ಹಾಂಗ್ ಕಾಂಗ್ ಮತ್ತು ಸ್ಥಳೀಯ ಮಾರ್ಕೆಟ್​ಗಳಲ್ಲಿ ಸಿಗುವ ಉಪಕರಣಗಳಿಂದ ಉಗ್ರ ಸಂಘಟನೆಗಳು ಡ್ರೋನ್​ಗಳನ್ನು ತಯಾರಿಸುತ್ತವೆ

24 ಕಿಲೋಗ್ರಾಮ್ ತೂಕದ ಕ್ಯೂಬ್​ಬ್ಲ್ಯಾಕ್ ಡ್ರೋನಿನ ಹಾರಾಟ ನಿಯಂತ್ರಕ ಹಾಂಗ್ ಕಾಂಗ್​ನಲ್ಲಿ ತಯಾರಿಸಲ್ಪಟ್ಟಿತ್ತು. ಡ್ರೋನ್​ನಲ್ಲಿ ಯಾವುದೇ ಪೂರ್ವ ನಿಯೋಜಿತ ಮಿಷನ್ ಅಳವಡಿಸಲಾಗಿರಲಿಲ್ಲ ಮತ್ತು ಅದನ್ನು ಗ್ರೌಂಡ್​ ಕಂಟ್ರೋಲ್ ಸಿಸ್ಟಮ್ ಮೂಲಕ ನೆಲದ ಮೇಲಿನ ವ್ಯಕ್ತಿಯಿಂದ ನಿಯಂತ್ರಿಸಲ್ಪಟ್ಟಿತ್ತು.

ಹಾಂಗ್ ಕಾಂಗ್ ಮತ್ತು ಸ್ಥಳೀಯ ಮಾರ್ಕೆಟ್​ಗಳಲ್ಲಿ ಸಿಗುವ ಉಪಕರಣಗಳಿಂದ ಉಗ್ರ ಸಂಘಟನೆಗಳು ಡ್ರೋನ್​ಗಳನ್ನು ತಯಾರಿಸುತ್ತವೆ
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2021 | 6:09 PM

ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಡ್ರೋನ್​ಗಳು ಕಾಣಿಸಿಕೊಳ್ಳಲಾರಂಭಿಸಿ ಹಲವು ವರ್ಷಗಳು ಕಳೆದಿವೆ. ಗಮನಿಸಬೇಕಿರುವ ಸಂಗತಿಯೇನೆಂದರೆ, ಈ ಚಟುವಟಿಗಳಲ್ಲಿ ಹೆಚ್ಚಿನವು ಭಯೋತ್ಪಾದಕ ಸಂಘಟನೆಗಳಾಗಿರುವ ಲಷ್ಕರ್-ಎ ತೈಬಾ (ಎಲ್​ಇಟಿ) ಮತ್ತು ಜೈಷ್-ಎ-ಮೊಹಮ್ಮದ್ (ಜೆಇಎಮ್)ಗಳಿಂದ ಆಯೋಜಿಸಲ್ಪಟ್ಟಿವೆ. ರವಿವಾರದಂದು ಎರಡು ಡ್ರೋನ್​ಗಳು ಜಮ್ಮುವಿನ ವಾಯುದಳ ನೆಲೆ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದು ತನಿಖೆಯ ನಂತರ ಈ ಕುಕೃತ್ಯವನ್ನು ಎಲ್​ಇಟಿ ನಡೆಸಿದ್ದು ಎನ್ನುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ಜೂನ್​ನಲ್ಲಿ ಭಾರತದ ಭದ್ರತಾ ಪಡೆಗಳು ಇಂಥ ಒಂದು ಡ್ರೋನ್ ಚಟುವಟಿಕೆಯನ್ನು ಹತ್ತಿಕ್ಕಿದ್ದವು. ಗಡಿ ರಕ್ಷಣಾ ದಳ (ಬಿಎಸ್​ಎಫ್) ಹೊಡೆದುರುಳಿಸಿದ ಡ್ರೋಣ್ ಬಯಲು ಪ್ರದೇಶವೊಂದರಲ್ಲಿ ಬಿದ್ದಿತ್ತು. ದೆಹಲಿಯಲ್ಲಿರುವ ಡ್ರೋನ್ ಫೆಡರೇಶನ್ ಆಫ್​ ಇಂಡಿಯಾ (ಡಿಎಫ್ಐ) ವಿಧಿವಿಜ್ಞಾನ ಪರಿಕ್ಷೆ ನಡೆಸಿ ಅದು ಸ್ಥಳೀಯವಾಗಿ ತಯಾರಿಸಲಾಗಿದ್ದ ಹೆಕ್ಸಾಕಾಪ್ಟರ್ ಎಂದು ಹೇಳಿತ್ತು. ಅದರಲ್ಲಿ ಉಪಯೋಗಿಸಿದ ಬಿಡಿ ಭಾಗಗಳು ಹಾಬಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತವೆ ಎಂದು ಅದು ಹೇಳಿತ್ತು.

