ತೆಲಂಗಾಣ: ಟ್ರಾಫಿಕ್ ಉಲ್ಲಂಘನೆಗೆ ದಂಡ ಪಾವತಿಸುವಾಗಲೂ ಸಿಗುತ್ತದೆ ಶೇ 90ವರೆಗೆ ರಿಯಾಯಿತಿ, ಹೇಗೆ?

|

Updated on: Dec 27, 2023 | 2:25 PM

ಈ ಯೋಜನೆಯು ಮಂಗಳವಾರ, ಡಿಸೆಂಬರ್ 26 ರಂದು ಪ್ರಾರಂಭವಾಗಿದ್ದು ಜನವರಿ 10, 2024 ರವರೆಗೆ ಮುಂದುವರಿಯುತ್ತದೆ. ಸರ್ಕಾರದ ಆದೇಶದಲ್ಲಿ, “ದ್ವಿಚಕ್ರ, ತ್ರಿಚಕ್ರ ವಾಹನಗಳಂತಹ ಅನೇಕ ವಾಹನಗಳು ವಾಹನದ ವೆಚ್ಚಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿರುವ ಕಾರಣ ಬಾಕಿ ಇರುವ ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ....

ತೆಲಂಗಾಣ: ಟ್ರಾಫಿಕ್ ಉಲ್ಲಂಘನೆಗೆ ದಂಡ ಪಾವತಿಸುವಾಗಲೂ ಸಿಗುತ್ತದೆ ಶೇ 90ವರೆಗೆ ರಿಯಾಯಿತಿ, ಹೇಗೆ?
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್ ಡಿಸೆಂಬರ್ 27: ತೆಲಂಗಾಣ (Telangana) ಸರ್ಕಾರ ಮಂಗಳವಾರ ನೋಟಿಸ್ ಜಾರಿ ಮಾಡಿದ್ದು, ನಾಗರಿಕರಿಗೆ ಬಾಕಿ ಇರುವ ಚಲನ್‌ಗಳನ್ನು ಮೂಲ ಮೌಲ್ಯದ ಶೇಕಡಾವಾರು ಮೊತ್ತದಲ್ಲಿ ಪಾವತಿಸಲು ಅವಕಾಶವಿದೆ. ಟ್ರಾಫಿಕ್ ಚಲನ್ (traffic challan) ಆರ್ಡರ್‌ಗಳ ಮೇಲೆ ಜನರಿಗೆ ಶೇಕಡಾ 60 ರಿಂದ 90 ರಷ್ಟು ರಿಯಾಯಿತಿಯನ್ನು ನೀಡುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. “ಇತ್ತೀಚಿನ ವರ್ಷಗಳಲ್ಲಿ ಇ-ಚಲನ್ ಬಾಕಿ ಉಳಿದಿದೆ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಅನೇಕ ವಾಹನ ಮಾಲೀಕರು ಇ-ಚಲನ್‌ಗಳನ್ನು ಪಾವತಿಸಿಲ್ಲ.ಅದೇ ಸಮಯದಲ್ಲಿಹೆಚ್ಚಿನ ಸಂಖ್ಯೆಯ ಟ್ರಾಫಿಕ್ ಚಲನ್‌ಗಳನ್ನು ವಿಧಿಸಲಾಯಿತು. ಹೆಚ್ಚಿನ ಮೊತ್ತದ ಬಾಕಿಯನ್ನು ಕ್ಲಿಯರ್ ಮಾಡುವುದು ತುಂಬಾ ಕಷ್ಟ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ಯೋಜನೆಯು ಮಂಗಳವಾರ, ಡಿಸೆಂಬರ್ 26 ರಂದು ಪ್ರಾರಂಭವಾಗಿದ್ದು ಜನವರಿ 10, 2024 ರವರೆಗೆ ಮುಂದುವರಿಯುತ್ತದೆ.
ಆದೇಶದಲ್ಲಿ, “ದ್ವಿಚಕ್ರ, ತ್ರಿಚಕ್ರ ವಾಹನಗಳಂತಹ ಅನೇಕ ವಾಹನಗಳು ವಾಹನದ ವೆಚ್ಚಕ್ಕಿಂತ ಹೆಚ್ಚಿನ ಮೊತ್ತವನ್ನು ಹೊಂದಿರುವ ಕಾರಣ ಬಾಕಿ ಇರುವ ದಂಡವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಬಾಕಿ ಇರುವ ಚಲನ್‌ಗಳನ್ನು ಕ್ಲಿಯರ್ ಮಾಡಲು ನಿರ್ದಿಷ್ಟ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಟ್ರಾಫಿಕ್ ಇ-ಚಲನ್‌ಗಳ ಬೃಹತ್ ಬಾಕಿಯನ್ನು ತೆರವುಗೊಳಿಸಲು ಪ್ರಸ್ತಾಪಿಸಲಾಗಿದೆ. ಬಾಕಿ ಇರುವ ದಂಡದ ಮೇಲೆ ರಿಯಾಯಿತಿ ನೀಡಲಾಗುವುದು ಎಂದಿದೆ.


