AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಜಾಹೀರಾತು; ಸ್ಟೋರಿಯಾ ಕಂಪನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Ad mocking Sonia and Rahul Gandhi: ಸ್ಟೋರಿಯಾ ಫುಡ್ಸ್ ಕಂಪನಿ ಜಾಹೀರಾತೊಂದನ್ನು ಪ್ರಸಾರ ಮಾಡಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗೇಲಿ ಮಾಡಲಾಗಿದೆ.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಜಾಹೀರಾತು; ಸ್ಟೋರಿಯಾ ಕಂಪನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಸ್ಟೋರಿಯಾ ಜಾಹೀರಾತಿನ ದೃಶ್ಯ
ರಶ್ಮಿ ಕಲ್ಲಕಟ್ಟ
| Updated By: Digi Tech Desk|

Updated on:Apr 28, 2021 | 2:12 PM

Share

ಮುಂಬೈ: ಸ್ಟೋರಿಯಾ ಫುಡ್ಸ್ ಅಂಡ್ ಬಿವರೇಜಸ್ ಎಂಬ ಮುಂಬೈ ಮೂಲದ ಕಂಪನಿ, ಪಾನೀಯದ ಜಾಹೀರಾತಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಗೇಲಿ ಮಾಡಿದ್ದು, ಪ್ರಸ್ತುತ ಕಂಪನಿ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸಿದೆ.  ಮುಂಬೈ ಕಾಂಗ್ರೆಸ್ ಮತ್ತು ಮುಂಬೈ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸ್ಟೋರಿಯಾ ಫುಡ್ಸ್ ಅಂಡ್ ಬಿವರೇಜಸ್ ಕಂಪನಿಗೆ ನುಗ್ಗಿ, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ . ಸ್ಟೋರಿಯಾ ಫುಡ್ಸ್ ಕಂಪನಿ ಜಾಹೀರಾತೊಂದನ್ನು ಪ್ರಸಾರ ಮಾಡಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಗೇಲಿ ಮಾಡಲಾಗಿದೆ. ಈ ಜಾಹೀರಾತು ವಿರುದ್ಧ ಪ್ರತಿಭಟಿಸುವುದಕ್ಕಾಗಿ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಭಾಯ್ ಜಗತಾಪ್ ಅವರ ನಿರ್ದೇಶನದಂತೆ, ಪ್ರಧಾನ ಕಾರ್ಯದರ್ಶಿ ನಿತಿನ್ ಸಾವಂತ್ ಮತ್ತು ಮುಂಬೈ ಯೂತ್ ಕಾಂಗ್ರೆಸ್ ನಾಯಕರು ಮುಂಬೈಯ ಪೂರ್ವ ಅಂಧೇರಿಯಲ್ಲಿರುವ ಸ್ಟೋರಿಯಾ  ಫುಡ್ಸ್ ಕಚೇರಿಯಲ್ಲಿ ದಾಂಧಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಘಟಕದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಘಟನೆ ನಂತರ ಟ್ವೀಟ್ ಮಾಡಿದ ಜಗತಾಪ್, ಮುಂಬೈ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿತಿನ್ ಸಾವಂತ್ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸ್ಟೋರಿಯಾ ಕಂಪನಿಯ ಜಾಹೀರಾತು ವಿರುದ್ಧ ಪ್ರತಿಭಟಸಿದ್ದಕ್ಕೆ ಅಭಿನಂದನೆ ಮತ್ತು ಶ್ಲಾಘನೆ. ಈ ರೀತಿ ಕೆಟ್ಟ ವ್ಯಾಪಾರಗಳನ್ನು ನಾವು ಸಹಿಸಿಕೊಳ್ಳಬಾರದು ಎಂದಿದ್ದಾರೆ.

ಈ ಜಾಹೀರಾತನ್ನು ತಕ್ಷಣವೇ ನಿಷೇಧಿಸಬೇಕು. ಸ್ಟೋರಿಯಾ ಫುಡ್ಸ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮುಂಬೈ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿ ಸ್ಟೋರಿಯಾ ಫುಡ್ಸ್ ಕಚೇರಿ ಮುಚ್ಚಿಸುತ್ತೇವೆ ಎಂದು ಜಗತಾಪ್ ಹೇಳಿದ್ದಾರೆ.

ಮುಂಬೈನಲ್ಲಿ ಕೊವಿಡ್ ನಿಯಂತ್ರಿಸಲು ಲಾಕ್​ಡೌನ್ ಹೇರಿರುವ ಹೊತ್ತಲ್ಲಿಯೇ ಕಾಂಗ್ರೆಸ್ ಈ ಪ್ರತಿಭಟನೆ ನಡೆಸಿದೆ. ಮುಂಬೈ ಮೂಲದ ಸ್ಟೋರಿಯಾ ಫುಡ್ಸ್ ಕಂಪನಿ 2016ರಲ್ಲಿ ಆರಂಭವಾಗಿತ್ತು. ಈ ಕಂಪನಿ ನೈಸರ್ಗಿಕ ಮತ್ತು ಆರೋಗ್ಯಕರವಾದ ಶೇಕ್ ಮತ್ತು ಜ್ಯೂಸ್ ತಯಾರಿಸುತ್ತದೆ. ಪ್ರಸ್ತುತ ಕಂಪನಿ ಸೋಮವಾರ ಜಾಹೀರಾತೊಂದನ್ನು ಪ್ರಸಾರ ಮಾಡಿದ್ದು ,ಈ ಜಾಹೀರಾತಿನಲ್ಲಿ ಹಾಸ್ಯನಟ ಸಂಕೇತ್ ಬೋಸ್ಲೆ ನಟಿಸಿದ್ದಾರೆ.

ಇದನ್ನೂ ಓದಿ: ವ್ಯವಸ್ಥೆ ವಿಫಲವಾಗಿದೆ, ಈಗ ಜನ್ ಕೀ ಬಾತ್ ಮುಖ್ಯ: ರಾಹುಲ್ ಗಾಂಧಿ

ಮೊದಲು ದೇಶದ ಜನರಿಗೆ ಲಸಿಕೆ ಕೊಡಿ, ನಂತರ ವಿದೇಶಗಳಿಗೆ ರಫ್ತು ಮಾಡಿ: ಸೋನಿಯಾ ಗಾಂಧಿ ಆಗ್ರಹ

Published On - 1:25 pm, Wed, 28 April 21