ಖೆಜುರಿ ಬಾಂಬ್​ ಸ್ಫೋಟ ಪ್ರಕರಣ; ಪಶ್ಚಿಮ ಬಂಗಾಳದ ಐದು ಪ್ರದೇಶಗಳಲ್ಲಿ ಎನ್​ಐಎ ರೇಡ್​​ !

ಖೆಜುರಿ ಬಾಂಬ್​ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಾವು ನಡೆಸಲಿದ್ದೇವೆ. ರಾಜ್ಯ ಪೊಲೀಸರು ಈ ಕೇಸ್​​ನ್ನು ನಮಗೆ ಹಸ್ತಾಂತರ ಮಾಡಿದ್ದಾರೆ ಎಂದು ಎನ್​ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖೆಜುರಿ ಬಾಂಬ್​ ಸ್ಫೋಟ ಪ್ರಕರಣ; ಪಶ್ಚಿಮ ಬಂಗಾಳದ ಐದು ಪ್ರದೇಶಗಳಲ್ಲಿ ಎನ್​ಐಎ ರೇಡ್​​ !
ಎನ್​ಐಎ
Follow us
TV9 Web
| Updated By: Lakshmi Hegde

Updated on:Feb 26, 2022 | 9:52 AM

ಖೆಜುರಿ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ (NIA) ಪಶ್ಚಿಮ ಬಂಗಾಳದ (West Bengal) ವಿವಿಧೆಡೆ ರೇಡ್​​ ಮಾಡಿದೆ.  ಪೂರ್ವ ಮೇದಿನಿಪುರ ಜಿಲ್ಲೆಯ ಒಟ್ಟು ಐದು ಪ್ರದೇಶಗಳಲ್ಲಿ ಎನ್​ಐಎ ಹುಡುಕಾಟ ನಡೆಸಿದೆ. ಈ ವೇಳೆ ಹಲವು ದೋಷಯುಕ್ತ ದಾಖಲೆಗಳು, ಡಿಜಿಟಲ್​ ಉಪಕರಣಗಳನ್ನು ವಶಪಡಿಸಿಕೊಂಡಿದೆ. 

2022 ಜನವರಿ 3ರಂದು ಖೆಜುರಿ ಪೊಲೀಸ್​ ಠಾಣೆ ವ್ಯಾಪ್ತಿಯ ಪಶ್ಚಿಮ ಭಂಗನಮರಿ ಗ್ರಾಮದ ಕಂಕಣ್​ ಕರಣ್​ ಎಂಬಾತನ ಮನೆಯಲ್ಲಿ ಬಾಂಬ್​ ಸ್ಫೋಟವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು ಹಾಗೂ ಮೂವರಿಗೆ ಗಾಯವಾಗಿತ್ತು. ಅಂದರೆ ಇವರೆಲ್ಲ ಮನೆಯಲ್ಲೇ ಬಾಂಬ್​ ತಯಾರು ಮಾಡುತ್ತಿದ್ದರು ಎಂದು ಹೇಳಲಾಗಿದೆ.  ಪ್ರಕರಣಕ್ಕೆ ಸಂಬಂಧಪಟ್ಟಂತೆ ಖೆಜುರಿ ಠಾಣೆಯಲ್ಲಿ ಜನವರಿ 4ರಂದು ಕೇಸ್​ ದಾಖಲಾಗಿ, ಜನವರಿ 25ರಂದು ಎನ್​ಐಎ ತನಿಖೆ ಕೈಗೆತ್ತಿಕೊಂಡಿತ್ತು.

ಅಂದಹಾಗೇ ಬಾಂಬ್​ ಬ್ಲಾಸ್ಟ್​​ನಲ್ಲಿ ಮೃತಪಟ್ಟವರಲ್ಲಿ ಒಬ್ಬಾತ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತನೂ ಸೇರಿದ್ದಾಗಿ ವರದಿಯಾಗಿದೆ. ತನಿಖೆಯನ್ನು ತಾವು ಕೈಗೆತ್ತಿಕೊಂಡಿದ್ದನ್ನು ಸ್ಪಷ್ಟಪಡಿಸಿದ್ದ ಎನ್​ಐಎ ಅಧಿಕಾರಿಯೊಬ್ಬರು, ಖೆಜುರಿ ಬಾಂಬ್​ ಬ್ಲಾಸ್ಟ್ ಪ್ರಕರಣದ ತನಿಖೆಯನ್ನು ನಾವು ನಡೆಸಲಿದ್ದೇವೆ. ರಾಜ್ಯ ಪೊಲೀಸರು ಈ ಕೇಸ್​​ನ್ನು ನಮಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿಸಿದ್ದರು. ಇನ್ನು ಘಟನೆ ನಡೆದ ಬೆನ್ನಲ್ಲೇ ಟಿಎಂಸಿ ಇದನ್ನು ಬಿಜೆಪಿ ತಲೆಗೆ ಕಟ್ಟಿದೆ. ಬಾಂಬ್​ ಬ್ಲಾಸ್​ ಹಿಂದೆ ಬಿಜೆಪಿ ಗೂಂಡಾಗಳು ಇದ್ದಾರೆ ಎಂದು ಆರೋಪ ಮಾಡಿದೆ. ಅಷ್ಟೇ ಅಲ್ಲ, ಘಟನೆ ಬೆನ್ನಲ್ಲೇ ಖೆಜುರಿಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ  ಗಲಾಟೆಯೂ ನಡೆದಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: ಉಕ್ರೇನ್​ ಸೇನೆ ಸೇರಲು ಸರತಿ ಸಾಲಿನಲ್ಲಿ ನಿಂತ 80 ವರ್ಷದ ವೃದ್ಧ: ಫೋಟೋ ವೈರಲ್​

Published On - 9:51 am, Sat, 26 February 22