Binge Eating: ಅತಿಯಾಗಿ ತಿನ್ನುವುದಕ್ಕೆ ಕಾರಣವೇನು? ತಪ್ಪಿಸುವುದು ಹೇಗೆ?

Binge Eating: ಒಂದೊಮ್ಮೆ ನೀವು ತಿನ್ನುವುದು ಪೌಷ್ಠಿಕ ಆಹಾರವಾಗಿದ್ದರೆ, ಹೆಚ್ಚು ತಿಂದರೂ ಸುಲಭವಾಗಿ ಜೀರ್ಣವಾಗುತ್ತದೆ. ಅತಿಯಾಗಿ ತಿನ್ನುವುದು ಕೂಡ ಒಂದು ರೋಗವಿದ್ದಂತೆ ಹೆಚ್ಚು ತಿನ್ನುವವರು ಸಾಮಾನ್ಯವಾಗಿ ಆರೋಗ್ಯಯುತ ಆಹಾರವನ್ನು ಸೇವಿಸುವುದಿಲ್ಲ. ಪಿಜ್ಜಾ, ಬರ್ಗರ್, ಚಿಪ್ಸ್ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವಿಸುತ್ತಾರೆ. ಹೆಚ್ಚು ತಿನ್ನುವುದು ಒಬೆಸಿಟಿ, ಕಿಬ್ಬೊಟ್ಟೆ ಮೋವು, ಕರುಳು ಉಬ್ಬುವಿಕೆಗೆ ಕಾರಣವಾಗುತ್ತದೆ.

Binge Eating: ಅತಿಯಾಗಿ ತಿನ್ನುವುದಕ್ಕೆ ಕಾರಣವೇನು? ತಪ್ಪಿಸುವುದು ಹೇಗೆ?
Binge Eating
Follow us
TV9 Web
| Updated By: ನಯನಾ ರಾಜೀವ್

Updated on:May 18, 2022 | 11:48 AM

ಒಂದೊಮ್ಮೆ ನೀವು ತಿನ್ನುವುದು ಪೌಷ್ಠಿಕ ಆಹಾರವಾಗಿದ್ದರೆ, ಹೆಚ್ಚು ತಿಂದರೂ ಸುಲಭವಾಗಿ ಜೀರ್ಣವಾಗುತ್ತದೆ. ಅತಿಯಾಗಿ ತಿನ್ನುವುದು ಕೂಡ ಒಂದು ರೋಗವಿದ್ದಂತೆ ಹೆಚ್ಚು ತಿನ್ನುವವರು ಸಾಮಾನ್ಯವಾಗಿ ಆರೋಗ್ಯಯುತ ಆಹಾರವನ್ನು ಸೇವಿಸುವುದಿಲ್ಲ. ಪಿಜ್ಜಾ, ಬರ್ಗರ್, ಚಿಪ್ಸ್ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವಿಸುತ್ತಾರೆ. ಹೆಚ್ಚು ತಿನ್ನುವುದು ಒಬೆಸಿಟಿ, ಕಿಬ್ಬೊಟ್ಟೆ ಮೋವು, ಕರುಳು ಉಬ್ಬುವಿಕೆಗೆ ಕಾರಣವಾಗುತ್ತದೆ.

ಏನು ನೋಡಿದರೂ ತಿನ್ನಬೇಕು ಎನಿಸುವುದು: ಕೆಲವರಿಗೆ ಏನು ನೋಡಿದರೂ ತಿನ್ನಬೇಕು ಅನಿಸುತ್ತದೆ. ಇದು ಮನಸ್ಸಿನ ಭಾವನೆಯಾಗಿರುತ್ತೆ. ಪ್ರತಿಯೊಂದು ಭಾವನೆಯು ನಿಮ್ಮನ್ನು ಅತಿಯಾಗಿ ತಿನ್ನುವಂತೆ ಮಾಡುವುದಿಲ್ಲ. ನೀವು ಒತ್ತಡವನ್ನು ತೊಡೆದು ಹಾಕಲು ಸಾಧ್ಯವಾಗದಿದ್ದ ಸಮಯದಲ್ಲಿ ನಕಾರಾತ್ಮಕ ಭಾವನೆಗಳು ಅತಿಯಾಗಿ ತಿನ್ನಲು ಪ್ರಚೋದನೆ ಮಾಡುತ್ತೆ.

ಎಂಥಹ ಸಮಯದಲ್ಲಿ ಹೆಚ್ಚು ತಿನ್ನುವುದು ರೂಢಿಯಾಗುತ್ತದೆ ಯಾವುದೇ ಖಿನ್ನತೆಯಿಂದ ಬಳಲುತ್ತಿದ್ದರೆ, ಕೋಪ, ಉದ್ವೇಗ, ಭಯ, ಒಂಟಿತನಕ್ಕೆ ಒಳಗಾದರೆ ಅಥವಾ ಯಾವುದೇ ಬೇಸರದಲ್ಲಿದ್ದರೆ ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸಲು ಅನೇಕರು ಆಹಾರವನ್ನ ಹೆಚ್ಚಾಗಿ ತಿನ್ನುವುದನ್ನು ರೂಢಿಸಿಕೊಳ್ತಾರೆ.

