AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು ಕಾಶ್ಮೀರ ಸ್ವತಂತ್ರ ದೇಶ, ಲೇಹ್ ಚೀನಾದ ಭಾಗ ಎಂಬ ತಪ್ಪು ಭೂಪಟ ಪ್ರದರ್ಶಿಸಿದ ಟ್ವಟರ್

ಸದ್ಯ ಟ್ವಿಟರ್​ನ ಟ್ವೀಪ್ ಲೈಫ್ ವಿಭಾಗದಲ್ಲಿ ಇರುವ ಈ ಭೂಪಟದಲ್ಲಿ ಈ ಪ್ರಮಾದ ಎಸಗಲಾಗಿದೆ. ಈ ಮುನ್ನವೂ 2020ರಲ್ಲಿ ಲೇಹ್ ಪ್ರಾಂತ್ಯವನ್ನು ಚೀನಾಕ್ಕೆ ಸೇರಿದ ಭಾಗವೆಂಬಂತೆ ಟ್ವಿಟರ್ ಭೂಪಟ ಪ್ರದರ್ಶಿಸಿತ್ತು. ತದನಂತರ ಭಾರತ ಎಚ್ಚರಿಕೆ ನೀಡಿದ ಬಳಿಕ ತನ್ನ ತಪ್ಪನ್ನು ತಿದ್ದಿಕೊಂಡಿತ್ತು.

ಜಮ್ಮು ಕಾಶ್ಮೀರ ಸ್ವತಂತ್ರ ದೇಶ, ಲೇಹ್ ಚೀನಾದ ಭಾಗ ಎಂಬ ತಪ್ಪು ಭೂಪಟ ಪ್ರದರ್ಶಿಸಿದ ಟ್ವಟರ್
ಟ್ವಿಟರ್ ವೆಬ್​ಸೈಟ್​ನಲ್ಲಿ ಪ್ರದರ್ಶಿಲ್ಪಟ್ಟ ತಪ್ಪು ಭೂಪಟ
TV9 Web
| Edited By: |

Updated on: Jun 28, 2021 | 4:39 PM

Share

ಟ್ವಟರ್ ಸಂಸ್ಥೆಯ ವೆಬ್​ಸೈಟ್​ನಲ್ಲಿ ಭಾರತದ ಅವಿಭಾಜ್ಯ ಭಾಗಗಳಾದ ಜಮ್ಮು ಕಾಶ್ಮೀರ ಮತ್ತು ಲೇಹ್​ನ್ನು ಭಾರತದಿಂದ ಬೇರ್ಪಡಿಸಿ ಪ್ರದರ್ಶಿಸಲಾಗಿದೆ. ಜಮ್ಮು ಕಾಶ್ಮೀರ ಪ್ರತ್ಯೇಕ ದೇಶವೆಂದೂ, ಲಡಾಕ್​ನ್ನು ಚೀನಾಕ್ಕೆ ಸೇರಿದ ಪ್ರಾಂತ್ಯವೆಂದೂ ಟ್ವಿಟರ್ ವೆಬ್​ಸೈಟ್​ನಲ್ಲಿ ಇರುವ ಮ್ಯಾಪ್ ಸೂಚಿಸುತ್ತಿದೆ. ಭಾರತದ ಭೂಪಟವನ್ನು ಟ್ವಿಟರ್ ಈ ಮುನ್ನವೂ ತಪ್ಪಾಗಿ ಪ್ರದರ್ಶನ ಮಾಡಿತ್ತು. ಟ್ವಿಟರ್​ನ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿ ನೊಟೀಸ್ ಜಾರಿಗೊಳಿಸಿದೆ ಎಂದು ಹೇಳಲಾಗಿದೆ.

ಸದ್ಯ ಟ್ವಿಟರ್​ನ ಟ್ವೀಪ್ ಲೈಫ್ ವಿಭಾಗದಲ್ಲಿ ಇರುವ ಈ ಭೂಪಟದಲ್ಲಿ ಈ ಪ್ರಮಾದ ಎಸಗಲಾಗಿದೆ. ಈ ಮುನ್ನವೂ 2020ರಲ್ಲಿ ಲೇಹ್ ಪ್ರಾಂತ್ಯವನ್ನು ಚೀನಾಕ್ಕೆ ಸೇರಿದ ಭಾಗವೆಂಬಂತೆ ಟ್ವಿಟರ್ ಭೂಪಟ ಪ್ರದರ್ಶಿಸಿತ್ತು. ತದನಂತರ ಭಾರತ ಎಚ್ಚರಿಕೆ ನೀಡಿದ ಬಳಿಕ ತನ್ನ ತಪ್ಪನ್ನು ತಿದ್ದಿಕೊಂಡಿತ್ತು.

