ಭಾರತದ ಹೊಸ ವ್ಯಾಕ್ಸಿನೇಷನ್ ಯೋಜನೆಯಡಿಯಲ್ಲಿ ವಿಭಿನ್ನ ಲಸಿಕೆ ಡೋಸ್ ಮಿಶ್ರಣ ಬಗ್ಗೆ ಅಧ್ಯಯನಕ್ಕೆ ಒತ್ತು
Covid Vaccine: ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ಅಧ್ಯಯನವು ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಎರಡರಿಂದ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದೆಹಲಿ: ಕೊವಿಡ್ ಲಸಿಕೆಗಳ ಕೊರತೆಯಿಂದ ಲಸಿಕೆ ವಿತರಣೆ ನಿಧಾನಗೊಂಡಿರುವ ಹೊತ್ತಲ್ಲೇ ಸರ್ಕಾರದ ಹೊಸ ಲಸಿಕೆ ಕಾರ್ಯತಂತ್ರದ ಪ್ರಕಾರ ಲಸಿಕೆಗಳನ್ನು ಬೆರೆಸುವ ಮತ್ತು ಒಂದು ಡೋಸ್ ಕೊವಿಶೀಲ್ಡ್ ಪರಿಣಾಮಕಾರಿತ್ವ ಪರೀಕ್ಷೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎರಡು ವಿಭಿನ್ನ ಲಸಿಕೆಗಳನ್ನು ಬೆರೆಸುವ ಅಧ್ಯಯನವು ಒಂದು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಎರಡರಿಂದ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹೊಸ ಅಪ್ಲಿಕೇಶನ್‌ನಲ್ಲಿ ದಾಖಲಿಸಲಾದ ಲಸಿಕೆ ಡೇಟಾವನ್ನು ಕೇಂದ್ರವು ನಿರ್ಣಯಿಸುತ್ತದೆ, ಇದು ವ್ಯಾಕ್ಸಿನೇಷನ್ ನಂತರ ಪ್ರತಿಕೂಲ ಘಟನೆಗಳನ್ನು ವರದಿ ಮಾಡಲು ಸುಲಭವಾಗುತ್ತದೆ. ಕೊವಿನ್‌ಗೆ ಸಂಪರ್ಕ ಕಲ್ಪಿಸಲಿರುವ ಈ ಪ್ಲಾಟ್‌ಫಾರ್ಮ್, ಲಸಿಕೆ ಪಡೆದ ನಂತರ ತಮ್ಮ ಅನುಭವಗಳನ್ನು ದಾಖಲಿಸಲು ಸಾಧ್ಯವಾಗುತ್ತದೆ. ಇದಾದ ನಂತರ ಜಿಲ್ಲೆಯ ಅಧಿಕಾರಿಯೊಬ್ಬರು ಪ್ರಕರಣಗಳನ್ನು ಫಾಲೋ ಮಾಡಲಿದ್ದಾರೆ.
ಇತ್ತೀಚೆಗೆ 20 ಜನರಿಗೆ ಆಕಸ್ಮಿಕವಾಗಿ ಎರಡು ವಿಭಿನ್ನ ಲಸಿಕೆಗಳನ್ನು ನೀಡಿದ ಪ್ರಕರಣದ ನಂತರ, ಕೇಂದ್ರವು ಕಳವಳಕ್ಕೆ ಯಾವುದೇ ಕಾರಣವನ್ನು ತಳ್ಳಿಹಾಕಿದೆ. ಲಸಿಕೆಗಳನ್ನು ಬೆರೆಸುವುದು ಪರಿಣಾಮಕಾರಿಯಾಗಿದೆಯೇ ಎಂದು ಪರಿಶೀಲಿಸಲು ಆಳವಾದ ಸಂಶೋಧನೆ ಅಗತ್ಯ ಎಂದು ನೀತಿ ಆಯೋಗದ ಸದಸ್ಯ ಮತ್ತು ಭಾರತದ ಕೊವಿಡ್ ಕಾರ್ಯಪಡೆಯ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದ್ದಾರೆ.
