G20 ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿದ್ದ ಚೀನಾ ನಿಯೋಗದ ಬಳಿ ಕಂಡುಬಂದಿತ್ತು ನಿಗೂಢ ಬ್ಯಾಗ್
ರಾಜತಾಂತ್ರಿಕ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಭದ್ರತಾ ಸಿಬ್ಬಂದಿ ಬ್ಯಾಗ್‌ಗಳನ್ನು ಹೋಟೆಲ್‌ಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಆದರೆ ಚೀಲದೊಳಗೆ ಸಿಕ್ಕ ವಸ್ತುಗಳ ಬಗ್ಗೆ ಅನುಮಾನ ಬಂದಾಗ ಸಿಬ್ಬಂದಿ ತ್ವರಿತವಾಗಿ ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡಲು ನಿರ್ಧರಿಸಿದರು. ಆದರೆ ಚೀನೀ ನಿಯೋಗವು ತಪಾಸಣೆಯನ್ನು ವಿರೋಧಿಸಿದಾಗ ಅಲ್ಲಿ ಮಾತಿನ ಚಕಮಕಿ ಉಂಟಾಗಿದೆ.

ದೆಹಲಿ ಸೆಪ್ಟೆಂಬರ್ 14: G20 ಶೃಂಗಸಭೆ (G20 Summit) ಮುಗಿದಿದ್ದು, ಚೀನಾದ (China) ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಅವರ ಅನುಪಸ್ಥಿತಿಯು ರಾಜತಾಂತ್ರಿಕತೆಯ ವಲಯದಲ್ಲಿ ಪ್ರಮುಖ ಸುದ್ದಿಯಾಗಿತ್ತು. ಸೆಪ್ಟೆಂಬರ್ 9 ಮತ್ತು 10ರಂದು ನವದೆಹಲಿಯಲ್ಲಿ ನಡೆದ ಜಿ20 ನಾಯಕರ ಶೃಂಗಸಭೆಯಲ್ಲಿ ಚೀನಾದ ಪ್ರಧಾನಿ ಲಿ ಕಿಯಾಂಗ್ (Li Qiang) ಭಾಗಿಯಾಗಿದ್ದರು. ಆದಾಗ್ಯೂ ಶೃಂಗಸಭೆಯ ಸಮಯದಲ್ಲಿ ಚೀನಾದ ಪ್ರತಿನಿಧಿಗಳು ತಂಗಿದ್ದ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಾಟಕೀಯ ಘಟನೆಗಳು ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ತಾಜ್ ಪ್ಯಾಲೇಸ್ಗೆ ಬಂದ ಚೀನಾದ ಪ್ರತಿನಿಧಿಗಳ ಕೈಯಲ್ಲಿದ್ದ ಬ್ಯಾಗ್ ಬಗ್ಗೆ ಅನುಮಾನವಿದೆ ಎಂದು ಅಲ್ಲಿನ ಭದ್ರತಾ ಸಿಬ್ಬಂದಿಗಳು ಹೇಳಿದ್ದರು ಎಂದು ವರದಿ ಉಲ್ಲೇಖಿಸಿದೆ. ಬ್ಯಾಗ್‌ಗಳು ಅಸಾಮಾನ್ಯ ಗಾತ್ರದ ಕಾರಣದಿಂದ ಹೋಟೆಲ್ ಸಿಬ್ಬಂದಿಯ ಗಮನ ಸೆಳೆದಿದ್ದು ಇದನ್ನು ಅವರು ಭದ್ರತಾ ಅಧಿಕಾರಿಗಳನ್ನು ಗಮನಕ್ಕೆ ತಂದಿದ್ದರು.
