AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajasthan: ಆಂಬ್ಯುಲೆನ್ಸ್‌ ಇಂಧನ ಖಾಲಿಯಾಗಿ ರೋಗಿ ಸಾವು, ನಿರ್ವಹಣೆಯ ವೈಫಲ್ಯ ಎಂದ ಸಚಿವ

ಆಂಬ್ಯುಲೆನ್ಸ್‌ (ambulance) ಇಂಧನ ಖಾಲಿಯಾಗಿ ರೋಗಿಯೊಬ್ಬರನ್ನು ಆಂಬ್ಯುಲೆನ್ಸ್‌ನಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಬನ್ಸಾವರಾನಲ್ಲಿ ನಡೆದಿದೆ. ಆಂಬ್ಯುಲೆನ್ಸ್​ನಲ್ಲಿ ಇಂಧನ ಕೊರತೆ ಉಂಟಾದ ಕಾರಣ ಆಂಬ್ಯುಲೆನ್ಸ್‌ ಮಧ್ಯದಲ್ಲಿ ನಿಂತಿದೆ.

Rajasthan: ಆಂಬ್ಯುಲೆನ್ಸ್‌ ಇಂಧನ ಖಾಲಿಯಾಗಿ ರೋಗಿ ಸಾವು, ನಿರ್ವಹಣೆಯ ವೈಫಲ್ಯ ಎಂದ ಸಚಿವ
Relatives of patients were seen pushing the ambulance in Rajasthan's Banswara on Friday Image Credit source: ANI
TV9 Web
| Edited By: |

Updated on:Nov 26, 2022 | 3:46 PM

Share

ರಾಜಸ್ಥಾನ: ಆಂಬ್ಯುಲೆನ್ಸ್‌ ನ(ambulance) ಇಂಧನ ಖಾಲಿಯಾಗಿ ರೋಗಿಯೊಬ್ಬರು ಆಂಬ್ಯುಲೆನ್ಸ್‌ನಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಬನ್ಸಾವರಾನಲ್ಲಿ ನಡೆದಿದೆ. ಆಂಬ್ಯುಲೆನ್ಸ್​ನಲ್ಲಿ ಇಂಧನ ಕೊರತೆ ಉಂಟಾದ ಕಾರಣ ಆಂಬ್ಯುಲೆನ್ಸ್‌ ಮಧ್ಯದಲ್ಲಿ ನಿಂತಿದೆ. ನಂತರ ರೋಗಿಯ ಸಂಬಂಧಿಕರು ಆಂಬ್ಯುಲೆನ್ಸ್ ಅನ್ನು ತಳ್ಳಿದ್ದಾರೆ, ಇದೀಗ ಈ  ವಿಡಿಯೋ ವೈರಲ್ ಆಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆ ನಮ್ಮ ಗಮನಕ್ಕೆ ಬಂದಿದೆ, ಈಗಾಗಲೇ ನಾವು ತನಿಖೆ ಆರಂಭಿಸಿದ್ದೇವೆ. ಆಂಬ್ಯುಲೆನ್ಸ್​​ನಲ್ಲಿ ಸಾವನ್ನಪ್ಪಿರುವ ರೋಗಿಯ ಸಂಬಂಧಿಕರನ್ನು ಭೇಟಿ ಮಾಡಿ ಈ ಘಟನೆ ಬಗ್ಗೆ ತಿಳಿದುಕೊಳ್ಳುತ್ತೇವೆ. ಈ ಆಂಬ್ಯುಲೆನ್ಸ್‌ನ್ನು ಖಾಸಗಿ ಏಜೆನ್ಸಿ ನಡೆಸುತ್ತಿದೆ, ಆಂಬ್ಯುಲೆನ್ಸ್‌ಗಳ ನಿರ್ವಹಣೆಯ ಬೇಜಾವಾಬ್ದಾರಿಯಿಂದ ನಡೆದಿರುವ ಘಟನೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ANIಗೆ ತಿಳಿಸಿದ್ದಾರೆ.

ರಾಜಸ್ಥಾನದ ರಾಜ್ಯ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಈ ಘಟನೆಯು ನಿರ್ವಹಣೆಯ ವೈಫಲ್ಯ ಎಂದು ಹೇಳಿದ್ದಾರೆ. ಅವರು ಪ್ರಸ್ತುತ ಸಾರಿಗೆ ಮತ್ತು ಸೈನಿಕರ ಕಲ್ಯಾಣ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿದ್ದಾರೆ.

ಇದನ್ನು ಓದಿ: Rajasthan: ಹೆಲಿಕಾಪ್ಟರ್‌ನ ಶಬ್ದದಿಂದ ನನ್ನ ಎಮ್ಮೆ ಸಾವನ್ನಪ್ಪಿದೆ ಶಾಸಕನ ವಿರುದ್ಧ ದೂರು ನೀಡಿದ ರೈತ

ನಮ್ಮ ಸರ್ಕಾರವು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಿದೆ, ಆಂಬ್ಯುಲೆನ್ಸ್‌ನಲ್ಲಿ ಇಂಧನ ಕೊರತೆಯಿಂದ ರೋಗಿಯು ಸಾವನ್ನಪ್ಪಿದ್ದರೆ  ಅದು ನಿರ್ವಹಣೆಯ ವೈಫಲ್ಯವೇ ಹೊರತು ವ್ಯವಸ್ಥೆಯದ್ದಲ್ಲ, ಅದಕ್ಕೆ ಕಾರಣರಾದವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sat, 26 November 22