾಗಲೇ ಹಲವರು ಜಾಮೀನು (Bail) ಪಡೆದಿದ್ದಾರೆ.

ಆದರೆ, ಏ1 ಆಗಿರುವ ಚಂದ್ರಬಾಬು ಇದೀಗ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಕೌಶಲ ಹಗರಣ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಚಂದ್ರಬಾಬು ಪ್ರಸ್ತುತ ಜೈಲಿನಲ್ಲಿದ್ದು, ಹೊಸ ಪ್ರಕರಣ ಅವರಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಆದರೆ ಆಂಧ್ರ ಹೈಕೋರ್ಟ್ ಇಂದು ಗುರುವಾರ ಇದರ ವಿಚಾರಣೆಯನ್ನು ನಡೆಸಲಿದೆ. ಅಂಗಲ್ಲು ಗ್ರಾಮದಲ್ಲಿ ಘರ್ಷಣೆ ಪ್ರಕರಣದಲ್ಲಿ ಚಂದ್ರಬಾಬುಗೆ ರಿಲೀಫ್ ಸಿಗುತ್ತಾ, ಎಪಿ ಹೈಕೋರ್ಟ್ ಯಾವ ರೀತಿಯ ತೀರ್ಪು ನೀಡಲಿದೆ ಎಂಬ ಕುತೂಹಲ ಮೂಡಿದೆ.

ತೆಲುಗು ದೇಶಂ ಪಕ್ಷವು ಈಗಾಗಲೇ ಸರಣಿ ಪ್ರಕರಣಗಳಿಂದ ಉಸಿರುಗಟ್ಟುವಂತಿದೆ. ಮೇಲಾಗಿ ಈ ಪ್ರಕರಣವೂ (ಅಂಗಲ್ಲು ಗ್ರಾಮದಲ್ಲಿ ಘರ್ಷಣೆ ಪ್ರಕರಣ) ಚಂದ್ರಬಾಬು ಹಾಗೂ ಟಿಡಿಪಿ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ಅಮರಾವತಿ ಇನ್ನರ್ ರಿಂಗ್ ರೋಡ್ ಪ್ರಕರಣದಲ್ಲಿ ಮಾಜಿ ಸಚಿವ ನಾರಾಯಣ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ನಾರಾಯಣ ಈಗಾಗಲೇ ಮಧ್ಯಂತರ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ ಈಗ ಅವರೂ ಕೂಡ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಆಂಧ್ರಪ್ರದೇಶ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮ (ಎಪಿಎಸ್‌ಎಸ್‌ಡಿಸಿ) ಪ್ರಕರಣದಲ್ಲಿ ಚಂದ್ರಬಾಬು ನಾಯ್ಡುಗೆ ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನು, ಅಮರಾವತಿ ಇನ್ನರ್ ರಿಂಗ್ ರೋಡ್ (ಐಆರ್‌ಆರ್) ಪ್ರಕರಣದಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ವಿಜಯನಗರದ ರಾಮತೀರ್ಥಂ ದೇವಸ್ಥಾನದಲ್ಲಿ ವೈಎಸ್‌ಆರ್‌ಸಿಪಿ ನಾಯಕರ ಮೇಲಿನ ದಾಳಿ ಮತ್ತು ಕೊಲೆ ಯತ್ನ ಪ್ರಕರಣಗಳು ಸೇರಿವೆ. ಅನ್ನಮಯ್ಯ ಜಿಲ್ಲೆಯ ಅಂಗಲ್ಲು ಗ್ರಾಮದಲ್ಲಿ (Angallu village, Annamayya district) ಘರ್ಷಣೆ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಆರೋಪವೂ ಕೇಳಿಬಂದಿದೆ.

ಮತ್ತೊಂದೆಡೆ, ಇತ್ತೀಚೆಗೆ ಟಿಡಿಪಿ ಮತ್ತು ಜನಸೇನಾ ಪಕ್ಷಗಳ ನಡುವಿನ ಒಡನಾಟ ಹೆಚ್ಚಾಗಿದೆ. ಈಗಾಗಲೇ ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್​ ಅವರು ಚಂದ್ರಬಾಬು ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಚಂದ್ರಬಾಬು ಬಂಧನದ ಬಳಿಕ ಜನಸೇನಾ ಕೇಂದ್ರ ಕಚೇರಿಯಲ್ಲಿ ವಿಶೇಷ ಮಾಧ್ಯಮಗೋಷ್ಠಿಯನ್ನೂ ನಡೆಸಿದ್ದರು. ವೈಸಿಪಿ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಬಾಬು ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದರೆ, ಜನಸೇನೆ ಕೂಡ ಬೆಂಬಲಿಸಿದೆ. ನಾರಾ ಲೋಕೇಶ್​ ಅವರನ್ನು ಮೊದಲೇ ಕರೆಸಿ, ಪವನ್ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ. ಲೋಕೇಶ್ ಕೂಡ ಪವನ್ ಕಲ್ಯಾಣ್ ಸಹೋದರನಂತೆ, ನಾನು ಒಬ್ಬಂಟಿಯಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