Nirmala Sitharaman: ಸಣ್ಣ ಉದ್ಯಮಗಳ ಕಾಯಕಲ್ಪಕ್ಕೆ ದೊಡ್ಡಮೊತ್ತದ ಕೇಂದ್ರದಿಂದ ಹಣ ನಿಗದಿ: ಯಾವ ಕ್ಷೇತ್ರಕ್ಕೆ ಎಷ್ಟು ಸಾಲ? ಎಷ್ಟು ಅನುದಾನ ಇಲ್ಲಿದೆ ಮಾಹಿತಿ

‘ಕೊವಿಡ್ ಬಾಧಿತ ಕ್ಷೇತ್ರಗಳ ಪುನರುಜ್ಜೀವನಕ್ಕೇಂದು ₹ 1.1 ಲಕ್ಷ ಕೋಟಿ ಸಾಲ ಖಾತ್ರಿ ಯೋಜನೆ ಪ್ರಕಟಿಸುತ್ತಿದ್ದೇವೆ. ಈ ಪೈಕಿ ₹ 50 ಸಾವಿರವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು

Nirmala Sitharaman: ಸಣ್ಣ ಉದ್ಯಮಗಳ ಕಾಯಕಲ್ಪಕ್ಕೆ ದೊಡ್ಡಮೊತ್ತದ ಕೇಂದ್ರದಿಂದ ಹಣ ನಿಗದಿ: ಯಾವ ಕ್ಷೇತ್ರಕ್ಕೆ ಎಷ್ಟು ಸಾಲ? ಎಷ್ಟು ಅನುದಾನ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 28, 2021 | 6:01 PM

ದೆಹಲಿ: ಕೊವಿಡ್ 2ನೇ ಅಲೆಯ ಹೊಡೆತದಿಂದ ಕುಸಿತ ಕಂಡಿರುವ ದೇಶದ ವಿವಿಧ ವಲಯಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರವು ಸೋಮವಾರ ₹ 1.1 ಲಕ್ಷ ಕೋಟಿ ಮೊತ್ತದ ಸಾಲ ಖಾತರಿ ಯೋಜನೆ ಪ್ರಕಟಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಯ ವಿವರಗಳನ್ನು ನೀಡಿದರು. ಈ ಪೈಕಿ ₹ 50 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರುವುದು ವಿಶೇಷ ಎನಿಸಿದೆ.

‘ನಾವು ಒಟ್ಟು 8 ಆರ್ಥಿಕ ಪರಿಹಾರ ಕ್ರಮಗಳನ್ನು ಪ್ರಕಟಿಸುತ್ತಿದ್ದೇವೆ. ಈ ಪೈಕಿ ನಾಲ್ಕು ಸಂಪೂರ್ಣ ಹೊಸತು. ಒಂದು ಆರೋಗ್ಯ ಕ್ಷೇತ್ರಕ್ಕೆ ನೇರವಾಗಿ ಸಂಬಂಧಿಸಿದ್ದು. ಕೊವಿಡ್ ಬಾಧಿತ ಕ್ಷೇತ್ರಗಳ ಪುನರುಜ್ಜೀವನಕ್ಕೇಂದು ₹ 1.1 ಲಕ್ಷ ಕೋಟಿ ಸಾಲ ಖಾತ್ರಿ ಯೋಜನೆ ಪ್ರಕಟಿಸುತ್ತಿದ್ದೇವೆ. ಈ ಪೈಕಿ ₹ 50 ಸಾವಿರವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಸಾಲ ಖಾತರಿ ಯೋಜನೆಯಿಂದ ನೇರವಾಗಿ 25 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದರು. ಮೈಕ್ರೊ-ಫೈನಾನ್ಸ್​ ಸಂಸ್ಥೆಗಳಿಂದ ಸಾಲವನ್ನು ಅತಿಸಣ್ಣ ಸಾಲಗಾರರಿಗೂ ನೀಡಲಾಗುವುದು. ಈ ಯೋಜನೆಯಡಿ ಗರಿಷ್ಠ ₹ 1.25 ಲಕ್ಷವನ್ನು ಸಾಲವಾಗಿ ನೀಡಲಾಗುತ್ತದೆ. ನಮ್ಮ ಗಮನವು ಹೊಸ ಯೋಜನೆಗಳ ಬಗ್ಗೆ ಇರುತ್ತದೆಯೇ ಹೊರತು ಹಳೆಯ ಸಾಲಗಳ ಮರುಪಾವತಿ ಬಗ್ಗೆ ಅಲ್ಲ’ ಎಂದು ನಿರ್ಮಲಾ ಸೋಮವಾರ ವರದಿಗಾರರಿಗೆ ತಿಳಿಸಿದರು.