ಜುಲೈ ಮಧ್ಯದ ವೇಳೆಗೆ ಪ್ರತಿದಿನ ಒಂದು ಕೋಟಿ ಚುಚ್ಚುಮದ್ದಿನ ಗುರಿಯೊಂದಿಗೆ ರೂಪಿಸಲಾದ ಹೊಸ ವ್ಯಾಕ್ಸಿನೇಷನ್ ತಂತ್ರದ ಪ್ರಮುಖ ಅಂಶ ಇದಾಗಿದೆ. ಕೊವಿಶೀಲ್ಡ್ ಡೋಸ್ ನಡುವಿನ ಅಂತರವನ್ನು ವಿಸ್ತರಿಸುವ ತನ್ನ ನಿರ್ಧಾರದ ಪ್ರಭಾವವನ್ನೂ ಸರ್ಕಾರ ಪರಿಶೀಲಿಸುತ್ತದೆ. ಇದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುವ ಲಸಿಕೆಗಾಗಿ ಏಕ-ಡೋಸ್ ಯೋಜನೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಏಕ ಡೋಸ್ ವ್ಯಾಕ್ಸಿನೇಷನ್ ಹೆಚ್ಚಿನ ಜನರಿಗೆ ಲಸಿಕೆ ತಲುಪಲು ಸಹಾಯ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. ಪರಿಣಾಮಕಾರಿ ಅಧ್ಯಯನಗಳು ಎರಡು ಡೋಸ್ ಶಿಫಾರಸು ಮಾಡುವ ಮೊದಲು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ -ಭಾರತದಲ್ಲಿ ಇದು ಕೊವಿಶೀಲ್ಡ್ – ಒಂದೇ ಡೋಸ್ ಆಯ್ಕೆಯಾಗಿ ಪ್ರಾರಂಭವಾಯಿತು ಎಂದು ಅವರು ಗಮನಸೆಳೆದಿದ್ದಾರೆ.
ಒಂದೇ ಡೋಸ್ ವೈರಸ್‌ನಿಂದ ಸಾಕಷ್ಟು ರಕ್ಷಣೆ ನೀಡಲಿದೆ ಎಂಬ ಅಭಿಪ್ರಾಯವಿದೆ.
ಅಸ್ಟ್ರಾಜೆನೆಕಾದಂತೆಯೇ ಇರುವ ತತ್ವವನ್ನು ಆಧರಿಸಿದ ಜಾನ್ಸನ್ ಆಂಡ್ ಜಾನ್ಸನ್ ಮತ್ತು ಸ್ಪುಟ್ನಿಕ್ ಲೈಟ್‌ನಂತಹ ಲಸಿಕೆಗಳು ಒಂದೇ ಡೋಸ್ ಎಂದು ಮೂಲಗಳು ಗಮನಸೆಳೆದವು.ಆದ್ದರಿಂದ ಕೊವಿಶೀಲ್ಡ್ ಕೂಡ ಒಂದು ಡೋಸ್ ಆಗಿ ಕಾರ್ಯನಿರ್ವಹಿಸಬೇಕು.
ಸೆರಮ್ ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ ಜನವರಿಯಲ್ಲಿ ಪ್ರಾರಂಭವಾದ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಬಳಸಲಾಗುವ ಎರಡು ಪ್ರಮುಖ ಲಸಿಕೆಗಳಾಗಿದೆ. ರಷ್ಯಾದ ಸ್ಪುಟ್ನಿಕ್ ಬಳಕೆಗೆ ಅನುಮತಿ ನೀಡಿದ ಮೂರನೇ ಲಸಿಕೆ.
ಪ್ರಸ್ತುತ ಕೊರತೆಯನ್ನು ನೀಗಿಸಲು ಸರ್ಕಾರ ತಿಂಗಳಿಗೆ 30-32 ಕೋಟಿ ಲಸಿಕೆ ಡೋಸ್ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಇವುಗಳಲ್ಲಿ 25 ಕೋಟಿ ಡೋಸ್ ಕೊವಿಶೀಲ್ಡ್ ಮತ್ತು ಕೊವಾಕ್ಸಿನ್ ಸೇರಿವೆ.
ಮುಂದಿನ ತಿಂಗಳುಗಳಲ್ಲಿ ಸರ್ಕಾರವು ಹೆಚ್ಚಿನ ಲಸಿಕೆಗಳ ಸಂಗ್ರಹ ಮಾಡುತ್ತಿದೆ. ಇದರಲ್ಲಿ ಬಯೋಲಾಜಿಕಲ್ ಇ ಅವರ ಜಾನ್ಸನ್ ಆಂಡ್ ಜಾನ್ಸನ್, ಸೆರಮ್‌ನ ನೊವೊವಾಕ್ಸ್, ಜಿನೋವಾ mRNA ಮತ್ತು ಜೈಡಸ್ ಕ್ಯಾಡಿಲ್ಲಾದ ಡಿಎನ್‌ಎ ಲಸಿಕೆ ಸೇರಿದೆ.
ಇದನ್ನೂ ಓದಿ: ಲಸಿಕೆ ಡೋಸ್ ಮಿಶ್ರಣ: ಉತ್ತರಪ್ರದೇಶದಲ್ಲಿ 20 ಮಂದಿಗೆ 2 ವಿಭಿನ್ನ ಲಸಿಕೆ; ಸಮಸ್ಯೆ ಏನೂ ಆಗಲ್ಲ ಎಂದ ಕೇಂದ್ರ ಸರ್ಕಾರ
(Tests on mixing vaccines and the effectiveness of a Single Shot of Covishield will begin soon says Source)
Published On - 2:18 pm, Mon, 31 May 21