ಅನೇಕ ಅಭ್ಯಾಸಗಳಂತೆ, ಆಹಾರ ಪದ್ಧತಿಯನ್ನು ಬದಲಾಯಿಸಬಹುದು ಮತ್ತು ಸರಿಪಡಿಸಬಹುದು. ಆದರೆ ಬಹಳ ದಿನಗಳಿಂದ ಈ ಅಭ್ಯಾಸವಿದ್ದರೆ ಹೊರಬರಲು ಸ್ವಲ್ಪ ಕಷ್ಟವಾದರೂ ಖಂಡಿತ ಬದಲಾಯಿಸಬಹುದು.

ಕಡಿಮೆ ಪೌಷ್ಟಿಕಾಂಶದ ಮೌಲ್ಯದೊಂದಿಗೆ ಹೆಚ್ಚಿನ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಮೂಲಕ ಒತ್ತಡದಂತಹ ನಕಾರಾತ್ಮಕ ಭಾವನೆಗಳಿಗೆ ಭಾವನಾತ್ಮಕ ಆಹಾರದೊಂದಿಗೆ ಅನೇಕ ಜನರು ಪ್ರತಿಕ್ರಿಯಿಸುತ್ತಾರೆ.

ಕಾರಣವೇನೆಂದು ಪತ್ತೆ ಮಾಡಿ ಕೆಲವೊಮ್ಮೆ ಮಾತ್ರ ನೀವು ಹೆಚ್ಚಾಗಿ ತಿನ್ನಲು ಶುರು ಮಾಡುತ್ತೀರಿ, ಅದು ಯಾವಾಗ ಎಂದು ತಿಳಿದುಕೊಳ್ಳಿ. ಆತಂಕ, ಕೋಪ ಅಥವಾ ಬೇಸರದಿಂದ ಯಾವುದಾದರೂ ಆಗಿರಬಹುದು.

ತಿನ್ನುವುದು ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಿತ್ತೆ ಆದ್ರೂ ಬಿಡದೆ ಅತಿಯಾಗಿ ತಿನ್ನುವುದನ್ನ ಮುಂದುವರಿಸಲು ನಾವು ಒತ್ತಡಕ್ಕೆ ಒಳಗಾಗಬಹುದು. ಆಹಾರ ಚಟವು ಹಾಗೇ ಬೆಳವಣಿಗೆಯಾಗುತ್ತದೆ

ಧ್ಯಾನ ಮಾಡಿ: ನೀವು ತಿನ್ನುವುದನ್ನು ಕಡಿಮೆ ಮಾಡಬೇಕೆಂದರೆ ಧ್ಯಾನವು ಉತ್ತಮ ಮಾರ್ಗವಾಗಿದೆ.

ಸಂಜೆ ನಂತರ ಈ ಆಹಾರಗಳನ್ನು ಸೇವಿಸಬೇಡಿ

ರಾತ್ರಿಯಲ್ಲಿ ಚಹಾ ಅಥವಾ ಕಾಫಿ ಕುಡಿಯಬೇಡಿ ಜನರು ಅಗತ್ಯಕ್ಕಿಂತ ಹೆಚ್ಚು ಚಹಾ ಅಥವಾ ಕಾಫಿಯನ್ನು ಕುಡಿಯುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ. ಏಕೆಂದರೆ ಕೆಫೀನ್ ಜೊತೆಗೆ ಸಕ್ಕರೆಯ ಸೇವನೆಯು ತುಂಬಾ ಹೆಚ್ಚಾಗಿರುತ್ತದೆ. ರಾತ್ರಿಯಲ್ಲಿ ಚಹಾ ಅಥವಾ ಕಾಫಿ ಕುಡಿಯುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ತೂಕ ನಷ್ಟದ ಪ್ರಕ್ರಿಯೆಯಲ್ಲಿ ಸಾಕಷ್ಟು ನಿದ್ರೆ ಪಡೆಯುವುದು ಸಹ ಬಹಳ ಮುಖ್ಯ.

ಮಧ್ಯರಾತ್ರಿಯಲ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಡಿ ಇಂದು ಹೆಚ್ಚಿನ ಜನರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ. ಒತ್ತಡಮಯ ಪರಿಸ್ಥಿತಿ ಹಾಗೂ ಬದಲಾದ ಜೀವನಶೈಲಿಯಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದನ್ನು ಬಹುತೇಕರು ಮರೆತಿರುತ್ತಾರೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ಆಹಾರ ಸೇವಿಸದಿರುವುದು ಕೆಟ್ಟ ಅಭ್ಯಾಸ.

ತಡರಾತ್ರಿಯವರೆಗೆ ಎಚ್ಚರವಾಗಿರುವುದು ಹಸಿವಿನ ಭಾವನೆಯನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಏನನ್ನಾದರೂ ತಿನ್ನುತ್ತಾರೆ. ಈ ಹೆಚ್ಚುವರಿ ಕ್ಯಾಲೊರಿಗಳು ನಮ್ಮ ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹಗೊಳ್ಳುತ್ತವೆ. ಇದರಿಂದ ತೂಕ ಹೆಚ್ಚಳವಾಗುತ್ತದೆ.

ಹಣ್ಣುಗಳನ್ನು ತಿನ್ನಬಾರದು ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಸೂರ್ಯಾಸ್ತದ ನಂತರ ಅವುಗಳನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಹಾಳಾಗುತ್ತದೆ. ಇದಲ್ಲದೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಬಹುದು.

ಈ ಮೇಲಿನ ಮಾಹಿತಿ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.

ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Wed, 18 May 22

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್