24 ಕಿಲೋಗ್ರಾಮ್ ತೂಕದ ಕ್ಯೂಬ್​ಬ್ಲ್ಯಾಕ್ ಡ್ರೋನಿನ ಹಾರಾಟ ನಿಯಂತ್ರಕ ಹಾಂಗ್ ಕಾಂಗ್​ನಲ್ಲಿ ತಯಾರಿಸಲ್ಪಟ್ಟಿತ್ತು. ಡ್ರೋನ್​ನಲ್ಲಿ ಯಾವುದೇ ಪೂರ್ವ ನಿಯೋಜಿತ ಮಿಷನ್ ಅಳವಡಿಸಲಾಗಿರಲಿಲ್ಲ ಮತ್ತು ಅದನ್ನು ಗ್ರೌಂಡ್​ ಕಂಟ್ರೋಲ್ ಸಿಸ್ಟಮ್ ಮೂಲಕ ನೆಲದ ಮೇಲಿನ ವ್ಯಕ್ತಿಯಿಂದ ನಿಯಂತ್ರಿಸಲ್ಪಟ್ಟಿತ್ತು.

ದತ್ತಾಂಶ ಸಂಗ್ರಹದ ಎಲ್ಲ ಮಾಧ್ಯಮಗಳನ್ನು ಆಪರೇಟರ್ ನಿಸ್ಕ್ರಿಯಗೊಳಿಸಿದ್ದ ಎಂದು ಡಿಎಫ್​ಐ ಹೇಳಿತ್ತು. ಡ್ರೋನ್ ಅನ್ನು ಹಾರಿಬಿಟ್ಟ ಸ್ಥಳದಿಂದ ಅದರ ಪರಿಧಿ 10 ಕಿಲೋಮೀಟರ್​ಗಷ್ಟಾಗಿತ್ತು ಎಂದು ಸಹ ಡಿಎಫ್​ಐ ಹೇಳಿತ್ತು. ಅದು ಸುಮಾರು 35 ನಿಮಿಷಗಳ ಕಾಲ ಗಾಳಿಯಲ್ಲಿತ್ತು ಎಂದು ಹೇಳಿದ ಡಿಎಫ್​ಐ ವಿಜ್ಞಾನಿಗಳು ಅದರ ಗರಿಷ್ಠ ವ್ಯಾಪ್ತಿ ಪ್ರದೇಶ 30 ಕಿಲೋಮೀಟರ್​ಗಳಾಗಿತ್ತು ಅಂತ ತಿಳಿಸಿದ್ದರು. ಡ್ರೋನ್ ಮೇಲೆ ಹೊರಗಿನ ಹ್ಯಾಕಿಂಗ್ ಆಗಲೀ, ಕಸ್ಟಮ್​ ಫರ್ಮ್​ವೇರ್​ ಆಗಲೀ ಕಂಡುಬರಲಿಲ್ಲ ಎಂದು ಡಿಎಫ್​ಐ ತಜ್ಞರು ಹೇಳಿದ್ದರು. ಕಳೆದ ಜೂನ್​ನಲ್ಲಿ ಹೊಡೆದುರುಳಿಸಿದ ಡ್ರೋನ್​ ತಯಾರಿಕೆ ಬಳಸಿಸದ ಉಪಕರಣಗಳ ಮೇಲಿನ ಲೇಬಲ್​​ಗಳನ್ನು ಆಧಾರವಾಗಿಟ್ಟುಕೊಂಡು, ಡ್ರೋನ್​ಗಳನ್ನು ಬ್ಯಾಚ್​ಗಳಲ್ಲಿ ತಯಾರಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದರು.

