ತೆಲಂಗಾಣ: ತೆಲಂಗಾಣದಲ್ಲಿ ತರಬೇತಿನಿರತ ವಿಮಾನವೊಂದು ಪತನಗೊಂಡಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ತರಬೇತಿ ವಿಮಾನವು (Cessna 152 American two-seat, fixed-tricycle-gear, general aviation airplane) ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲ, ತುಂಗತ್ತುರಿ ಸಮೀಪ (Tungaturthy village, Pedavura mandal, Nalgonda district) ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.
ತರಬೇತಿ ವಿಮಾನವು ಧಡಾರನೆ ಒಮ್ಮೆಗೇ ನೆಲಕ್ಕೆ ಕುಸಿದಿದೆ. ನೆಲದ ಮೇಲೆ ಬಿದ್ದಾಕ್ಷಣ ಬೆಂಕಿ ಆವರಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಆಡಳಿತ ದೌಡಾಯಿಸಿದೆ. ತರಬೇತಿ ವಿಮಾನವು ನಾಗಾರ್ಜುನ ಏರ್ ಬೇಸ್ನಿಂದ ಹಾರಾಟ ಆರಂಭಿಸಿತ್ತು. ಅಪಘಾತಕೀಡಾದ ವಿಮಾನವು ಖಾಸಗಿ ವಿಮಾನ ಸಂಸ್ಥೆಗೆ (Flytech Aviation in Nagarjuna Sagar) ಸೇರಿದೆ. ಕೃಷಿ ಜಮೀನುಗಳ ಬಳಿ ಸಾಗೊಹೋಗುವ ಹೈಟೆನ್ಷನ್ ವಿದ್ಯುತ್ ಕಂಬಗಳಿಗೆ ವಿಮಾನ ತಾಗಿ ಅಪಘಾತವಾಗಿರಹುದು ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ (nalgonda training aircraft crash).
Plane Crash: ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ದುರ್ಘಟನೆ: ಮಹಿಳಾ ಪೈಲಟ್ ಮತ್ತು ತರಬೇತಿ ನಿರತ ಪೈಲಟ್ ಇಬ್ಬರೂ ಸಾವಿಗೀಡಾಗಿದ್ದಾರೆ:
ಇದನ್ನೂ ಓದಿ:
Online cheating: ಒಟಿಪಿ ಪಡೆದು ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಿದ್ದ ಖತರ್ನಾಕ್ ಆಸಾಮಿಗಳು ಅರೆಸ್ಟ್
ಇದನ್ನೂ ಓದಿ:
ಬೆಂಗಳೂರು ಪೊಲೀಸರು ತಮ್ಮ ಪ್ರಾಣದ ಹಂಗು ಬಿಟ್ಟು ಬದುಕಿಸಿದ್ದ ಹಳೆ ಕಳ್ಳ ಈ ಬಾರಿ ದರೋಡೆಗೆ ಇಳಿದ, ಆಮೇಲೆ ಏನಾಯ್ತು?
Published On - 12:04 pm, Sat, 26 February 22