ಹದಗೆಟ್ಟ ಕೆಎಸ್‌ಆರ್‌ಟಿಸಿಯ ಸುಮಾರು 400 ಬಸ್, ಬಸ್​ಗಳನ್ನು ತರಗತಿಗಳಾಗಿ ನಿರ್ಮಾಣ ಮಾಡಲು ಕೇರಳ ಸರಕಾರ ಚಿಂತನೆ

| Updated By: ವಿವೇಕ ಬಿರಾದಾರ

Updated on: May 18, 2022 | 12:06 PM

ಕೊರೊನಾ ಸಮಯದಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಹಲವಾರು ಬಸ್‌ಗಳು ನಿಂತಲ್ಲೇ ನಿಂತು ನಿಷ್ಕ್ರಿಯಗೊಂಡಿವೆ. ಹೀಗಾಗಿ ಬಸ್‌ಗಳನ್ನು ವಿದ್ಯಾರ್ಥಿಗಳ ತರಗತಿಗಳಾಗಿ ಪರಿವರ್ತಿಸಲಾಗುವುದು.

ಹದಗೆಟ್ಟ ಕೆಎಸ್‌ಆರ್‌ಟಿಸಿಯ ಸುಮಾರು 400 ಬಸ್, ಬಸ್​ಗಳನ್ನು ತರಗತಿಗಳಾಗಿ ನಿರ್ಮಾಣ ಮಾಡಲು ಕೇರಳ ಸರಕಾರ ಚಿಂತನೆ
ಸಾಂಧರ್ಬಿಕ ಚಿತ್ರ
Image Credit source: Asianet Suvarnanews
Follow us on

ಕೊಚ್ಚಿ: ಕೊರೊನಾ (Covid-19) ಸೋಂಕು ಮಹಾಮಾರಿ ಕಡಿಮೆಯಾಗಿದ್ದು, ದೈನಂದಿನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ದೈನಂದಿನ ವ್ಯವಹಾರಕ್ಕೆ ಸಂಪರ್ಕ ಸಧಾನವಾಗಿರುವ ಕೇರಳ (Kerala) ರಾಜ್ಯ ಸಾರಿಗೆ ಮಾತ್ರ ಇನ್ನೂ ಕೊರೊನಾದಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಲು ಹೆಣಗಾಡುತ್ತಿವೆ. ಹೌದು ಕೊರೊನಾ ಸಮಯದಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) (KSRTC) ಹಲವಾರು ಬಸ್‌ಗಳು ನಿಂತಲ್ಲೇ ನಿಂತು ನಿಷ್ಕ್ರಿಯಗೊಂಡಿವೆ. ಪ್ರಸ್ತುತ ಬಸ್​ಗಳು ರಸ್ತೆಗೆ ಬರುವ ಸ್ಥಿತಿಯಲ್ಲಿ ಇಲ್ಲ. ಆದರೆ ನಷ್ಟದಲ್ಲಿರುವ ಕೆಎಸ್‌ಆರ್‌ಟಿಸಿ, ಬಸ್‌ಗಳನ್ನು ರದ್ದುಪಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇದರ ಬದಲಿಗೆ ಬಸ್‌ಗಳನ್ನು ಸದುಪಯೋಗಪಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೆರರಿವಾಳನ್ ಬಿಡುಗಡೆಗೆ ಉಪ್ರೀಂಕೋರ್ಟ್ ಆದೇಶ

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು, ಬಸ್‌ಗಳನ್ನು ಸ್ಕ್ರ್ಯಾಪ್‌ಗಳಿಗೆ ಮಾರಾಟ ಮಾಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕೆಂಬ ನಿರ್ಧರಿಸಿವೆ. ಅದಕ್ಕೆ ಹಳೆಯ ಬಸ್‌ಗಳನ್ನು ವಿದ್ಯಾರ್ಥಿಗಳ ತರಗತಿಗಳಾಗಿ ಪರಿವರ್ತಿಸಲಾಗುವುದು. ಈ ಕುರಿತು ಬೇಡಿಕೆಯಿದೆ ಎಂದು ಸಚಿವರು ಹೇಳಿದರು. ನಾವು ಕೆಳ ಅಂತಸ್ತಿನ ಬಸ್‌ಗಳನ್ನು ಬಳಸಲು ನಿರ್ಧರಿಸಿದ್ದೇವೆ ಮತ್ತು ಅವುಗಳನ್ನು ತರಗತಿಗಳಾಗಿ ಪರಿವರ್ತಿಸಲು ನಿರ್ಧರಿಸಿದ್ದೇವೆ. ಇದು ಮಕ್ಕಳಿಗೆ ಹೊಸ ಅನುಭವವಾಗಲಿದೆ ಎಂದು ರಾಜು ಹೇಳಿದರು. ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಅವರು ಅಭಿಪ್ರಾಯ ಹಂಚಿಕೊಂಡಿದ್ದರು. ಹೀಗಾಗಿ ತಕ್ಷಣವೇ ಅನುಮೋದನೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ
ರಾಜೀವ್ ಗಾಂಧಿ ಹತ್ಯೆ ಅಪರಾಧಿ ಪೇರರಿವಾಳನ್ ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ
Binge Eating: ಅತಿಯಾಗಿ ತಿನ್ನುವುದಕ್ಕೆ ಕಾರಣವೇನು? ತಪ್ಪಿಸುವುದು ಹೇಗೆ?
ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಸಿಎಂ ಸಭೆ; ಸರ್ಕಾರದ ಕಾರ್ಯಕ್ರಮ ಜನರಿಗೆ ಮುಟ್ಟಿಸಲು ಸಿಎಂ ಸೂಚನೆ

ಇದನ್ನು ಓದಿ: ಕಾಂಗ್ರೆಸ್ ಪಕ್ಷಕ್ಕೆ ಹಾರ್ದಿಕ್ ಪಟೇಲ್ ರಾಜೀನಾಮೆ

ಬಸ್​ಗಳಲ್ಲಿ ತರಗತಿ ನಿರ್ಮಾಣ ಪ್ರಯೋಗವು ರಾಜಧಾನಿಯ ಸರ್ಕಾರಿ ಶಾಲೆಯೊಂದರಲ್ಲಿ ನಡೆಯಲಿದೆ. ಅದಕ್ಕೆ ಎರಡು ಲೋ-ಫ್ಲೋರ್ ಬಸ್‌ಗಳನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ, ಕೆಎಸ್‌ಆರ್‌ಟಿಸಿಯ ಸುಮಾರು 400 ಬಸ್‌ಗಳು ರಸ್ತೆ ಯೋಗ್ಯವಾಗಿಲ್ಲ ಮತ್ತು ಅವುಗಳನ್ನು ರದ್ದುಗೊಳಿಸಬೇಕಾಗಿದೆ. ಇವುಗಳಲ್ಲಿ ಎಷ್ಟು ತರಗತಿಗಳಾಗಿ ಬದಲಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:06 pm, Wed, 18 May 22