AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ಚಿಕಿತ್ಸೆಗೆ ಹಣವಿಲ್ಲವೆಂದು ಅನಾರೋಗ್ಯ ಪೀಡಿತ ಪತಿಯನ್ನು ಕೊಂದ ಪತ್ನಿ

ಗಂಡನ ರೋಗಕ್ಕೆ ಚಿಕಿತ್ಸೆ ಕೊಡಿಸುವ ಬದಲು ಕಷ್ಟದಿಂದ ತಪ್ಪಿಸಿಕೊಳ್ಳಲು ಪತಿಯನ್ನೇ ಕೊಲೆ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆಶಯ್ಯ ಎಂಬುವವರು ಹೊಲಕ್ಕೆ ಹೋದಾಗ ಜಾರಿ ಬಿದ್ದು ಸೊಂಟದ ಮೂಳೆ ಮುರಿದಿತ್ತು, ಶಸ್ತ್ರಚಿಕಿತ್ಸೆಗೆ ಹಣವಿರಲಿಲ್ಲವೆಂದು ಅಳಿಯನ ಜತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ವ್ಯಕ್ತಿಯ ಅಂತ್ಯಕ್ರಿಯೆ ವೇಳೆ ವಿಚಾರ ಹೊರಬಿದ್ದಿದೆ.

ತೆಲಂಗಾಣ: ಚಿಕಿತ್ಸೆಗೆ ಹಣವಿಲ್ಲವೆಂದು ಅನಾರೋಗ್ಯ ಪೀಡಿತ ಪತಿಯನ್ನು ಕೊಂದ ಪತ್ನಿ
ಕ್ರೈಂ Image Credit source: WN Legal
Follow us
ನಯನಾ ರಾಜೀವ್
|

Updated on: Feb 19, 2025 | 2:14 PM

ಗಂಡನ ಕಷ್ಟ, ಸುಖದಲ್ಲಿ ಜತೆಗಿರಬೇಕಿದ್ದ ಪತ್ನಿ, ಗಂಡನೇ ತನಗೆ ಕಷ್ಟವೆಂಬ ನಿರ್ಧಾರಕ್ಕೆ ಬಂದು ಅಳಿಯನ ಜತೆ ಸೇರಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇಡಕ್​ನಲ್ಲಿ ನಡೆದಿದೆ. ಪತಿ ಹೊಲಕ್ಕೆ ಹೋದಾಗ ಬಿದ್ದು ಸೊಂಟ ಮುರಿದುಕೊಂಡಿದ್ದ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ತುಂಬಾ ಹಣ ಖರ್ಚಾಗುವುದು ಎಂದು ಹೇಳಿದ್ದರು. ತನ್ನ ಗಂಡನ ಚಿಕಿತ್ಸೆಗೆ ಎಲ್ಲಿಂದ ಹಣವನ್ನು ಒಟ್ಟಿಗೂಡಿಸುವುದು ಎನ್ನುವ ಗೊಂದಲದಲ್ಲಿ ಗಂಡನನ್ನೇ ಕೊಲೆ ಮಾಡಿರುವ ವಿಚಿತ್ರ ಘಟನೆ ಇದಾಗಿದೆ.

ಅಂತ್ಯಕ್ರಿಯೆಯ ಸಮಯದಲ್ಲಿ ಮೃತದೇಹದ ಕುತ್ತಿಗೆಯಲ್ಲಿ ಗಾಯಗಳನ್ನು ಗಮನಿಸಿದ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಸತ್ಯ ಬೆಳಕಿಗೆ ಬಂದಿದೆ. ಪಾಪಣ್ಣಪೇಟೆ ಮಂಡಲದ ಬಚಾರಂ ಗ್ರಾಮದ ಆಶಯ್ಯ (45) ಮತ್ತು ಶಿವಮ್ಮ ದಂಪತಿಗೆ ಲಾವಣ್ಯ ಎಂಬ ಮಗಳು ಮತ್ತು ಶಿವಕುಮಾರ್ ಎಂಬ ಮಗನಿದ್ದ.

