ಪತಿ ಚಿರುಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು, ಆಡುವವರ ಬಾಯಿ ಮುಚ್ಚಿಸಿದ ಮೇಘನಾ ರಾಜ್

ಮಗುವನ್ನು ಪಡೆಯಬೇಕು ಎನ್ನುವ ನಿರ್ಧಾರಕ್ಕೆ ಬಂದ ನಂತರ ಮೇಘನಾ ಚಿತ್ರದ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡರು. ಇದಾದ ನಂತರ ಪತಿಯನ್ನು ಕಳೆದುಕೊಂಡರು.

ಪತಿ ಚಿರುಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು, ಆಡುವವರ ಬಾಯಿ ಮುಚ್ಚಿಸಿದ ಮೇಘನಾ ರಾಜ್
ಮೇಘನಾ ರಾಜ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 17, 2021 | 1:50 PM

ಚಿರಂಜೀವಿ ಸರ್ಜಾ ಮೃತಪಟ್ಟು ವರ್ಷದ ಮೇಲಾಗಿದೆ. ಅವರ ಜತೆ ಕಳೆದ ನೆನಪು ಕುಟುಂಬದವರಿಗೆ ಹಾಗೂ ಅವರ ಗೆಳೆಯರಿಗೆ ಇನ್ನೂ ಮಾಸಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ನಿತ್ಯವೂ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯ ಕುಟುಂಬದವರು ಮಾಡುತ್ತಿದ್ದಾರೆ. ಪತ್ನಿ ಮೇಘನಾ ರಾಜ್​ ಅವರಂತೂ ಚಿರು ಅವರನ್ನು ತುಂಬಾನೇ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮೇಘನಾ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಮಗುವನ್ನು ಪಡೆಯಬೇಕು ಎನ್ನುವ ನಿರ್ಧಾರಕ್ಕೆ ಬಂದ ನಂತರ ಮೇಘನಾ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್​ ತೆಗೆದುಕೊಂಡರು. ಇದಾದ ನಂತರ ಪತಿಯನ್ನು ಕಳೆದುಕೊಂಡರು. ಆ ನಂತರ ರಾಯನ್​ ಜನಿಸಿದ. ಅವನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆದರು. ಈಗ ಒಂದು ಸಣ್ಣ ಗ್ಯಾಪ್​ನ ನಂತರ ಮೇಘನಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಚಿರು ಬಗ್ಗೆ ತೆಗೆದುಕೊಂಡು  ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಚಿರು ಮೃತಪಟ್ಟ ನಂತರದಲ್ಲಿ ಮೇಘನಾ ಸಾಕಷ್ಟು ನೋವು ಅನುಭವಿಸಿದರು. ಈಗ ರಾಯನ್​ ಜನಿಸಿದ್ದು, ಈ ನೋವು ನಿಧಾನವಾಗಿ ಮಾಸುತ್ತಿದೆ. ಹಾಗಿರುವಾಗಲೇ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಚಿರು ನಮ್ಮ ಜತೆ ಇಲ್ಲ. ಆದರೆ, ಅಕ್ಟೋಬರ್​ 17ಅನ್ನು ನಾನು ಮತ್ತು ನಮ್ಮ ಫ್ರೆಂಡ್ಸ್​​ ಯಾವಾಗಲೂ ಸೆಲಬ್ರೇಟ್​ ಮಾಡುತ್ತೇವೆ. ಯಾರು ಏನೇ ಹೇಳಲಿ, ಯಾರು ಏನೆ ಮಾತಾಡಲಿ. ನಾವು ಚಿರು ಹುಟ್ಟುಹಬ್ಬ ಆಚರಿಸಿಯೇ ಆಚರಿಸುತ್ತೇವೆ’ ಎಂದು ಹೇಳಿಕೊಳ್ಳುವ ಮೂಲಕ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದರು.

ಇನ್ನು ಮೇಘನಾ ಮತ್ತು ಚಿರು ಗೆಳೆಯ ಪನ್ನಗ ಭರಣ ಕೂಡ ಈ ಬಗ್ಗೆ ಮಾತನಾಡಿದರು. ‘ನಾವೆಲ್ಲರೂ ಸೇರಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಚಿರು ನೆನಪಾದಾಗ ನಾವು ಎಂದಿಗೂ ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಅವನ ನೆನಪನ್ನು ಸೆಲೆಬ್ರೇಟ್​ ಮಾಡಬೇಕು ಎಂದುಕೊಂಡಿದ್ದೇವೆ. ಹಾಗೆಯೇ ಮಾಡುತ್ತೇವೆ’ ಎಂದರು ಅವರು. ಈ ಮೂಲಕ ಮೇಘನಾಗೆ ಬೆಂಬಲ ನೀಡಿದರು.

ಇದನ್ನೂ ಓದಿ:Chiranjeevi Sarja Birthday: ಚಿರಂಜೀವಿ ಸರ್ಜಾ ಜನ್ಮದಿನಕ್ಕೆ ರಾಯನ್​ ರಾಜ್​ ಸರ್ಜಾ, ಮೇಘನಾ ರಾಜ್​ ಕಡೆಯಿಂದ ವಿಶೇಷ ಗಿಫ್ಟ್​ 

Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್​ ವಿಶೇಷ ಫೋಟೋಶೂಟ್​; ಇಲ್ಲಿದೆ ರಾಣಿ ಗೆಟಪ್​ನ ಫೋಟೋ ಆಲ್ಬಂ

Published On - 1:36 pm, Sun, 17 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