ಮುಂಗಾರಿನ ಸಮಯದಲ್ಲಿ ಮಸಾಲೆಯುಕ್ತ ಸೋಯಾ ಭುರ್ಜಿ ಮತ್ತು ಪಾಲಕ್ ಭುರ್ಜಿ ಮಾಡುವ ವಿಧಾನ
ಸೋಯಾ ಭುರ್ಜಿ ಉತ್ತಮವಾದ ಕಡಿಮೆ ಕ್ಯಾಲೋರಿ, ಪೌಷ್ಟಿಕಾಂಶದ ಭಕ್ಷ್ಯವಾಗಿದೆ. ಇದನ್ನು ಚಪಾತಿಯೊಂದಿಗೆ ತಿನ್ನಬಹುದು. ಪಾಲಕ್ ಭುರ್ಜಿ ಮಸಾಲೆ ಮಾಡಲು ತುಂಬಾ ಸುಲಭ ಮತ್ತು ತ್ವರಿತ. ಈ ಪಾಲಾಕ್ ಭುರ್ಜಿ ರೆಸಿಪಿ ಆರೋಗ್ಯಕರ, ಹಗುರವಾದ ಖಾದ್ಯವಾಗಿದೆ.
ಮುಂಗಾರಿನ ಸಮಯದಲ್ಲಿ ರಾತ್ರಿಹೊತ್ತು ಬಿಸಿಬಿಸಿಯಾದ ಆಹಾರವನ್ನು ಸೇವಿಸಲು ಮನಸ್ಸು ಹಾತೊರೆಯುತ್ತಿರುತ್ತದೆ. ಅದರಲ್ಲೂ ಪ್ರತಿದಿನ ಮಾಡುವ ಅಡುಗೆಗಿಂತ ವಿಭಿನ್ನವಾದ ವಿಶೇಷವಾದ ಅಡುಗೆಯನ್ನು ಸೇವಿಸಲು ನಾಲಿಗೆ ಚಡಪಡಿಸುತ್ತಿರುತ್ತದೆ. ಹೀಗಿರುವಾಗ ಇನ್ನೇಕೆ ತಡ ನಾವು ನಿಮಗೆ ತಿಳಸಲಿದ್ದೇವೆ ಹೊಸ ರೆಸಿಪಿ, ಇಂದೇ ತಯಾರಿಸಿ ಸವಿಯಿರಿ.
ಮಸಾಲೆಯುಕ್ತ ಸೋಯಾ ಭುರ್ಜಿ (Soya Bhurji) ಸೋಯಾ ಭುರ್ಜಿ ಉತ್ತಮವಾದ ಕಡಿಮೆ ಕ್ಯಾಲೋರಿ, ಪೌಷ್ಟಿಕಾಂಶದ ಭಕ್ಷ್ಯವಾಗಿದೆ. ಇದನ್ನು ಚಪಾತಿಯೊಂದಿಗೆ ತಿನ್ನಬಹುದು. ಅಥವಾ ಸ್ಯಾಂಡ್‌ವಿಚ್, ಸಮೋಸಾ ಇತ್ಯಾದಿಗಳೊಂದಿಗು ಕೂಡಾ ತಿನ್ನಬಹುದಾಗಿದೆ.
ಮಸಾಲೆಯುಕ್ತ ಸೋಯಾ ಭುರ್ಜಿ ಮಾಡಲು ಬೇಕಾಗುವ ಪದಾರ್ಥಗಳು 1 ಕಪ್ ಸೋಯಾ 1 ದೊಡ್ಡ ಈರುಳ್ಳಿ 1 ಕೊತ್ತಂಬರಿ ಸೊಪ್ಪಿನ ಸೂಡು 1 ಟೀಸ್ಪೂನ್ ಅಡುಗೆ ಎಣ್ಣೆ 1/2 ಟೀಸ್ಪೂನ್ ಗರಂ ಮಸಾಲಾ ಅರಿಶಿನ ಪುಡಿಯ ಚಿಟಿಕೆ ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ ಮೊದಲು ಸೋಯಾ ತೊಳೆದು ನೀರಿನಲ್ಲಿ ನೆನೆಸಿಡಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ, ಗರಂ ಮಸಾಲಾ ಮತ್ತು ಅರಿಶಿಣ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ತೊಳೆದು ನೆನೆಸಿದ ಸೋಯಾ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ ಇದರಿಂದ ಮಸಾಲಾವು ಸೋಯಾದೊಂದಗಿ ಬೆರೆಯುತ್ತದೆ. ಈಗ ಮಸಾಲೆಯುಕ್ತ ಸೋಯಾ ಭುರ್ಜಿ ಸವಿಯಲು ಸಿದ್ದ.