ರಾಜತಾಂತ್ರಿಕ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಭದ್ರತಾ ಸಿಬ್ಬಂದಿ ಬ್ಯಾಗ್‌ಗಳನ್ನು ಹೋಟೆಲ್‌ಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು. ಆದರೆ ಚೀಲದೊಳಗೆ ಸಿಕ್ಕ ವಸ್ತುಗಳ ಬಗ್ಗೆ ಅನುಮಾನ ಬಂದಾಗ ಸಿಬ್ಬಂದಿ ತ್ವರಿತವಾಗಿ ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡಲು ನಿರ್ಧರಿಸಿದರು. ಆದರೆ ಚೀನೀ ನಿಯೋಗವು ತಪಾಸಣೆಯನ್ನು ವಿರೋಧಿಸಿದಾಗ ಅಲ್ಲಿ ಮಾತಿನ ಚಕಮಕಿ ಉಂಟಾಗಿದೆ.
ಇದಲ್ಲದೆ, ಚೀನಾದ ನಿಯೋಗವು ಹೋಟೆಲ್‌ನಲ್ಲಿ ಪ್ರತ್ಯೇಕ ಮತ್ತು ‘ಖಾಸಗಿ’ ಇಂಟರ್ನೆಟ್ ಸಂಪರ್ಕವನ್ನು ವಿನಂತಿಸಿದೆ. ಆದರೆ ವಿನಂತಿಯನ್ನು ನಿರಾಕರಿಸಲಾಗಿದೆ ಎಂದು ವರದಿ ಹೇಳಿದೆ. ಈ ವಿಚಾರದಲ್ಲಿ ಸುಮಾರು 12 ಗಂಟೆಗಳ ಕಾಲ ಮಾತಿನ ಚಕಮಕಿ ಮುಂದುವರಿದಿದೆ. ಕೊನೆಗೆ ಚೀನಾದ ಭದ್ರತಾ ಸಿಬ್ಬಂದಿ ಹೋಟೆಲ್‌ನಿಂದ ಉಪಕರಣಗಳನ್ನು ತೆಗೆದುಹಾಕಲು ಮತ್ತು ಅದನ್ನು ರಾಯಭಾರ ಕಚೇರಿಗೆ ಸಾಗಿಸಲು ಒಪ್ಪಿಕೊಂಡರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಚೀನಾ ಪ್ರಧಾನಿ ಲಿ ಕಿಯಾಂಗ್ ಅವರ ಭಾರತ ಭೇಟಿಯನ್ನು ಕೊನೆಯ ಕ್ಷಣದಲ್ಲಿ ಘೋಷಿಸಲಾಯಿತು. ಆದಾಗ್ಯೂ, ಅವರು ಹಿರಿಯ ನಾಯಕರಿಗೆ ಗೊತ್ತುಪಡಿಸಿದ ಸಾಂಪ್ರದಾಯಿಕ ‘ವಿಶೇಷ ವಿಮಾನ’ದಲ್ಲಿ ಪ್ರಯಾಣಿಸದೇ ಇದ್ದುದು ಕೂಡಾ ಅನುಮಾನಕ್ಕೀಡು ಮಾಡಿತ್ತು.
ಇದನ್ನೂ ಓದಿ: G20 Summit: G20 ಶೃಂಗಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ದೆಹಲಿ ಪೊಲೀಸರೊಂದಿಗೆ ಪ್ರಧಾನಿ ಮೋದಿ ಔತಣಕೂಟ
ಚೀನಾ ಇತ್ತೀಚೆಗೆ ನವದೆಹಲಿ ಜಿ 20 ಶೃಂಗಸಭೆಯಲ್ಲಿ ತನ್ನ ಮೌನ ಮುರಿದು, ಸದಸ್ಯ ರಾಷ್ಟ್ರಗಳು ಅಂಗೀಕರಿಸಿದ ಘೋಷಣೆಯು ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ವಿಶ್ವ ಆರ್ಥಿಕ ಚೇತರಿಕೆಗೆ ಉತ್ತೇಜನ ನೀಡಲು ಪ್ರಭಾವಿ ಗುಂಪು “ಒಟ್ಟಿಗೆ ಕೆಲಸ ಮಾಡುತ್ತಿದೆ” ಎಂಬ “ಸಕಾರಾತ್ಮಕ ಸಂಕೇತವನ್ನು” ಕಳುಹಿಸಿದೆ ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