ಟ್ವಿಟರ್ ಕುಂದುಕೊರತೆ ಪರಿಹಾರ ಅಧಿಕಾರಿಯಾಗಿ ಯುಎಸ್​ನ ಜೆರೆಮಿ ಕೆಸ್ಸೆಲ್ ನೇಮಕ ಕೇಂದ್ರ ಸರ್ಕಾರದ ಜೊತೆಗಿನ ಜಟಾಪಟಿಯ‌ ನಡುವೆ ಟ್ವಿಟರ್ ಗ್ಲೋಬಲ್ ಲೀಗಲ್ ಪಾಲಿಸಿ ನಿರ್ದೇಶಕ ಜೆರೆಮಿ ಕೆಸ್ಸೆಲ್ ಅವರನ್ನು ಭಾರತದ ಕುಂದುಕೊರತೆ ಪರಿಹಾರ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಸಾಮಾಜಿಕ ಜಾಲತಾಣಗಳಿಗೆ ಅನ್ವಯಿಸುವಂತಹ ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳನ್ನು ಅನುಸರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ನೇಮಕವಾಗಿದ್ದ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಧರ್ಮೇಂದ್ರ ಚತುರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ‌.

ಟ್ವಿಟರ್ ಧರ್ಮೇಂದ್ರ ಚತುರ್‌ರನ್ನು ಮಧ್ಯಂತರ ಕುಂದುಕೊರತೆ ಅಧಿಕಾರಿಯಾಗಿ‌ ನೇಮಕ ಮಾಡಿರುವ ಬಗ್ಗೆ ಮೇ 31ರಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ, ಈ ಹುದ್ದೆಗೆ ಹೊರಗಿನವರನ್ನು ನೇಮಕ ಮಾಡಿರುವ ಬಗ್ಗೆ ಕೇಂದ್ರ ಸರ್ಕಾರ ಅಸಮ್ಮತಿ ಸೂಚಿಸಿತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಟ್ವಿಟರ್​ ಮಧ್ಯಂತರ ಪ್ರಾದೇಶಿಕ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಕ ಮಾಡಿತ್ತು. ಆದರೆ ಧರ್ಮೇಂದ್ರ ಚತುರ್​ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೋಷಿಯಲ್​ ಮೀಡಿಯಾದ ವೆಬ್​ಸೈಟ್​​ನಲ್ಲಿ ಇನ್ನುಮುಂದೆ ಅವರ ಹೆಸರು ಇರುವುದಿಲ್ಲ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು-2021ರಡಿಯಲ್ಲಿ ಅದನ್ನು ತೆಗೆಯಲಾಗಿದೆ ಎಂದು ಟ್ವಿಟರ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿತ್ತು.

ಕೇಂದ್ರ ಸರ್ಕಾರ ತನ್ನ ಹೊಸ ಐಟಿ ನಿಯಮಗಳಡಿ, ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಜೂನ್​ ಪ್ರಾರಂಭದಲ್ಲಷ್ಟೇ ನೇಮಕವಾಗಿದ್ದ ಧರ್ಮೇಂದ್ರ ಚತುರ್​ ತಿಂಗಳ ಅಂತ್ಯದೊಳಗೇ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಪಟ್ಟಂತೆ ಕೇಂದ್ರದ ಹೊಸ ನಿಯಮಗಳ ವಿಚಾರದಲ್ಲಿ ಟ್ವಿಟರ್​ ಕಂಪನಿ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಭಾರತದಲ್ಲಿನ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇತ್ತು.

ಇದನ್ನೂ ಓದಿ: ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊವಿಡ್​ ಲಸಿಕೆ ಸಿದ್ಧ; ಜುಲೈ-ಅಗಸ್ಟ್​​ನಿಂದ 12 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್​​

(Twitter website shows Jammu Kashmir as seperate county leh is a part of China)

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್