ಕಾಂಗ್ರೆಸ್ ದಿವಾಳಿತನವು ನೈತಿಕ ಮತ್ತು ಬೌದ್ಧಿಕವಾಗಿದೆ, ಆರ್ಥಿಕವಲ್ಲ: ಜೆಪಿ ನಡ್ಡಾ

|

Updated on: Mar 21, 2024 | 7:24 PM

ಪ್ರತಿಯೊಂದು ಕ್ಷೇತ್ರದಿಂದ, ಪ್ರತಿ ರಾಜ್ಯದಲ್ಲಿ ಮತ್ತು ಇತಿಹಾಸದ ಪ್ರತಿ ಕ್ಷಣದಲ್ಲಿ ಲೂಟಿ ಮಾಡಿದ ಪಕ್ಷ ಆರ್ಥಿಕ ಅಸಹಾಯಕತೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಬೋಫೋರ್ಸ್ ಮೂಲಕ ಜೀಪ್‌ನಿಂದ ಹಿಡಿದು ಚಾಪರ್ ಹಗರಣದವರೆಗಿನ ಎಲ್ಲಾ ಹಗರಣಗಳಿಂದ ಕೂಡಿದ ಹಣವನ್ನು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಬಹುದು ಎಂದು ಜೆಪಿ ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ದಿವಾಳಿತನವು ನೈತಿಕ ಮತ್ತು ಬೌದ್ಧಿಕವಾಗಿದೆ, ಆರ್ಥಿಕವಲ್ಲ: ಜೆಪಿ ನಡ್ಡಾ
ಜೆಪಿ ನಡ್ಡಾ
Follow us on

ದೆಹಲಿ ಮಾರ್ಚ್ 21: ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಲೋಕಸಭೆ ಚುನಾವಣೆಗೆ (Lok sabha Election) ಮುಂಚಿತವಾಗಿ ಯಾವುದೇ ಪ್ರಚಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದಲ್ಲ. ಇದು ಭಾರತದ ಪ್ರಜಾಪ್ರಭುತ್ವವನ್ನೇ ಫ್ರೀಜ್ ಮಾಡುವುದಾಗಿದೆ. ದೊಡ್ಡ ವಿರೋಧ ಪಕ್ಷವಾಗಿ, ನಾವು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಜಾಹೀರಾತುಗಳನ್ನು ಬುಕ್ ಮಾಡಲು ಅಥವಾ ನಮ್ಮ ನಾಯಕರನ್ನು ಎಲ್ಲಿಗೂ ಕಳುಹಿಸಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದಿದ್ದಾರೆ ರಾಹುಲ್.

ಕಾಂಗ್ರೆಸ್ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda), ಕಾಂಗ್ರೆಸ್ ಈಗ ತಮ್ಮ ಸ್ವಂತ ತಪ್ಪುಗಳನ್ನು ಸರಿಪಡಿಸುವ ಬದಲು ಅವರ ತೊಂದರೆಗಳಿಗೆ ಅಧಿಕಾರಿಗಳನ್ನು ದೂಷಿಸುತ್ತಿದೆ ಕಾಂಗ್ರೆಸ್ ಪಕ್ಷವು ಐತಿಹಾಸಿಕ ಸೋಲನ್ನು ಎದುರಿಸಲಿದೆ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಕಲ್ಪನೆ ಸುಳ್ಳು ಎಂಬ ರಾಹುಲ್ ಗಾಂಧಿಯವರ ಟೀಕೆಯನ್ನು ಉಲ್ಲೇಖಿಸಿದ ನಡ್ಡಾ, 1975 ಮತ್ತು 1977 ರ ನಡುವೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಮಯದಲ್ಲಿ ಭಾರತ ಪ್ರಜಾಪ್ರಭುತ್ವವಾಗಿರಲಿಲ್ಲ ಎಂದಿದ್ದಾರೆ.

