ಬಂಧಿತ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ನೀಡುವ ಆಹಾರ ಇದು; ಫೋಟೊ ಟ್ವೀಟ್ ಮಾಡಿ ದೆಹಲಿ ಪೊಲೀಸರನ್ನು ಟೀಕಿಸಿದ ಕಾಂಗ್ರೆಸ್ ನಾಯಕ
ಕಾಂಗ್ರೆಸ್ ನಾಯಕರ ಟ್ವೀಟ್ ಬಗ್ಗೆ ಕೆಲವರು ಟೀಕಿಸಿದ್ದು "ಪಾರ್ಟಿ ಹೋ ರಹೀ ಹೈ ಪ್ರೊಟೆಸ್ಟ್ ನಹೀ" ಎಂದು ಟ್ವಿಟರ್ ಬಳಕೆದಾರರಾದ ಸುಶಾಂತ್ ಸೈಗಲ್ ಪ್ರತಿಕ್ರಿಯಿಸಿದ್ದಾರೆ. ಈ ವಿವಿಐಪಿ ಆತಿಥ್ಯ ಪೋಸ್ಟ್ ಮಾಡುವ ಅಗತ್ಯವಿತ್ತೇ?" ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರಾದ ಅಶೋಕ್ ಸಿಂಗ್ ಹೇಳಿದ್ದಾರೆ.
ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ(money laundering case) ಕೇಂದ್ರ ತನಿಖಾ ಸಂಸ್ಥೆಯು ರಾಹುಲ್ ಗಾಂಧಿ (Rahul Gandhi) ಅವರನ್ನು ಎರಡನೇ ಬಾರಿಗೆ ವಿಚಾರಣೆಗೆ ಕರೆಸಿದಾಗ, ಕಾಂಗ್ರೆಸ್ ನಾಯಕರೊಬ್ಬರು ಬಂಧಿತ ಕಾರ್ಯಕರ್ತರಿಗೆ ಪೊಲೀಸರು ನೀಡುತ್ತಿರುವ ಆಹಾರದ ಬಗ್ಗೆ ಫೋಸ್ಟ್ ಮಾಡಿದ್ದಾರೆ. ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಮಾಣಿಕ್ಕಂ ಟ್ಯಾಗೋರ್ (Manickam Tagore) ಅವರು ಎರಡು ವಿಭಿನ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ರಾಹುಲ್ ಗಾಂಧಿಗೆ ಸಮನ್ಸ್ ನೀಡುವುದನ್ನು ಪ್ರತಿಭಟಿಸಿ ಬಂಧಿತರಾದ ಕಾರ್ಯಕರ್ತರಿಗೆ ನೀಡುವ ಆಹಾರದ ಬಗ್ಗೆ ಆಗಿದ್ದು ಇನ್ನೊಂದು ಕಾರ್ಯಕರ್ತರಿಗಾಗಿ ದೆಹಲಿ ಕಾಂಗ್ರೆಸ್ ಅಧ್ಯಕ್ಷರು ಪೂರೈಸಿರುವ ಆಹಾರ ಪೊಟ್ಟಣದ ಚಿತ್ರವಾಗಿದೆ. ಬಂಧನಕ್ಕೊಳಗಾದ ನಾಯಕರಿಗೆ ದೆಹಲಿ ಪೋಲೀಸರು ನೀಡುವ ಆಹಾರವು ಪೂರಿ ಮತ್ತು ತರಕಾರಿ ಪಲ್ಯವನ್ನೊಳಗೊಂಡಿರುತ್ತದೆ. ಆದರೆ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಅವರ ಪ್ರಸಿದ್ಧ ಉಪಾಹಾರ ಗೃಹದಿಂದ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ ಆಹಾರದ ಪೊಟ್ಟಣ ನೀಡಿದ್ದಾರೆ. ಇದಕ್ಕಾಗಿ ಟ್ಯಾಗೋರ್ ಚೌಧರಿಯನ್ನು ಅಭಿನಂದಿಸಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಟ್ಯಾಗೋರ್ ಅವರು ದೆಹಲಿ ಕಾಂಗ್ರೆಸ್‌ನ ಸಹೋದರರೊಂದಿಗೆ ಊಟದ ಸಮಯವನ್ನು ಎಂದು ಫೋಟೊ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಟ್ವೀಟ್ ಬಗ್ಗೆ ಕೆಲವರು ಟೀಕಿಸಿದ್ದು “ಪಾರ್ಟಿ ಹೋ ರಹೀ ಹೈ ಪ್ರೊಟೆಸ್ಟ್ ನಹೀ” ಎಂದು ಟ್ವಿಟರ್ ಬಳಕೆದಾರರಾದ ಸುಶಾಂತ್ ಸೈಗಲ್ ಪ್ರತಿಕ್ರಿಯಿಸಿದ್ದಾರೆ. ಈ ವಿವಿಐಪಿ ಆತಿಥ್ಯ ಪೋಸ್ಟ್ ಮಾಡುವ ಅಗತ್ಯವಿತ್ತೇ?” ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರಾದ ಅಶೋಕ್ ಸಿಂಗ್ ಹೇಳಿದ್ದಾರೆ.
Food for the Congress workers detained by Delhi police #1/2 pic.twitter.com/zFDszi5FHa
— Manickam Tagore .B??✋மாணிக்கம் தாகூர்.ப (@manickamtagore) June 14, 2022
Thank you Delhi congress President @Ch_AnilKumarINC for caring about the workers and leaders with a quality food from Bangla foods instead of the Delhi police foods. #SatyagrahMarch #RahulGandhi pic.twitter.com/UO96GLzvIz
— Manickam Tagore .B??✋மாணிக்கம் தாகூர்.ப (@manickamtagore) June 14, 2022
ಹಿಂದಿನ ದಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ಮುಖಂಡರು ತಮ್ಮ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಮತ್ತು ಭದ್ರತಾ ಪಡೆಗಳೊಂದಿಗೆ ವಾಗ್ವಾದ ನಡೆದಿದೆ. ಪಕ್ಷದ ಕಚೇರಿಯನ್ನು ತಲುಪಲು ಯತ್ನಿಸಿದ ಪಕ್ಷದ ಹಲವಾರು ಕಾರ್ಯಕರ್ತರು ಮತ್ತು ಕೆಲವು ಸಂಸದರನ್ನು ಸಹ ಬಂಧಿಸಲಾಯಿತು.
ಕಾಂಗ್ರೆಸ್‌ನ ಉನ್ನತ ನಾಯಕರಾದ ಹರೀಶ್ ರಾವತ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇಡಿ ಕಚೇರಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸಿದಾಗ ಅವರನ್ನು ಕಾಂಗ್ರೆಸ್ ಕಚೇರಿಯ ಹೊರಗಿನಿಂದ ಬಂಧಿಸಿದ್ದು, ಹಲವು ಕಾರ್ಯಕರ್ತರನ್ನೂ ಬಂಧಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:45 pm, Tue, 14 June 22