ಉನ್ನತ ಭದ್ರತಾ ಅಧಿಕಾರಿಗಳ ಪ್ರಕಾರ ಪಾಕಿಸ್ತಾನ ಆಶ್ರಿತ ಮತ್ತು ಅದರ ಬೆಂಬಲಿತ ಉಗ್ರ ಸಂಘಟನೆಗಳು ಇದುವರೆಗೆ 14 ಬಾರಿ ಭಾರತದ ಗಡಿ ಪ್ರದೇಶದೊಳಗೆ ಡ್ರೋನ್​ಗಳನ್ನು ಹಾರಿಬಿಟ್ಟಿದ್ದಾರೆ.

ರವಿವಾರ ರಾತ್ರಿ ಭಾರತದ ಮಿಲಿಟರಿ ವ್ಯವಸ್ಥೆ ಮೇಲೆ ಡ್ರೋನ್​ಗಳ ಮೂಲಕ ದಾಳಿ ನಡೆಸುವ ಹೊಸ ಪ್ರಯತ್ನವನ್ನು ಮಾಡಲಾಯಿತಾದರೂ ಭಾರತದ ಜಾಗರೂಕ ಭದ್ರತಾ ಪಡೆಗಳು ಅವುಗಳನ್ನು ಹಿಮ್ಮೆಟ್ಟಿಸಿದವು. ರತ್ನುಚಕ್-ಕಲುಚಕ್ ಸೇನಾನೆಲೆಗಳಲ್ಲಿರುವ ಭದ್ರತಾ ಸಿಬ್ಬಂದಿಯು ಮಾನವರಹಿತ ವಾಯು ವಾಹನಗಳತ್ತ ಗುಂಡು ಹಾರಿಸಿದಾಗ ಅವು ವಾಪಸ್ಸು ಹಾರಿ ಹೋದವು.

ಮೊದಲ ಡ್ರೋನ್ ರಾತ್ರಿ ಸುಮಾರು 11-45 ಗಂಟೆಗೆ ಕಾಣಿಸಿಕೊಂಡರೆ ಎರಡನೇಯದ್ದು ಬೆಳಗಿನ ಜಾವ ಸುಮಾರು 2.40 ಕ್ಕೆ ಗೋಚರವಾಗಿತ್ತು. ಕೂಡಲೇ ಸರ್ಚ್​ ಕಾರ್ಯಾಚಣೆ ಆರಂಭಿಸಿ ಮಿಲಿಟರಿ ನೆಲೆ ಸುತ್ತ ಭದ್ರತೆ, ಹೆಚ್ಚಿಸಲಾಯಿತು.

2002ರಲ್ಲಿ ನಡೆದ ಭಯೋತ್ಪಾದಕ ದಾಳಿ ನಂತರ ಕಲುಚಕ್ ಸೇನಾನೆಲೆಯನ್ನು ಹೈ ಅಲರ್ಟ್​ನಲ್ಲಿಡಲಾಗಿದೆ. ಆಗ ನಡೆದ ದಾಳಿಯಲ್ಲಿ 10 ಮಕ್ಕಳೂ ಸೇರಿದಂತೆ 31 ಜನ ಬಲಿಯಾಗಿದ್ದರು ಹಾಗೆಯೇ, 13 ಜನ ಸೇನಾ ಸಿಬ್ಬಂದಿ, ಈ ಸಿಬ್ಬಂದಿಯ ಕುಟುಂಬಗಳ ಸದಸ್ಯರು 20 ಜನ ಮತ್ತು 15 ನಾಗರಿಕರು ಗಾಯಗೊಂಡಿದ್ದರು.

ಇದನ್ನೂ ಓದಿ: ಐಎಎಫ್ ನೆಲೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಜಮ್ಮುವಿನ ಕಲುಚಕ್ ಸೇನಾ ಶಿಬಿರದ ಮೇಲೆ ಮತ್ತೆರಡು ಡ್ರೋನ್ ಪತ್ತೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್