Price Hike: ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್; ಅಡುಗೆ ಸಿಲಿಂಡರ್‌ ಬೆಲೆ 50 ರೂಪಾಯಿ ಹೆಚ್ಚಳ

| Updated By: shivaprasad.hs

Updated on: May 07, 2022 | 11:10 AM

Domestic LPG Cylinder: ಅಡುಗೆ ಸಿಲಿಂಡರ್‌ (Domestic LPG Cylinder) ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆ.ಜಿ ಗ್ಯಾಸ್ ಸಿಲಿಂಡರ್ ಬೆಲೆ 999.50ಕ್ಕೆ ಏರಿಕೆಯಾಗಿದೆ.

Price Hike: ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆಯ ಶಾಕ್; ಅಡುಗೆ ಸಿಲಿಂಡರ್‌ ಬೆಲೆ 50 ರೂಪಾಯಿ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us on

ಬೆಲೆ ಏರಿಕೆಯಿಂದ (Price Hike) ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಅಡುಗೆ ಸಿಲಿಂಡರ್‌ (Domestic LPG Cylinder) ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದ್ದು, 14.2 ಕೆ.ಜಿ ಗ್ಯಾಸ್ ಸಿಲಿಂಡರ್ ಬೆಲೆ 999.50ಕ್ಕೆ ಏರಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಈ ಮೂಲಕ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ದರ ಏರಿಕೆಯಾದಂತಾಗಿದೆ. ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹ 102.50 ಹೆಚ್ಚಿಸಲಾಗಿತ್ತು.
ಎಲ್‌ಪಿಜಿ ಸಿಲಿಂಡರ್ ಎಂದೂ ಕರೆಯಲ್ಪಡುವ 14.2 ಕೆಜಿ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಇನ್ನು ₹ 999.50 ಆಗಲಿದೆ.

ಮಾರ್ಚ್ 22 ರಂದು ಕೊನೆಯ ಬಾರಿಗೆ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿತ್ತು. ಆಗ ಬೆಲೆಯನ್ನು 50 ರೂ ಹೆಚ್ಚಳ ಮಾಡಲಾಗಿತ್ತು. ಏಪ್ರಿಲ್ ತಿಂಗಳಲ್ಲಿ ಈ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿರಲಿಲ್ಲ.

ಇದನ್ನೂ ಓದಿ
ತುಮಕೂರು: ಅವ್ಯವಸ್ಥೆಯ ಆಗರವಾದ ಪಾವಗಡ ಸಾರ್ವಜನಿಕ ಆಸ್ಪತ್ರೆ; ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ ವಿಶ್ರಾಂತಿಗೆ ಬೆಡ್‌ ಸಿಗದೆ ಪರದಾಟ
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಇತಿ‌ಮಿತಿ ಇತ್ತು: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ
ಅವರು ನನ್ನ ಗಂಡನಿಗೆ 30-35 ಬಾರಿ ಹೊಡೆದರು, ಜನರಲ್ಲಿ ಸಹಾಯ ಬೇಡಿದರೂ ಯಾರೂ ಬರಲಿಲ್ಲ: ಹೈದರಾಬಾದ್​​ನಲ್ಲಿ ಹತ್ಯೆಯಾದ ನಾಗರಾಜು ಪತ್ನಿ ಸುಲ್ತಾನಾ

ಈ ಕುರಿತು ಎಎನ್​ಐ ಟ್ವೀಟ್ ಇಲ್ಲಿದೆ:

ಪ್ರಸ್ತುತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹ 2,355.50 ಇದೆ. ಇದನ್ನು ₹ 2,253 ರಿಂದ ಹೆಚ್ಚಳ ಮಾಡಲಾಗಿತ್ತು. ಈ ನಡುವೆ 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹ 655 ಆಗಿದೆ.

ವ್ಯಾಟ್‌ನಂತಹ ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಬೆಲೆಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದ ಜನರು ಈಗಾಗಲೇ ಹೆಣಗಾಡುತ್ತಿರುವ ಸಮಯದಲ್ಲಿ ಗ್ಯಾಸ್​ನ ಬೆಲೆಯೂ ಏರಿಕೆಯಾಗಿದ್ದು, ಜನರ ಆತಂಕವನ್ನು ಹೆಚ್ಚಿಸಿದೆ.

ಹಿಂದಿನ ಏಪ್ರಿಲ್‌ನಲ್ಲಿ ಬಹಳಷ್ಟು ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಪಿಎನ್‌ಜಿ ಬೆಲೆಯನ್ನು ಪ್ರತಿ ಯೂನಿಟ್‌ಗೆ ₹ 4.25 ರಷ್ಟು ಹೆಚ್ಚಿಸಲಾಗಿದ್ದು, ಪ್ರತಿ ಎಸ್‌ಸಿಎಮ್‌ಗೆ ₹ 45.86 ವೆಚ್ಚವನ್ನು ಹೆಚ್ಚಿಸಲಾಗಿದೆ.

ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Sat, 7 May 22