Twitter: ಭಾರತದ ತಪ್ಪು ಭೂಪಟ ಪ್ರದರ್ಶಿಸಿದ ಟ್ವಿಟರ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ

ಟ್ವಿಟರ್‌ನಲ್ಲಿ ಭಾರತದ ಭೂಪಟ ತಪ್ಪಾಗಿ ಪ್ರದರ್ಶನಗೊಂಡಿತ್ತು. ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಪ್ರತ್ಯೇಕ ದೇಶಗಳೆಂದು ಕಂಡುಬಂದಿತ್ತು. ಟ್ವಿಟರ್‌ ಕಂಪೆನಿ ವೆಬ್‌ಸೈಟ್‌ನ ಉದ್ಯೋಗ ಸೆಕ್ಷನ್ (Career) ಅಡಿಯಲ್ಲಿ ಈ ಪ್ರಮಾದ ಕಂಡುಬಂದಿತ್ತು.

Twitter: ಭಾರತದ ತಪ್ಪು ಭೂಪಟ ಪ್ರದರ್ಶಿಸಿದ ಟ್ವಿಟರ್ ವಿರುದ್ಧ ಕೇಂದ್ರ ಸರ್ಕಾರ ಕ್ರಮ
ಟ್ವಿಟರ್ ವೆಬ್​ಸೈಟ್​ನಲ್ಲಿ ಪ್ರದರ್ಶಿಲ್ಪಟ್ಟ ತಪ್ಪು ಭೂಪಟ
Follow us
TV9 Web
| Updated By: ganapathi bhat

Updated on:Jun 28, 2021 | 6:01 PM

ದೆಹಲಿ: ಟ್ವಿಟರ್‌ನಲ್ಲಿ ತಪ್ಪಾಗಿ ಪ್ರದರ್ಶನವಾಗಿರುವ ಭಾರತದ ಭೂಪಟ ಕುರಿತ ವಿಚಾರದ ಬಗ್ಗೆ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನಿಖೆ ನಡೆಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿರುವ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಕೇಂದ್ರ ಸರ್ಕಾರ ಹಾಗೂ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ನಡುವೆ ಕೆಲದಿನಗಳಿಂದ‌ ನಡೆಯುತ್ತಿರುವ ತಿಕ್ಕಾಟಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮಹತ್ವ ಪಡೆದುಕೊಂಡಿದೆ.

ಟ್ವಿಟರ್‌ನಲ್ಲಿ ಭಾರತದ ಭೂಪಟ ತಪ್ಪಾಗಿ ಪ್ರದರ್ಶನಗೊಂಡಿತ್ತು. ಲಡಾಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಪ್ರತ್ಯೇಕ ದೇಶಗಳೆಂದು ಕಂಡುಬಂದಿತ್ತು. ಟ್ವಿಟರ್‌ ಕಂಪೆನಿ ವೆಬ್‌ಸೈಟ್‌ನ ಉದ್ಯೋಗ ಸೆಕ್ಷನ್ (Career) ಅಡಿಯಲ್ಲಿ ಈ ಪ್ರಮಾದ ಕಂಡುಬಂದಿತ್ತು.

ಟ್ವಿಟರ್ ಇದು ಎರಡನೇ ಬಾರಿಗೆ ಭಾರತದ ಮ್ಯಾಪ್‌ನ್ನು ತಪ್ಪಾಗಿ ತೋರಿಸಿದೆ. ಈ ಮೊದಲು, ಕಳೆದ ಅಕ್ಟೋಬರ್ ತಿಂಗಳಲ್ಲಿ ಲೆಹ್ ಪ್ರದೇಶವನ್ನು ಚೀನಾದ ಭಾಗವಾಗಿ ತೋರಿಸಿದ್ದಕ್ಕೆ ಸರ್ಕಾರ ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಟ್ವಿಟರ್ ಸಿಇಒಗೆ ಪತ್ರ ಬರೆದಿದ್ದ ಕೇಂದ್ರ ಭಾರತದ ಭೂಪಟ ತಪ್ಪಾಗಿ ತೋರಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಕಳೆದ ಡಿಸೆಂಬರ್ ತಿಂಗಳಲ್ಲಿ ವಿಕಿಪೀಡಿಯಾ ಕೂಡ ಇಂತಹ ಪ್ರಮಾದ ಮಾಡಿತ್ತು. ದೇಶದ ಗಡಿಭಾಗಗಳನ್ನು ತಪ್ಪಾಗಿ ತೋರಿಸಿತ್ತು. ಅದು ಒಂದು ಪ್ರತ್ಯೇಕ ಪೇಜ್‌ನಲ್ಲಿ ಆದ ಬದಲಾವಣೆ ಆದಕಾರಣ ಅದನ್ನು ಸ್ಕ್ರಾಪ್ ಮಾಡುವಂತೆ ಸೂಚನೆ ನೀಡಲಾಗಿತ್ತು.

ಟ್ವಿಟರ್ ಕುಂದುಕೊರತೆ ಪರಿಹಾರ ಅಧಿಕಾರಿ ನೇಮಕ ಕೇಂದ್ರ ಸರ್ಕಾರದ ಜೊತೆಗಿನ ಜಟಾಪಟಿಯ‌ ನಡುವೆ ಟ್ವಿಟರ್ ಗ್ಲೋಬಲ್ ಲೀಗಲ್ ಪಾಲಿಸಿ ನಿರ್ದೇಶಕ ಜೆರೆಮಿ ಕೆಸ್ಸೆಲ್ ಅವರನ್ನು ಭಾರತದ ಕುಂದುಕೊರತೆ ಪರಿಹಾರ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣಗಳಿಗೆ ಅನ್ವಯಿಸುವಂತಹ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳನ್ನು ಅನುಸರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ನೇಮಕವಾಗಿದ್ದ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಧರ್ಮೇಂದ್ರ ಚತುರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ‌.

ಟ್ವಿಟರ್ ಧರ್ಮೇಂದ್ರ ಚತುರ್‌ರನ್ನು ಮಧ್ಯಂತರ ಕುಂದುಕೊರತೆ ಅಧಿಕಾರಿಯಾಗಿ‌ ನೇಮಕ ಮಾಡಿರುವ ಬಗ್ಗೆ ಮೇ 31ರಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ, ಈ ಹುದ್ದೆಗೆ ಹೊರಗಿನವರನ್ನು ನೇಮಕ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರ ಅಸಮ್ಮತಿ ಸೂಚಿಸಿತ್ತು.

ಇದನ್ನೂ ಓದಿ: Twitter India: ಟ್ವಿಟರ್ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ಯುಎಸ್​ನ ಜೆರೆಮಿ ಕೆಸ್ಸೆಲ್ ನೇಮಕ

ಜಮ್ಮು ಕಾಶ್ಮೀರ ಸ್ವತಂತ್ರ ದೇಶ, ಲೇಹ್ ಚೀನಾದ ಭಾಗ ಎಂಬ ತಪ್ಪು ಭೂಪಟ ಪ್ರದರ್ಶಿಸಿದ ಟ್ವಟರ್

Published On - 5:28 pm, Mon, 28 June 21