ಸಾಲ ಖಾತ್ರಿ ಯೋಜನೆಯಡಿ ಬಡ್ಡಿ ದರ ಸಾಲ ಖಾತ್ರಿ ಯೋಜನೆಯಡಿ ನೀಡುವ ಸಾಲಗಳಿಗೆ ರಿಸರ್ವ್​ ಬ್ಯಾಂಕ್​ ನಿಗದಿಪಡಿಸಿರುವ ಬಡ್ಡಿಗಿಂತಲೂ ಶೇ 2ರಷ್ಟು ಕಡಿಮೆ ಬಡ್ಡಿ ಇರುತ್ತದೆ. ಸಾಲ ಪಾವತಿಗೆ 3 ವರ್ಷಗಳ ಕಾಲಾವಕಾಶ ಸಿಗುತ್ತದೆ. ಹೊಸ ಸಾಲ ವಿತರಣೆ ಮತ್ತು ಈಗಾಗಲೇ ಸಾಲ ಪಡೆದು ಸಂಕಷ್ಟದಲ್ಲಿರುವವರ ನೆರವಿಗೆ ಬರುವುದು ನಮ್ಮ ಆದ್ಯತೆಯಾಗಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಗ್ರಾಮೀಣ ಪ್ರದೇಶ ಮತ್ತು ಸಣ್ಣ ಪಟ್ಟಣಗಳಲ್ಲಿರುವ ಅತಿ ಸಣ್ಣ ಸಾಲಗಾರರನ್ನೂ ನಾವು ತಲುಪಲಿದ್ದೇವೆ ಎಂದು ವಿಶ್ವಾಸ ಪ್ರದರ್ಶಿಸಿದರು. ಆರೋಗ್ಯ ಕ್ಷೇತ್ರ ಹೊರತುಪಡಿಸಿ ಬೇರೆ ವಲಯಗಳಿಗೆ ಶೇ 8.25ರ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.  ಎನ್​ಪಿಎ ಘೋಷಣೆಯಾಗದ ಸಾಲಗಾರರದು ಅಂದರೆ 89 ದಿನದವರೆಗೂ ಸಾಲ ಮರುಪಾವತಿ ಮಾಡದವರು ಈ ಯೋಜನೆಯಡಿ ಸಾಲ ಪಡೆಯಲು ಅರ್ಹರು.

ತುರ್ತು ಸಾಲ ಖಾತ್ರಿ ಯೋಜನೆ ಆತ್ಮನಿರ್ಭರ್ ಭಾರತ ಪ್ಯಾಕೇಜ್​ನಡಿ ಕಳೆದ ವರ್ಷ ಘೋಷಿಸಿದ್ದ ₹ 3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಖಾತ್ರಿ ಯೋಜನೆಯ (Emergency Credit Line Guarantee Scheme – ECLGS) ಮೊತ್ತವನ್ನೂ ₹ 4.5 ಲಕ್ಷ ಕೋಟಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಕೊಲ್ಯಾಟ್ರಲ್ ಇಲ್ಲದೆ ಸಾಲ ನೀಡಲು ಈ ನಿಧಿಯನ್ನು ಬಳಸಲು ಹಣಕಾಸು ಇಲಾಖೆ ಉದ್ದೇಶಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ₹ 50,000 ಕೋಟಿ ಆರೋಗ್ಯ ಕ್ಷೇತ್ರವನ್ನು ಸದೃಢಗೊಳಿಸಲು ₹ 50,000 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ತೆಗೆದಿರಿಸಿದೆ. ಈ ಹಣದಿಂದ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಸದೃಢಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಆರೋಗ್ಯ ಕ್ಷೇತ್ರಕ್ಕೆ ಘೋಷಿಸಿರುವ 50 ಸಾವಿರ ಕೋಟಿ ರೂಪಾಯಿ ಸಾಲ ಗ್ಯಾರಂಟಿ ಯೋಜನೆಯ ಲಾಭವನ್ನು ದೇಶದ 8 ಮಹಾನಗರಗಳನ್ನು ಹೊರತುಪಡಿಸಿ ಉಳಿದ ನಗರಗಳು ಪಡೆದುಕೊಳ್ಳಬಹುದು. ಆರೋಗ್ಯ ಮೂಲಸೌಕರ್ಯದ ವಿಸ್ತರಣೆ ಹಾಗೂ ಹೊಸದಾಗಿ ಆಸ್ಪತ್ರೆ ಆರಂಭಿಸುವವರಿಗೂ ಈ ಯೋಜನೆಯಡಿ ಸಾಲ ಸಿಗಲಿದೆ. ವಿಸ್ತರಣೆಗಾದರೆ ಶೇ 50ರಷ್ಟು, ಹೊಸ ಯೋಜನೆಯಾದರೆ, ಶೇ 75ರಷ್ಟು ಸಾಲ ನೀಡಲಾಗುತ್ತೆ. ಆದ್ಯತೆಯ ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ ಸ್ಥಾಪನೆ ಮತ್ತು ವಿಸ್ತರಣೆ ಯೋಜನೆಗಳಿಗೆ ಶೇ 75 ರಷ್ಟು ಸಾಲ ನೀಡಲಾಗುತ್ತೆ. ಗರಿಷ್ಠ 100 ಕೋಟಿ ರೂಪಾಯಿವರೆಗೂ ಸಾಲ ನೀಡಲು ಅವಕಾಶವಿದೆ. ಶೇ 7.95 ರ ಬಡ್ಡಿದರದಲ್ಲಿ 3 ವರ್ಷದ ಅವಧಿಗೆ ಸಾಲ ಸಿಗುತ್ತದೆ. ಈ ಸಾಲಕ್ಕೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್​ನ ಖಾತ್ರಿ ಇರುತ್ತದೆ.

(Finance Minister Nirmala Sitharaman announces 8 major relief measures to boost Covid affected sectors)

ಇದನ್ನೂ ಓದಿ: Nirmala Sitharaman: ಟೂರಿಸ್ಟ್​ ಗೈಡ್​ಗಳಿಗೆ 1 ಲಕ್ಷದ ತನಕ ಸಾಲ; ಭಾರತಕ್ಕೆ ಬರುವ 5 ಲಕ್ಷ ವಿದೇಶಿಗರಿಗೆ ವೀಸಾ ಶುಲ್ಕ ಇಲ್ಲ

ಇದನ್ನೂ ಓದಿ: ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

Published On - 5:54 pm, Mon, 28 June 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್