G20 Summit: G20 ಶೃಂಗಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ದೆಹಲಿ ಪೊಲೀಸರೊಂದಿಗೆ ಪ್ರಧಾನಿ ಮೋದಿ ಔತಣಕೂಟ

ದೆಹಲಿಯಲ್ಲಿ ನಡೆದ 18ನೇ ಜಿ-20 ಶೃಂಗಸಭೆ ಮುಗಿದ್ದು, ಇದೀಗ ಈ ಸಭೆಯನ್ನು ಸುಗಮವಾಗಿ ನಡೆಸಲು ಹಗಲು-ರಾತ್ರಿ ಎನ್ನದೇ ಸೇವೆ ನೀಡಿದ ದೆಹಲಿ ಪೊಲೀಸರೊಂದಿಗೆ ಪ್ರಧಾನಿ ಮೋದಿ ಅವರು ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

G20 Summit: G20 ಶೃಂಗಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ದೆಹಲಿ ಪೊಲೀಸರೊಂದಿಗೆ ಪ್ರಧಾನಿ ಮೋದಿ ಔತಣಕೂಟ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Sep 13, 2023 | 4:27 PM

ದೆಹಲಿ, ಸೆ.13: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 18ನೇ ಜಿ-20 ಶೃಂಗಸಭೆ (G20 Summit) ಈಗಾಗಲೇ ಮುಗಿದಿದ್ದು, ಇದೀಗ ಈ ಸಭೆಯನ್ನು ಸುಗಮವಾಗಿ ನಡೆಸಲು ಹಗಲು-ರಾತ್ರಿಯೆನ್ನದೇ ಕರ್ತವ್ಯ ನಿರ್ವಹಿಸಿದ್ದ ದೆಹಲಿ ಪೊಲೀಸರೊಂದಿಗೆ ಪ್ರಧಾನಿ ಮೋದಿ ಅವರು ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ದೆಹಲಿ ಪೊಲೀಸರ ಶ್ರಮ ಹೆಚ್ಚು ಇದೆ ಎಂದು ಪ್ರಧಾನಿ ಮೋದಿ ಅವರು ಈ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಶೃಂಗಸಭೆಯಲ್ಲಿ ಕೆಲಸ ಮಾಡಿದ ಕಾನ್‌ಸ್ಟೆಬಲ್‌ಗಳು, ಇನ್ಸ್‌ಪೆಕ್ಟರ್‌ಗಳನ್ನು ಗುರುತಿಸಿ, ಪ್ರತಿ ಜಿಲ್ಲೆಯಿಂದ ಪಟ್ಟಿ ಕಳುಹಿಸುವಂತೆ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರು ಜಿಲ್ಲಾ ಮುಖ್ಯ ಠಾಣೆಗಳಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಇನ್ನು ಈ ಪಟ್ಟಿಯಲ್ಲಿ 450 ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ಜತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕ್ರೇಜಿವಾಲ್​​ ಕೂಡ ಭಾರತ್​ ಮಂಟಪಂನಲ್ಲಿ ನಡೆಯುವ ಈ ಭೋಜನ ಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಅವರು ಇಂತಹ ಸೇವೆಯಲ್ಲಿ ತೋಡಗಿಕೊಂಡಿರುವವರನ್ನು ಗೌರವಿಸುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ ಮೇ ತಿಂಗಳಲ್ಲಿ, ಹೊಸ ಸಂಸತ್ ಭವನದ ಉದ್ಘಾಟನೆಗೂ ಮುನ್ನ, ಅದರ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಸನ್ಮಾನಿಸಿದ್ದರು.

ಇದನ್ನೂ ಓದಿ:ಜಿ-20 ಶೃಂಗಸಭೆಗೆ ವ್ಯಯಿಸಿದ ಹಣವೆಷ್ಟು? ಇಲ್ಲಿದೆ ಮಾಹಿತಿ

ಇನ್ನು ಈ ಶೃಂಗಸಭೆಯಲ್ಲಿ ಭಾಗವಹಿಸಿದ ಪೊಲೀಸ್​​ ಸಿಬ್ಬಂದಿಗಳಿಗೆ ಸಂಜಯ್ ಅರೋರಾ ಅವರು ಪೊಲೀಸ್ ಆಯುಕ್ತರ ವಿಶೇಷ ಪ್ರಶಂಸಾ ಫಲಕ ಮತ್ತು ಪ್ರಮಾಣಪತ್ರವನ್ನು ನೀಡಿದರು. ಈ ಬಗ್ಗೆ ಸೆಪ್ಟೆಂಬರ್ 11ರಂದು ಹೊರಡಿಸಲಾದ ಆದೇಶಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರ ಸಂಪೂರ್ಣ ಶ್ರೇಣಿ ಮತ್ತು ವಿಶೇಷ ಕಾಳಜಿಯ ಭಾಗವಹಿಸುವಿಕೆ, ಬದ್ಧತೆ ಮತ್ತು ಕೊಡುಗೆಯನ್ನು ಕಂಡು, G20 ವ್ಯವಸ್ಥೆಗಳ ಸುಗಮ, ವೃತ್ತಿಪರ ಮತ್ತು ನಿಖರವಾದ ಕಾರ್ಯಗತಗೊಳಿಸುವಿಕೆ ಸಾಧ್ಯವಾಯಿತು. ಪ್ರತಿಯೊಬ್ಬರ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಜಿ-20 ಶೃಂಗಸಭೆಯಲ್ಲಿ ದೆಹಲಿ ಪೊಲೀಸರ ಸೇವೆ ಸ್ಮರಣಿಯ, ಉನ್ನತಮಟ್ಟದ ಭದ್ರತೆ, ಗೌಪ್ಯತೆ, ವಿಶ್ವ ನಾಯಕರಿಗೆ ನೀಡಿದ ಭದ್ರತೆ ಎಲ್ಲವನ್ನು ಸ್ಮರಿಸುವಂತದೇ ಎಂದು ಹೇಳಿದ್ದಾರೆ. ಇನ್ನು ಜಿ-20 ನಾಯಕರು ಭೇಟಿ ನೀಡುವ ಪ್ರದೇಶಗಳಿಗೆ ದೆಹಲಿ ಪೊಲೀಸರು ನೀಡಿದ ಉತ್ತಮ ಭದ್ರತೆಯನ್ನು ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Wed, 13 September 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