ಪಾಲಕ್ ಭುರ್ಜಿ (Palak Bhurji)
ಪಾಲಕ್ ಭುರ್ಜಿ ಮಸಾಲೆ ಮಾಡಲು ತುಂಬಾ ಸುಲಭ ಮತ್ತು ತ್ವರಿತ. ಈ ಪಾಲಾಕ್ ಭುರ್ಜಿ ರೆಸಿಪಿ ಆರೋಗ್ಯಕರ, ಹಗುರವಾದ ಖಾದ್ಯವಾಗಿದೆ. ಆರೋಗ್ಯಕರ ತರಕಾರಿಗಳಲ್ಲಿ ಒಂದಾದ ಈ ಪಾಲಾಕ್ ಭುರ್ಜಿಯನ್ನು ಚಪಾತಿಯೊಂದಿಗೆ ಸವಿಯಬಹುದು.
ಪಾಲಕ್ ಭುರ್ಜಿ ಮಾಡಲು ಬೇಕಾಗುವ ಪದಾರ್ಥಗಳು 1 ಸೂಡು ಪಾಲಕ್ 4 ಟೀಸ್ಪೂನ್ ಅಡುಗೆ ಎಣ್ಣೆ ಬೆಳ್ಳುಳ್ಳಿ ಪೇಸ್ಟ್ 1 ಟೀಸ್ಪೂನ್ ದೇಸಿ ತುಪ್ಪ 2 ಟೀಸ್ಪೂನ್ ಶುಂಠಿ ಪೇಸ್ಟ್ 2-3 ಕತ್ತರಿಸಿದ ಟೊಮ್ಯಾಟೊ 1 ಟೀಸ್ಪೂನ್ ಜೀರಿಗೆ ಪುಡಿ 1 ಟೀಸ್ಪೂನ್ ಕೊತ್ತಂಬರಿ ಪುಡಿ ಬೆಣ್ಣೆ ಕತ್ತರಿಸಿದ 2 ಈರುಳ್ಳಿ 2 ಟೀಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ 100 ಗ್ರಾಂ ಪುಡಿಮಾಡಿದ ಪನೀರ್ 4-5 ಹಸಿರು ಮೆಣಸಿನಕಾಯಿಗಳು
ಪಾಲಕ್ ಭುರ್ಜಿ ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ಪೇಸ್ಟ್, ಪಾಲಕ್ ಸೊಪ್ಪು ಮತ್ತು ಉಪ್ಪು ಹಾಕಿ ಸ್ವಲ್ಪ ಸಮಯ ಬೇಯಿಸಿ. ನಂತರ ಪ್ಯಾನ್‌ನಲ್ಲಿ ದೇಸಿ ತುಪ್ಪವನ್ನು ಹಾಕಿ. ಅದಕ್ಕೆ ಬೆಳ್ಳುಳ್ಳಿ ಪೇಸ್ಟ್, ಶುಂಠಿ ಪೇಸ್ಟ್ ಸೇರಿಸಿ ಮಿಶ್ರಣ ಮಾಡಿ. ನಂತರ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ, ಟೊಮೆಟೊ, ಜೀರಿಗೆ ಪುಡಿ ಮತ್ತು ಧನಿಯಾ ಪುಡಿ ಸೇರಿಸಿ. ಇನ್ನೂ ಸ್ವಲ್ಪ ಸಮಯ ಬೇಯಿಸಿ.
ನಂತರ ಬಾಣಲೆಯಲ್ಲಿ ಬೆಣ್ಣೆ ಮತ್ತು ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಸ್ವಲ್ಪ ಸಮಯದ ನಂತರ ಪಾಲಕ್, ಟೊಮೆಟೊ ಪೇಸ್ಟ್, ಉಪ್ಪು, ಕೆಂಪು ಮೆಣಸಿನ ಪುಡಿ, ಪನೀರ್, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಪಾಲಕ್ ಭರ್ಜಿಯನ್ನು ಸ್ವಲ್ಪ ಸಮಯ ಬೇಯಿಸಿ. ಕೊನೆಗೆ ತೆಳುವಾಗಿ ಕತ್ತರಿಸಿದ ಶುಂಠಿಯಿಂದ ಅಲಂಕರಿಸಿ ಈಗ ಪಾಲಕ್ ಭುರ್ಜಿ ಸವಿಯಲು ಸಿದ್ದ.
ಜೀವನಶೈಲಿ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:58 pm, Tue, 17 May 22