ಇಂದಿನಿಂದ ಶಬರಿಮಲೆ ದೇಗುಲಕ್ಕೆ ಭಕ್ತರಿಗೆ ಪ್ರವೇಶಾವಕಾಶ; ಆದರೂ ಇನ್ನೆರಡು ದಿನ ಯಾರೂ ಬರಬೇಡಿ ಎನ್ನುತ್ತಿರುವ ಟಿಡಿಬಿ
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಂದು ಮುಂಜಾನೆಯಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಬಾಗಿಲು ನಿನ್ನೆಯೇ ತುಲಾ ಮಾಸದ ಪೂಜೆ ನಿಮಿತ್ತ ತೆರೆಯಲಾಗಿದೆ. ಆದರೆ ನಿನ್ನೆ ಸಂಜೆ ಭಕ್ತರಿಗೆ ಪ್ರವೇಶ ಇರಲಿಲ್ಲ. ಇಂದು ಬೆಳಗ್ಗೆಯಿಂದ ಭಕ್ತರೂ ದೇಗುಲಕ್ಕೆ ಪ್ರವೇಶ ಮಾಡಬಹುದಾಗಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ದೇಗುಲದ ಬಾಗಿಲು ತೆರೆದಿದ್ದು, ಅಕ್ಟೋಬರ್ 21ರವರೆಗೂ ಭಕ್ತರಿಗೆ ಪ್ರವೇಶಾವಕಾಶ ಇದ್ದು, ಪೂಜೆ ಸಲ್ಲಿಸಬಹುದಾಗಿದೆ. ಇಂದಿನಿಂದ ಬಾಗಿಲು ತೆರೆದಿದ್ದರೂ ಭಕ್ತರು ಆನ್ಲೈನ್ ಮೂಲಕ ಬುಕ್ ಮಾಡಿಕೊಂಡೇ ಬರಬೇಕಾಗಿದೆ. https://www.onlinetdb.com/tdbweb/dist/ ಮೂಲಕ […]
ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಂದು ಮುಂಜಾನೆಯಿಂದ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಬಾಗಿಲು ನಿನ್ನೆಯೇ ತುಲಾ ಮಾಸದ ಪೂಜೆ ನಿಮಿತ್ತ ತೆರೆಯಲಾಗಿದೆ. ಆದರೆ ನಿನ್ನೆ ಸಂಜೆ ಭಕ್ತರಿಗೆ ಪ್ರವೇಶ ಇರಲಿಲ್ಲ. ಇಂದು ಬೆಳಗ್ಗೆಯಿಂದ ಭಕ್ತರೂ ದೇಗುಲಕ್ಕೆ ಪ್ರವೇಶ ಮಾಡಬಹುದಾಗಿದೆ. ಇಂದು ಮುಂಜಾನೆ 5 ಗಂಟೆಯಿಂದಲೇ ದೇಗುಲದ ಬಾಗಿಲು ತೆರೆದಿದ್ದು, ಅಕ್ಟೋಬರ್ 21ರವರೆಗೂ ಭಕ್ತರಿಗೆ ಪ್ರವೇಶಾವಕಾಶ ಇದ್ದು, ಪೂಜೆ ಸಲ್ಲಿಸಬಹುದಾಗಿದೆ.
ಇಂದಿನಿಂದ ಬಾಗಿಲು ತೆರೆದಿದ್ದರೂ ಭಕ್ತರು ಆನ್ಲೈನ್ ಮೂಲಕ ಬುಕ್ ಮಾಡಿಕೊಂಡೇ ಬರಬೇಕಾಗಿದೆ. https://www.onlinetdb.com/tdbweb/dist/ ಮೂಲಕ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಹಾಗೇ ಬರುವವರು ಇತ್ತೀಚೆಗೆ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ರಿಪೋರ್ಟ್ ಮತ್ತು ಕೊವಿಡ್ 19 ಲಸಿಕೆ ಎರಡೂ ಡೋಸ್ ಆಗಿರುವ ಸರ್ಟಿಫಿಕೇಟ್ ತರುವುದು ಕಡ್ಡಾಯ ದೇಗುಲ ಪ್ರವೇಶಕ್ಕೂ ಮೊದಲು ಇವೆರಡೂ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಹಾಗೇ, ಕೊವಿಡ್ 19 ಕಾರಣದಿಂದ ದೇಗುಲದಲ್ಲಿ ಒಂದು ದಿನಕ್ಕೆ 15000 ಭಕ್ತರಿಗೆ ಮಾತ್ರ ಅವಕಾಶ ಇದೆ. ಶಬರಿಮಲೆ ದೇಗುಲ ಅತ್ಯಂತ ಪ್ರಸಿದ್ಧ ಪಡೆದ ದೇವಾಲಯ. ಆದರೆ ಇದು ಉಳಿದ ದೇವಸ್ಥಾನಗಳಂತೆ ಪ್ರತಿದಿನ ಬಾಗಿಲು ತೆರೆಯುವುದಿಲ್ಲ. ತಿಂಗಳಲ್ಲಿ 5 ದಿನಗಳು ಮಾತ್ರ ಬಾಗಿಲು ತೆರೆಯಲಾಗುತ್ತದೆ.
ಎರಡು ದಿನ ದೇಗುಲಕ್ಕೆ ಬರಬೇಡಿ ಎನ್ನುತ್ತಿರುವ ಟಿಡಿಬಿ ಕೇರಳದಲ್ಲಿ ಸಿಕ್ಕಾಪಟೆ ಮಳೆಸುರಿಯುತ್ತಿದೆ. ಮಳೆಯಿಂದಾದ ಅವಘಡದಿಂದ ಈಗಾಗಲೇ 9ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಇನ್ನೂ ಎರಡು ದಿನ ವಿಪರೀತಿ ಮಳೆ ಸುರಿಯುವ ಕಾರಣ ಆದಷ್ಟು ಭಕ್ತರು ದೇವಾಲಯಕ್ಕೆ ಬಿಂದು ತೊಂದರೆ ಅನುಭವಿಸಬೇಡಿ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಹೇಳಿದೆ. ಅದರಲ್ಲೂ ಶಬರಿಮಲೆ ದೇವಾಲಯ ಇರುವ ಪಥನಂತಿಟ್ಟ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಪಂಬಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಹಂತ ತಲುಪಿದೆ. ಈಗಾಗಲೇ ಕೊಟ್ಟಾಯಂ, ಪಥನಂತಿಟ್ಟ ಸೇರಿ ಹಲವು ಪ್ರದೇಶಗಳಲ್ಲಿ ಅವಘಡಗಳು ನಡೆಯುತ್ತಿರುವ ಕಾರಣ ಭಾರತೀಯ ಸೇನೆ, ಸ್ಥಳೀಯ ರಕ್ಷಣಾ ಪಡೆಗಳೆಲ್ಲ ಸೇರಿ ಜನರನ್ನು ಸ್ಥಳಾಂತರಗೊಳಿಸುವ ಕಾರ್ಯಾಚರಣೆ ಮಾಡುತ್ತಿವೆ.
ಇದನ್ನೂ ಓದಿ: ಬಿಜೆಪಿ ಅಥವಾ ಜೆಡಿಎಸ್ನಿಂದ ಸುಪಾರಿ ಪಡೆದು ಸಲೀಂ ಹೇಳಿಕೆ ನೀಡಿರಬಹುದು: ಎಂ ಲಕ್ಷ್ಮಣ್ ಆರೋಪ
ಪತಿ ಚಿರುಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು, ಆಡುವವರ ಬಾಯಿ ಮುಚ್ಚಿಸಿದ ಮೇಘನಾ ರಾಜ್