ಯೋಜನೆಯಡಿಯಲ್ಲಿ, ಸರ್ಕಾರವು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಯನ್ನು ನೀಡುತ್ತದೆ. ಆದರೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಬಸ್‌ಗಳಿಗೆ ಶೇಕಡಾ 90 ರಷ್ಟು ರಿಯಾಯಿತಿ ನೀಡಲಾಗುವುದು.

ಆದಾಗ್ಯೂ, ಕಾರುಗಳಂತಹ ಲಘು ಮೋಟಾರು ವಾಹನಗಳು ಮತ್ತು ಟ್ರಕ್‌ಗಳಂತಹ ಭಾರೀ ಮೋಟಾರು ವಾಹನಗಳಿಗೆ ನೀಡಲಾಗುವ ಚಲನ್‌ಗಳ ಮೇಲಿನ ರಿಯಾಯಿತಿಯು ಶೇಕಡಾ 60 ರಷ್ಟಿರುತ್ತದೆ.

ಆದೇಶದಲ್ಲಿ, “ಮೋಟಾರು ವಾಹನ ಕಾಯಿದೆಯ 1988, ಸೆಕ್ಷನ್ 200 ರ ಮೂಲಕ ನೀಡಲಾದ ಅಧಿಕಾರಗಳ ಪ್ರಕಾರ, ಸರ್ಕಾರವು ಈ ಮೂಲಕ 2 ಚಕ್ರ ವಾಹನಗಳು ಮತ್ತು 3 ಚಕ್ರ ವಾಹನಗಳಿಗೆ 80% ದಂಡದ ಮೊತ್ತವನ್ನು ಮನ್ನಾ ಮಾಡುತ್ತದೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಿಗೆ 90%, ಮೋಟಾರು ವಾಹನ ಕಾಯಿದೆ, 1988 ರ ಲಘು ಮೋಟಾರು ವಾಹನಗಳಿಗೆ/ಭಾರೀ ಮೋಟಾರು ವಾಹನಗಳಿಗೆ 60% ಆಗಿದ್ದು ಈವರೆಗೆ ಪಾವತಿ ಮಾಡದೇ ಇರುವವರು ಇ-ಚಲನ್‌ಗಳ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಪಾವತಿ ಮಾಡಬೇಕಿದೆ. . GO MS No.108, TR & B (Tr-I) ಇಲಾಖೆ dt: 18-08-2011 ರಲ್ಲಿ ಹೊರಡಿಸಲಾದ ಆದೇಶವಾಗಿದೆ ಇದು.

ಇದನ್ನೂ ಓದಿ: ತೆಲಂಗಾಣ ಮಹಿಳಾ ಬಸ್ ಪ್ರಯಾಣಿಕರಿಗೆ ಐಪಿಎಸ್​ ಅಧಿಕಾರಿ ಸಜ್ಜನ ಮನವಿ, ಕರ್ನಾಟಕ ಪ್ರಯಾಣಿಕರಿಗೂ ಇದು ಒಳ್ಳೆಯ ಸಲಹೆ, ಒಮ್ಮೆ ಕೇಳಿ

ಇತ್ತೀಚೆಗಷ್ಟೇ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಟ್ರಾಫಿಕ್ ಚಲನ್ ಮೇಲಿನ ರಿಯಾಯಿತಿ ಜಾರಿಯಾಗಿದೆ. ಆದೇಶದ ಪ್ರಕಾರ, ವಾಹನ ಮಾಲೀಕರು ತಮ್ಮ ವಾಹನಗಳ ವಿರುದ್ಧ ಯಾವುದೇ ಬಾಕಿ ಇರುವ ಚಲನ್‌ಗಳನ್ನು ಪರಿಶೀಲಿಸಲು ಮತ್ತು ಆನ್‌ಲೈನ್‌ನಲ್ಲಿ ರಿಯಾಯಿತಿ ಪಾವತಿಯನ್ನು ಮಾಡಲು ತೆಲಂಗಾಣ ಟ್ರಾಫಿಕ್ ಇ-ಚಲನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ರಾಜ್ಯದಾದ್ಯಂತ ಸುಮಾರು ಎರಡು ಕೋಟಿ ಟ್ರಾಫಿಕ್ ಚಲನ್‌ಗಳು ಬಾಕಿ ಉಳಿದಿವೆ ಎಂದು ಅಂದಾಜಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ತಿಳಿಸಿದ್ದು, 2022 ರಲ್ಲಿ ಭಾರತದಾದ್ಯಂತ ₹ 7,563.60 ಕೋಟಿ ಮೌಲ್ಯದ 4.73 ಕೋಟಿ ಚಲನ್‌ಗಳನ್ನು ನೀಡಲಾಗಿದೆ. ₹ 2,874.41 ಕೋಟಿ ಸಂಗ್ರಹವಾಗಿದ್ದರೆ ₹ 4,654.26 ಕೋಟಿ ಬಾಕಿ ಉಳಿದಿದೆ ಎಂದು ಅವರು ತಿಳಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