Chiranjeevi Sarja Birthday: ಚಿರಂಜೀವಿ ಸರ್ಜಾ ಜನ್ಮದಿನಕ್ಕೆ ರಾಯನ್​ ರಾಜ್​ ಸರ್ಜಾ, ಮೇಘನಾ ರಾಜ್​ ಕಡೆಯಿಂದ ವಿಶೇಷ ಗಿಫ್ಟ್​

Happy Birthday Chiranjeevi Sarja: ಚಿರಂಜೀವಿ ಸರ್ಜಾ ಬರ್ತ್​ಡೇ ಸಲುವಾಗಿ ‘ರಾಜಮಾರ್ತಾಂಡ’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ. ಮೇಘನಾ ರಾಜ್​ ನಟಿಸಲಿರುವ ಹೊಸ ಸಿನಿಮಾ ಲಾಂಚ್​ ಆಗಲಿದೆ. ಅಪ್ಪನಿಗೆ ರಾಯನ್​ ರಾಜ್​ ಸರ್ಜಾ ವಿಶ್​ ಮಾಡಲಿದ್ದಾನೆ.

Chiranjeevi Sarja Birthday: ಚಿರಂಜೀವಿ ಸರ್ಜಾ ಜನ್ಮದಿನಕ್ಕೆ ರಾಯನ್​ ರಾಜ್​ ಸರ್ಜಾ, ಮೇಘನಾ ರಾಜ್​ ಕಡೆಯಿಂದ ವಿಶೇಷ ಗಿಫ್ಟ್​
ಚಿರಂಜೀವಿ ಸರ್ಜಾ
Follow us
TV9 Web
| Updated By: ಮದನ್​ ಕುಮಾರ್​

Updated on: Oct 17, 2021 | 7:28 AM

ನಟ ಚಿರಂಜೀವಿ ಸರ್ಜಾ ಅವರನ್ನು ಅಭಿಮಾನಿಗಳು ಸಖತ್​ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಇಂದು (ಅ.17) ಚಿರು ಹುಟ್ಟುಹಬ್ಬ. ಒಂದು ವೇಳೆ ಅವರು ನಮ್ಮೊಂದಿಗೆ ಇದ್ದಿದ್ದರೆ ಅವರ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿ ನೆಚ್ಚಿನ ನಟನಿಗೆ ಕೇಕ್​ ತಿನ್ನಿಸಿ, ಉಡುಗೊರೆ ನೀಡಿ ಸಂಭ್ರಮಿಸುತ್ತಿದ್ದರು. ಚಿರು ಇಲ್ಲದೇ ನಡೆಯುತ್ತಿರುವ ಎರಡನೇ ವರ್ಷದ ಹುಟ್ಟುಹಬ್ಬ ಇದು. ಸೋಶಿಯಲ್​ ಮೀಡಿಯಾದಲ್ಲಿ ಸ್ನೇಹಿತರು, ಅಭಿಮಾನಿಗಳು, ಕುಟುಂಬದವರು ಶುಭಾಶಯ ಕೋರುತ್ತಿದ್ದಾರೆ. ಅವರ ಜೊತೆ ಕಳೆದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಅಪ್ಪನಿಗೆ ರಾಯನ್​ ರಾಜ್ ಸರ್ಜಾ ವಿಶ್​:

ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಚಿರಂಜೀವಿ ಸರ್ಜಾ ಅವರು ‘ರಾಜಮಾರ್ತಾಂಡ’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದ ಬಗ್ಗೆ ಅವರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ಕೆಲವು ದೃಶ್ಯಗಳಿಗೆ ಚಿರು ಡಬ್ಬಿಂಗ್​ ಮಾಡಿದ್ದರು. ಡಬ್ಬಿಂಗ್​ ಕೆಲಸಗಳು ಇನ್ನೂ ಬಾಕಿ ಇರುವಾಗಲೇ ಅವರು ಇಹಲೋಕ ತ್ಯಜಿಸಿದರು. ಉಳಿದ ದೃಶ್ಯಗಳಿಗೆ ಧ್ರುವ ಸರ್ಜಾ ಡಬ್ಬಿಂಗ್​ ಮಾಡಿದ್ದಾರೆ. ಈಗ ಆ ಚಿತ್ರದ ಟೀಸರ್​ ಬಿಡುಗಡೆ ಆಗುತ್ತಿದೆ. ಅಪ್ಪನಿಗೆ ರಾಯೆನ್​ ರಾಜ್​ ಸರ್ಜಾ ಬರ್ತ್​ಡೇ ವಿಶ್​ ಮಾಡಲಿದ್ದಾನೆ. ಇಂದು 11 ಗಂಟೆಗೆ ಈ ಟೀಸರ್​ ಬಿಡುಗಡೆ ಆಗಿದೆ.

ಚಿರು ಹುಟ್ಟುಹಬ್ಬಕ್ಕೆ ಮೇಘನಾ ಹೊಸ ಸಿನಿಮಾ:

ಚಿರಂಜೀವಿ ಸರ್ಜಾ ನಿಧನದ ಬಳಿಕ ನಟನೆಯಿಂದ ಗ್ಯಾಪ್​ ಪಡೆದುಕೊಂಡಿದ್ದ ಮೇಘನಾ ರಾಜ್​ ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರ ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರುತ್ತಿದೆ. ಇದು ಅವರ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದೆ. ಮೇಘನಾ ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಬೇಕು ಎಂಬುದೇ ಫ್ಯಾನ್ಸ್​ ಬಯಕೆ ಆಗಿತ್ತು. ಆ ಬಯಕೆಯನ್ನು ಮೇಘನಾ ಈಡೇರಿಸುತ್ತಿದ್ದಾರೆ. ಈ ಚಿತ್ರದ ಲಾಂಚಿಂಗ್​ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ನಾಗಾಭರಣ, ನಟ ಸುಂದರ್​ ರಾಜ್​, ಕಲಾ ನಿರ್ದೇಶಕ ಶಿವಕುಮಾರ್​ ಮುಂತಾದವರು ಹಾಜರಿ ಹಾಕಲಿದ್ದಾರೆ. ಚಿರು ಸ್ನೇಹಿತ ಪನ್ನಗ ಭರಣ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ:

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ

Meghana Raj: ಮೇಘನಾ ರಾಜ್​ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್​ ಆಕ್ರೋಶ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