2002ರ ಗುಜರಾತ್ ಗಲಭೆ ಕೇಸ್: ತೀಸ್ತಾ ಸೆಟಲ್ವಾಡ್ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
2002ರ ಗುಜರಾತ್‌ನ ಗಲಭೆ ಕೇಸ್‌ನಲ್ಲಿ ಸಾಕ್ಷ್ಯ ತಿರುಚಿದ ಪ್ರಕರಣಕ್ಕೆ ಸಂಬಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿಯಾಗಿರುವ ತೀಸ್ತಾ ಸೆಟಲ್ವಾಡ್ಗೆ ಸುಪ್ರೀಂಕೋರ್ಟ್ ಒಂದು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
2002ರ ಗುಜರಾತ್‌ನ ಗಲಭೆ ಕೇಸ್‌ನಲ್ಲಿ ಸಾಕ್ಷ್ಯ ತಿರುಚಿದ ಪ್ರಕರಣಕ್ಕೆ ಸಂಬಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿಯಾಗಿರುವ ತೀಸ್ತಾ ಸೆಟಲ್ವಾಡ್ (Teesta Setalvad)ಗೆ ಸುಪ್ರೀಂಕೋರ್ಟ್ ಒಂದು ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮುಂಚೆ ಗುಜರಾತ್ ಹೈಕೋರ್ಟ್ ತೀಸ್ತಾ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಕೂಡಲೇ ಶರಣಾಗುವಂತೆ ಸೂಚಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ತೀಸ್ತಾ ಸೆಟಲ್ವಾಡ್ ‘ಸುಪ್ರೀಂ’ಗೆ ಅರ್ಜಿ ಸಲ್ಲಿಸಿದ್ದು, ಸದ್ಯ ಮಧ್ಯಂತರ ರಿಲೀಫ್ ನೀಡಿದೆ.
2002ರಲ್ಲಿ ರಾಜ್ಯದಲ್ಲಿ ನಡೆದ ಗೋಧ್ರಾ ಗಲಭೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಮಾಯಕರನ್ನು ಮತ್ತು ಅಧಿಕಾರಿಗಳನ್ನು ಕೆಣಕಿರುವ ಆರೋಪ ಎದುರಿಸುತ್ತಿದ್ದರು. ಗುಜರಾತ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ನಿಯಮಿತ ಜಾಮೀನು ಕೋರಿ ಆಕೆ ಸಲ್ಲಿಸಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಶನಿವಾರ ತಿರಸ್ಕರಿಸಿದ್ದು, ಮತ್ತು ತನಿಖಾ ಸಂಸ್ಥೆಗೆ ತಕ್ಷಣವೇ ಶರಣಾಗುವಂತೆ ಸೂಚಿಸಿತ್ತು.
ಇದನ್ನೂ ಓದಿ: PM Modi in Shahdol: ಪಕಾರಿಯಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ದೊರೆಯಿತು ಬುಡಕಟ್ಟು ಶೈಲಿಯ ಸ್ವಾಗತ; ಇಲ್ಲಿದೆ ಫೋಟೋಗಳು
ತೀಸ್ತಾ ಸೆಟಲ್ವಾಡ್ ಅವರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಮಧ್ಯಂತರ ಜಾಮೀನು ನೀಡುವ ತನ್ನ ಆದೇಶದಿಂದ ಪ್ರಭಾವಿತವಾಗದೆ ಆಕೆಯ ನಿಯಮಿತ ಜಾಮೀನು ಅರ್ಜಿಯನ್ನು ಆಲಿಸುವಂತೆ ಗುಜರಾತ್ ಹೈಕೋರ್ಟ್‌ಗೆ ಕೇಳಿಕೊಂಡಿತು. ತನ್ನ ಪಾಸ್‌ಪೋರ್ಟ್ ಅನ್ನು ವಿಚಾರಣಾ ನ್ಯಾಯಾಲಯದ ಮುಂದೆ ಒಪ್ಪಿಸುವಂತೆ ಮತ್ತು ತನ್ನ ವಿರುದ್ಧದ ತನಿಖಾ ಸಂಸ್ಥೆಗೆ ಸಹಕರಿಸುವಂತೆ ಕೇಳಿಕೊಂಡಿತ್ತು.
ಇದನ್ನೂ ಓದಿ: ಗುಜರಾತ್‌ನಲ್ಲಿ ಭಾರಿ ಮಳೆಯಿಂದ 11 ಜನರು ಸಾವು: ಹಲವೆಡೆ ಹೈಅಲರ್ಟ್ ಘೋಷಣೆ
2002 ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್ ಸೇರಿದಂತೆ ಆರ್.ಬಿ.ಶ್ರೀಕುಮಾರ್, ಮಾಜಿ ಪೊಲೀಸ್ ಮಹಾನಿರ್ದೇಶಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಕೂಡ ಆರೋಪ ಎದುರಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:49 pm, Sat, 1 July 23