AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirmala Sitharaman: ಟೂರಿಸ್ಟ್​ ಗೈಡ್​ಗಳಿಗೆ 1 ಲಕ್ಷದ ತನಕ ಸಾಲ; ಭಾರತಕ್ಕೆ ಬರುವ 5 ಲಕ್ಷ ವಿದೇಶಿಗರಿಗೆ ವೀಸಾ ಶುಲ್ಕ ಇಲ್ಲ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಮಹತ್ವದ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.

Nirmala Sitharaman: ಟೂರಿಸ್ಟ್​ ಗೈಡ್​ಗಳಿಗೆ 1 ಲಕ್ಷದ ತನಕ ಸಾಲ; ಭಾರತಕ್ಕೆ ಬರುವ 5 ಲಕ್ಷ ವಿದೇಶಿಗರಿಗೆ ವೀಸಾ ಶುಲ್ಕ ಇಲ್ಲ
ಗೋಲಗುಮ್ಮಟ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Jun 28, 2021 | 5:19 PM

Share

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರದಂದು (ಜೂನ್​ 28, 2021) ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ 8 ವಿಚಾರಗಳ ಬಗ್ಗೆ ಮಾತನಾಡಿದರು. ವಿವಿಧ ವಲಯಗಳಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆ ಪೈಕಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿದ ಕ್ರಮಗಳು ಹೀಗಿವೆ:

– 2019ರಲ್ಲಿ ಭಾರತಕ್ಕೆ 1.93 ಕೋಟಿ ವಿದೇಶೀ ಪ್ರವಾಸಿಗರು ಭೇಟಿ ನೀಡಿದ್ದು, 30.098 ಬಿಲಿಯನ್ ಯುಎಸ್​ಡಿ ಮೊತ್ತವನ್ನು ವಿಶ್ರಾಂತಿ ಮತ್ತು ಉದ್ಯಮದ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಒಬ್ಬ ವಿದೇಶೀ ವ್ಯಕ್ತಿ ಸರಾಸರಿ 21 ದಿನ ಭಾರತದಲ್ಲಿ ಉಳಿದಿದ್ದಾರೆ. ಭಾರತದಲ್ಲಿ ಸರಾಸರಿಯಾಗಿ 34 ಅಮೆರಿಕನ್ ಡಾಲರ್ ಅಥವಾ 2400 ರೂಪಾಯಿ ಖರ್ಚು ಮಾಡಿದ್ದಾರೆ. ಕೊರೊನಾ ಮುಗಿದ ನಂತರ ಮತ್ತೆ ವೀಸಾ ವಿತರಣೆ ಆರಂಭಿಸಿದ ಮೇಲೆ ಮೊದಲಿಗೆ ವಿತರಿಸುವ 5 ಲಕ್ಷ ಪ್ರವಾಸಿ ವೀಸಾವನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗೆ ಒಬ್ಬ ಪ್ರವಾಸಿಗೆ ಒಮ್ಮೆ ಮಾತ್ರ ಅನುಕೂಲ ನೀಡಲಾಗುತ್ತದೆ.

– 31ರ ಮಾರ್ಚ್​ 2022 ಅಥವಾ 5 ಲಕ್ಷ ವೀಸಾ ಇವೆರಡರ ಪೈಕಿ ಯಾವುದು ಮೊದಲೋ ಅಲ್ಲಿಯ ತನಕ ಅನ್ವಯ ಆಗಲಿದೆ. ಇದರಿಂದ ಒಟ್ಟಾರೆ 100 ಕೋಟಿ ರೂಪಾಯಿ ಆರ್ಥಿಕ ಪರಿಣಾಮ ಉಂಟಾಗಲಿದೆ.

ಪ್ರವಾಸೋದ್ಯಮ ಕ್ಷೇತ್ರಕ್ಕೆ – ಹೊಸ ಸಾಲ ಖಾತ್ರಿ ಯೋಜನೆ ಅಡಿಯಲ್ಲಿ ಪ್ರವಾಸೋದ್ಯಮ ವಲಯದಲ್ಲಿ ತೊಡಗಿಕೊಂಡವರಿಗೆ ಸಾಲ ತೀರಿಸಲು, ಮತ್ತೆ ಉದ್ಯಮ ಆರಂಭಿಸುವುದಕ್ಕೆ ವರ್ಕಿಂಗ್ ಕ್ಯಾಪಿಟಲ್​/ಪರ್ಸನಲ್ ಲೋನ್ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ ಗುರುತಿಸಲಾದ 10,700 ಪ್ರಾದೇಶಿಕ ಮಟ್ಟದ ಮತ್ತು ರಾಜ್ಯ ಸರ್ಕಾರದಿಂದ ನೋಂದಣಿಯಾದ ಟೂರಿಸ್ಟ್ ಗೈಡ್​ಗಳಿಗೆ ಅನುಕೂಲ ಆಗುತ್ತದೆ.

ಪ್ರವಾಸೋದ್ಯಮ ಸಚಿವಾಲಯದಿಂದ (904) ಗುರುತಿಸಲಾದ ಟ್ರಾವೆಲ್ ಅಂಡ್ ಟೂರಿಸಂ ಸ್ಟೇಕ್​ಹೋಲ್ಡರ್ಸ್​ (ಟಿಟಿಎಸ್)ಗೆ ಶೇ 100ರಷ್ಟು ಖಾತ್ರಿಯೊಂದಿಗೆ ಸಾಲ ಒದಗಿಸಲಾಗುತ್ತದೆ. ಟಿಟಿಎಸ್​ಗೆ (ಒಂದು ಏಜೆನ್ಸಿ) ರೂ. 10 ಲಕ್ಷ, ರಾಜ್ಯ ಅಥವಾ ಪ್ರಾದೇಶಿಕ ಮಟ್ಟದಲ್ಲಿ ಗುರುತಿಸಲಾದ ಟೂರಿಸ್ಟ್​ ಗೈಡ್​ಗಳಿಗೆ 1 ಲಕ್ಷ ನೀಡಲಾಗುತ್ತದೆ. ಇದಕ್ಕೆ ಯಾವುದೇ ಪ್ರೊಸೆಸಿಂಗ್ ಶುಲ್ಕ ಇರುವುದಿಲ್ಲ. ಅದೇ ರೀತಿ ಪೂರ್ವಪಾವತಿ ಅಥವಾ ಭಾಗಶಃ ಪಾವತಿ ಶುಲ್ಕ ಕೂಡ ಇಲ್ಲ. ಇದಕ್ಕೆ ಯಾವುದೇ ಕೊಲ್ಯಾಟರಲ್ ಬೇಕಿಲ್ಲ. ಈ ಯೋಜನೆಯ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಯು ಎನ್​ಸಿಜಿಟಿಸಿ ಮೂಲಕ ನಿರ್ವಹಣೆ ಮಾಡುತ್ತದೆ.

ಇದನ್ನೂ ಓದಿ: Nirmala Sitharaman: ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲು ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್: ಕೇಂದ್ರದಿಂದ 8 ಅಂಶಗಳ ನೆರವು

(Union finance minister announced measures to boost corona hit travel and tourism sector. Here is the details)

Published On - 5:18 pm, Mon, 28 June 21

Follow Us
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು