ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾಗಲೇ ಹೃದಯಾಘಾತದಿಂದ ಹಿರಿಯ ವಕೀಲ ಸಾವು

|

Updated on: Feb 18, 2025 | 9:19 PM

ತೆಲಂಗಾಣದ ಹೈಕೋರ್ಟ್‌ನಲ್ಲಿ ದುರಂತ ಘಟನೆಯೊಂದು ನಡೆದಿದೆ. ಕೋರ್ಟ್​ನಲ್ಲಿ ಪ್ರಕರಣದ ವಾದ ಮಂಡಿಸುತ್ತಿದ್ದಾಗ ಹಿರಿಯ ವಕೀಲ ಹೃದಯಾಘಾತದಿಂದ ನಿಧನರಾಗಿದ್ದಾರೆ. ತೆಲಂಗಾಣದ ನ್ಯಾಯಾಲಯ ಸಂಖ್ಯೆ 21ರಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸುತ್ತಿದ್ದ ವಕೀಲ ಪಿ. ವೇಣುಗೋಪಾಲ್ ರಾವ್ ಅವರಿಗೆ ಹಠಾತ್ ಹೃದಯಾಘಾತವಾಯಿತು. ಹಿರಿಯ ವಕೀಲ ವೇಣುಗೋಪಾಲ್ ರಾವ್ ನ್ಯಾಯಾಲಯದಲ್ಲಿ ಪ್ರಕರಣವೊಂದನ್ನು ವಾದಿಸುತ್ತಿದ್ದಾಗಲೇ ಈ ಘಟನೆ ಸಂಭವಿಸಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾಗಲೇ ಹೃದಯಾಘಾತದಿಂದ ಹಿರಿಯ ವಕೀಲ ಸಾವು
Telangana High Court
Follow us on

ಹೈದರಾಬಾದ್: ಇಂದು ಮಧ್ಯಾಹ್ನ ತೆಲಂಗಾಣ ಹೈಕೋರ್ಟ್‌ನಲ್ಲಿ ಒಂದು ಪ್ರಕರಣದ ಕುರಿತು ವಾದ ಮಂಡಿಸುತ್ತಿದ್ದಾಗ ಹಿರಿಯ ವಕೀಲರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನ್ಯಾಯಾಲಯ ಸಂಖ್ಯೆ 21ರಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ವಾದ ಮಂಡಿಸುತ್ತಿದ್ದ ವಕೀಲ ಪಿ. ವೇಣುಗೋಪಾಲ್ ರಾವ್ ಅವರಿಗೆ ಹಠಾತ್ ಹೃದಯಾಘಾತವಾಗಿ ಮಧ್ಯಾಹ್ನ 1.30ರ ಸುಮಾರಿಗೆ ನ್ಯಾಯಾಲಯದಲ್ಲಿ ಕುಸಿದು ಬಿದ್ದರು. ಈ ವೇಳೆ ನ್ಯಾಯಾಲಯದ ಕೋಣೆಯಲ್ಲಿದ್ದ ಇತರ ವಕೀಲರು ಅವರನ್ನು ರಕ್ಷಿಸಲು ಧಾವಿಸಿದರು. ಬಳಿಕ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ನಂತರ ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ಹೇಳಿದ್ದಾರೆ. ವೇಣುಗೋಪಾಲ ರಾವ್ ಅವರ ಹಠಾತ್ ನಿಧನ ಹೈದರಾಬಾದ್‌ನಲ್ಲಿ ಕಾನೂನು ವಲಯವನ್ನು ಶೋಕದಲ್ಲಿ ಮುಳುಗಿಸಿತು.

ಕಳೆದ ವರ್ಷ ಆಗಸ್ಟ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರಿಗೆ ತೀವ್ರ ಹೃದಯಾಘಾತವಾಗಿತ್ತು. ಲಾಲ್ ಬಾಗ್ ಮಾರ್ನಿಂಗ್ ವಾಕರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರವಿ ಚಂದ್ರನ್ (63) ಮೃತಪಟ್ಟಿದ್ದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಲು ಅವರು ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಪತ್ರಿಕಾಗೋಷ್ಠಿಯಲ್ಲೇ ಅವರು ಮೃತಪಟ್ಟಿದ್ದರು.

ಇದನ್ನೂ ಓದಿ: Viral Video: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು

ಕ್ಲಿನಿಕಲ್ ಸಂಶೋಧನೆಯ ಪ್ರಕಾರ, ಸುಮಾರು 45% ರೋಗಿಗಳು ಹೃದಯಾಘಾತಕ್ಕೆ ಒಂದು ವರ್ಷದ ಮೊದಲು ಎದೆನೋವಿನಂತಹ ಲಕ್ಷಣಗಳನ್ನು ಅನುಭವಿಸಿದ್ದಾರೆ. ಅನೇಕ ವ್ಯಕ್ತಿಗಳು ನಿಜವಾದ ಹೃದಯಾಘಾತಕ್ಕೂ ಕೆಲವು ದಿನಗಳು ಮತ್ತು ಕೆಲವೊಮ್ಮೆ ಕೆಲವು ವಾರಗಳ ಮೊದಲು ಎಚ್ಚರಿಕೆಯ ಚಿಹ್ನೆಗಳನ್ನು ಅನುಭವಿಸಿದ್ದಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಸರಾಸರಿಯಾಗಿ, ರೋಗಿಗಳು ಹೃದಯಾಘಾತ ಪ್ರಾರಂಭವಾಗುವ ಸುಮಾರು 4ರಿಂದ 6 ದಿನಗಳ ಮೊದಲು ಎದೆ ನೋವು, ಉಸಿರಾಟದ ತೊಂದರೆ ಮತ್ತು ಆಯಾಸದಂತಹ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