ಅವರಿಗೆ ಒಂದೂವರೆ ಎಕರೆ ಜಮೀನಿತ್ತು ಆದರೆ ಅಲ್ಲಿ ಬೆಳೆ ಬೆಳೆಯಲು ವಿಫಲವಾದಾಗ, ಕೆಲವು ವರ್ಷಗಳ ಹಿಂದೆ ಅವರು ಹೈದರಾಬಾದ್ ನಗರಕ್ಕೆ ಕಾರ್ಮಿಕರಾಗಿ ವಲಸೆ ಬಂದರು. ಅವರ ಮಗ ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಇದಾದ ಬಳಿಕ ಅವರು ತಮ್ಮ ಊರಿಗೆ ಮರಳಿದರು. ಅವರು ತಮ್ಮ ಮಗಳು ಲಾವಣ್ಯಳನ್ನು ಜುಕಲ್‌ನ ರಮೇಶ್‌ಗೆ ಮದುವೆ ಮಾಡಿ ಮನೆಗೆ ಕರೆತಂದರು.

ಆಶಯ್ಯ ಗ್ರಾಮದಲ್ಲಿ ದನಗಳನ್ನು ಮೇಯಿಸುತ್ತಿದ್ದ. ಇತ್ತೀಚೆಗೆ ತಮ್ಮ ಹೊಲದಲ್ಲಿ ಬಾವಿ ತೋಡಿ, ಆ ಭೂಮಿಯನ್ನು ಕೃಷಿಗಾಗಿ ಪರಿವರ್ತಿಸಿದ್ದ. ಆಶಯ್ಯ ಹೊಲದಲ್ಲಿ ಕೆಲಸ ಮಾಡುವಾಗ ಜಾರಿಬಿದ್ದು ಸೊಂಟ ಮುರಿದುಕೊಂಡರು. ವೈದ್ಯರು ಆಶಯ್ಯನ ಶಸ್ತ್ರಚಿಕಿತ್ಸೆಗೆ 50,000 ರೂ. ವೆಚ್ಚವಾಗುತ್ತದೆ ಎಂದು ಹೇಳಿದ್ದರು. ಮನೆಗೆ ಹಿಂದಿರುಗಿದ ನಂತರ, ಆಶಯ್ಯನ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ವೈದ್ಯಕೀಯ ವೆಚ್ಚಗಳ ಬಗ್ಗೆ ಚರ್ಚಿಸಿದರು.

ಮತ್ತಷ್ಟು ಓದಿ: ಪತ್ನಿಯನ್ನ ಕೊಂದು ಮಂಚದಿಂದ ಬಿದ್ದು ಸಾವು ಎಂದ ಪತಿ: ತನಿಖೆಯಲ್ಲಿ ಗಂಡನ ಕಹಾನಿ ಬಟಾಬಯಲು

ಮಧ್ಯರಾತ್ರಿ ಶಿವಮ್ಮ, ತನ್ನ ಅಳಿಯ ರಮೇಶ್ ಜೊತೆ ಸೇರಿ, ಆಶಯ್ಯನನ್ನು ಮಲಗಿದ್ದಾಗ ಟವೆಲ್​ನಿಂದ ಕುತ್ತಿಗೆಗೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆಶಯ್ಯ ನಿದ್ರೆ ಮಾಡವಾಗಲೇ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಲಾಯಿತು. ಆಶಯ್ಯನ ದೇಹವನ್ನು ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗುತ್ತಿದ್ದಾಗ, ಪೊಲೀಸರು ಅನಿರೀಕ್ಷಿತವಾಗಿ ಶವವನ್ನು ತಮ್ಮ ವಶಕ್ಕೆ ಪಡೆದರು. ಮೃತರ ಸಹೋದರಿ ಗಂಗಾಮಣಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