ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಬಂತು ಕೊರೊನಾ ಸೋಂಕು

Allu Arjun tests coronavirus positive | ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಬಂತು ಕೊರೊನಾ ಸೋಂಕು

ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಬಂತು ಕೊರೊನಾ ಸೋಂಕು
ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಬಂತು ಕೊರೊನಾ ಸೋಂಕು

Updated on: Apr 28, 2021 | 12:19 PM

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಯುವ ನಟ ಅಲ್ಲು ಅರ್ಜುನ್​ಗೂ ಕೊರೊನಾ ಸೋಂಕು ಬಂದಿದೆ. ಪ್ರಸ್ತುತ ಅವರು ಮನೆಯಲ್ಲಿಯೇ ಹೋಮ್ ಕ್ವಾರಂಟೈನ್​ ಆಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಅಲ್ಲು ಅರ್ಜುನ್ ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಅಭಿಮಾನಿಗಳು ಗಾಬರಿ ಆಗುವುದು ಬೇಡ. Stay home, stay safe ಎಂದು ಅವರು ಸಂದೇಶ ನೀಡಿದ್ದಾರೆ.

38 ವರ್ಷ ವಯಸ್ಸಿನ ಅಲ್ಲು ಅರ್ಜುನ್, 2003ರಲ್ಲಿ ಗಂಗೋತ್ರಿ ಅನ್ನುವ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದಕ್ಕೂ ಮುಂಚೆ 2001ರಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಬನ್ನೀ ಎಂದೇ ಖ್ಯಾತರಾಗಿರುವ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ಪುಷ್ಪಾ (Pushpa) ಆಗಸ್ಟ್​ ತಿಂಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆಯೂ ಮುಂದುವರಿದ ಹೊಸ ಸಂಸತ್ ಭವನ ನಿರ್ಮಾಣ ಕಾಮಗಾರಿ; ಕಾರ್ಮಿಕರ ಅನುಕೂಲಕ್ಕಾಗಿ ಪೊಲೀಸರಿಗೆ ಪತ್ರ

ನಿಮ್ಮ ಮನೆಯಲ್ಲಿಯೇ ತುರ್ತು ನಿಗಾ ಘಟಕ ಅಂದ್ರೆ ICU ಸ್ಥಾಪಿಸಿಕೊಳ್ಳುವುದು ಹೇಗೆ? ಅದರ ಪಾಲನೆ ಹೇಗೆ?

(Telugu star Allu Arjun tests coronavirus positive actor isolates himself at home)

Published On - 12:04 pm, Wed, 28 April 21