ನಡ್ಡಾ ಟ್ವೀಟ್

ಕಾಂಗ್ರೆಸ್ ಅನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ. ಐತಿಹಾಸಿಕ ಸೋಲಿನ ಭಯದಿಂದ ಅವರ ಉನ್ನತ ನಾಯಕತ್ವ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಅನುಕೂಲಕರವಾಗಿ ತಮ್ಮ ಅಪ್ರಸ್ತುತತೆಯನ್ನು ‘ಆರ್ಥಿಕ ತೊಂದರೆಗಳ’ ಮೇಲೆ ಆರೋಪಿಸುತ್ತಾರೆ. ವಾಸ್ತವದಲ್ಲಿ, ಅವರ ದಿವಾಳಿತನವು ನೈತಿಕ ಮತ್ತು ಬೌದ್ಧಿಕವಾಗಿದೆ, ಆರ್ಥಿಕವಲ್ಲ. ಕಾಂಗ್ರೆಸ್ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು ತಮ್ಮ ತೊಂದರೆಗಳಿಗೆ ಅಧಿಕಾರಿಗಳನ್ನು ದೂಷಿಸುತ್ತಿದೆ. ಐಟಿಎಟಿ ಆಗಿರಲಿ ಅಥವಾ ದೆಹಲಿ ಹೈಕೋರ್ಟ್ ಆಗಿರಲಿ, ಅವರು ಕಾಂಗ್ರೆಸ್‌ಗೆ ನಿಯಮಗಳನ್ನು ಪಾಲಿಸಲು, ಬಾಕಿ ತೆರಿಗೆ ಪಾವತಿಸಲು ಕೇಳಿಕೊಂಡಿದ್ದಾರೆ.ಆದರೆ ಪಕ್ಷವು ಎಂದಿಗೂ ಹಾಗೆ ಮಾಡಲಿಲ್ಲ ಎಂದು ನಡ್ಡಾ ಹೇಳಿದರು.

ಪ್ರತಿಯೊಂದು ಕ್ಷೇತ್ರದಿಂದ, ಪ್ರತಿ ರಾಜ್ಯದಲ್ಲಿ ಮತ್ತು ಇತಿಹಾಸದ ಪ್ರತಿ ಕ್ಷಣದಲ್ಲಿ ಲೂಟಿ ಮಾಡಿದ ಪಕ್ಷ ಆರ್ಥಿಕ ಅಸಹಾಯಕತೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಬೋಫೋರ್ಸ್ ಮೂಲಕ ಜೀಪ್‌ನಿಂದ ಹಿಡಿದು ಚಾಪರ್ ಹಗರಣದವರೆಗಿನ ಎಲ್ಲಾ ಹಗರಣಗಳಿಂದ ಕೂಡಿದ ಹಣವನ್ನು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಬಹುದು. ಕಾಂಗ್ರೆಸ್ ಅರೆಕಾಲಿಕ ನಾಯಕರು ಭಾರತ ಪ್ರಜಾಪ್ರಭುತ್ವ ಎಂಬುದು ಸುಳ್ಳು ಎಂದು ಹೇಳುತ್ತಾರೆ. 1975 ಮತ್ತು 1977 ರ ನಡುವೆ ಕೆಲವೇ ತಿಂಗಳುಗಳವರೆಗೆ ಭಾರತವು ಪ್ರಜಾಪ್ರಭುತ್ವವಾಗಿರಲಿಲ್ಲ. ಆ ಸಮಯದಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಧಿ ಆಗಿದ್ದರು ಎಂದು ನಾನು ಅವರಿಗೆ ವಿನಮ್ರವಾಗಿ ನೆನಪಿಸುತ್ತೇನೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ: ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?

ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸ್ಪರ್ಧೆ ನಡೆಯಲು ಪಕ್ಷದ ಬ್ಯಾಂಕ್ ಖಾತೆಗಳಿಗೆ ಪ್ರವೇಶವನ್ನು ನೀಡಬೇಕು ಎಂದು ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ”ನಾವು ಯಾವುದೇ ಪ್ರಚಾರ ಕಾರ್ಯ ಮಾಡುವಂತಿಲ್ಲ. ಚುನಾವಣೆ ಎದುರಿಸುವ ನಮ್ಮ ಸಾಮರ್ಥ್ಯಕ್ಕೆ ಧಕ್ಕೆಯಾಗಿದೆ” ಎಂದು ಹೇಳಿದರು. ಆದಾಯ ತೆರಿಗೆ ರಿಟರ್ನ್ಸ್ ಸಮಸ್ಯೆಯಿಂದಾಗಿ ಸರ್ಕಾರ ತಮ್ಮ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:21 pm, Thu, 21 March 24