ಹಿಜಾಬ್ ಅಗತ್ಯವಿಲ್ಲ, ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸುವುದಿಲ್ಲ: ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್

| Updated By: ರಶ್ಮಿ ಕಲ್ಲಕಟ್ಟ

Updated on: Feb 17, 2022 | 11:53 AM

Pragya Thakur ಹಿಂದೂಗಳು "ಮಹಿಳೆಯರನ್ನು ಪೂಜಿಸುತ್ತಾರೆ. ಮನೆಯಲ್ಲಿ ಸುರಕ್ಷಿತವಲ್ಲದವರು ಹಿಜಾಬ್ ಧರಿಸಬೇಕಾಗುತ್ತದೆ.  "ಎಲ್ಲಿಯೂ ಹಿಜಾಬ್ ಧರಿಸುವ ಅಗತ್ಯವಿಲ್ಲ, ಅವರ ಮನೆಯಲ್ಲಿ ಸುರಕ್ಷಿತವಾಗಿಲ್ಲದ ಜನರು ಹಿಜಾಬ್ ಧರಿಸುತ್ತಾರೆ, ನಿಮಗೆ ಮದರಸಾ ಇದೆ

ಹಿಜಾಬ್ ಅಗತ್ಯವಿಲ್ಲ, ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸುವುದಿಲ್ಲ: ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್
ಪ್ರಗ್ಯಾ ಠಾಕೂರ್
Follow us on

ಭೋಪಾಲ್: ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ (Hijab) ಧರಿಸಲು ಅನುಮತಿ ನಿರಾಕರಿಸಲಾಗಿದೆ ಎಂಬ ಆಕ್ರೋಶ ಹೆಚ್ಚುತ್ತಿರುವ ನಡುವೆಯೇ ವಿವಾದಿತ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್  (Pragya Thakur ) ಸಾರ್ವಜನಿಕವಾಗಿ ಹಿಜಾಬ್ ಧರಿಸುವುದನ್ನು ಸಹಿಸುವುದಿಲ್ಲ ಎಂದು ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಲೆಗಾಂವ್ ಸ್ಫೋಟ (Malegaon blasts) ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಜಾಮೀನಿನ ಮೇಲೆ ಹೊರಗಿದ್ದಾರೆ.  ಪ್ರಖರವಾದ ಹೇಳಿಕೆಗಳನ್ನು ನೀಡುವ ಪ್ರಗ್ಯಾ ಠಾಕೂರ್, “ಹಿಜಾಬ್ ಧರಿಸುವ ಅಗತ್ಯವಿಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಹಿಂದೂಗಳು “ಮಹಿಳೆಯರನ್ನು ಪೂಜಿಸುತ್ತಾರೆ. ಮನೆಯಲ್ಲಿ ಸುರಕ್ಷಿತವಲ್ಲದವರು ಹಿಜಾಬ್ ಧರಿಸಬೇಕಾಗುತ್ತದೆ.  “ಎಲ್ಲಿಯೂ ಹಿಜಾಬ್ ಧರಿಸುವ ಅಗತ್ಯವಿಲ್ಲ, ಅವರ ಮನೆಯಲ್ಲಿ ಸುರಕ್ಷಿತವಾಗಿಲ್ಲದ ಜನರು ಹಿಜಾಬ್ ಧರಿಸುತ್ತಾರೆ, ನಿಮಗೆ ಮದರಸಾ ಇದೆ, ನೀವು ಹಿಜಾಬ್ ಧರಿಸಿದರೆ ನಮಗೆ ಏನೂ ಕೆಲಸವಿಲ್ಲ ಹೊರಗೆ, ಎಲ್ಲಿ ‘ಹಿಂದೂ ಸಮಾಜ’ ಇದೆಯೋ, ಅದರ ಅಗತ್ಯವಿಲ್ಲ” ಎಂದು ಮಧ್ಯಪ್ರದೇಶದ ಭೋಪಾಲ್‌ನ ದೇವಸ್ಥಾನವೊಂದರಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಗ್ಯಾ ಹೇಳಿದರು. “ಹಿಜಾಬ್ ಅಂದರೆ ಪರ್ದಾ. ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ವಿರುದ್ಧ ಪರ್ದಾವನ್ನು ಬಳಸಬೇಕು. ಆದರೆ ಹಿಂದೂಗಳು ಮಹಿಳೆಯರನ್ನು ಪೂಜಿಸುವುದರಿಂದ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ” ಎಂದು ಅವರು ಹೇಳಿದರು.  ಡಿಸೆಂಬರ್‌ನಲ್ಲಿ ಉಡುಪಿ ಜಿಲ್ಲೆಯ ಆರು ವಿದ್ಯಾರ್ಥಿಗಳು ಹಿಜಾಬ್ ನಿರ್ಬಂಧವನ್ನು ಪ್ರಶ್ನಿಸಿದ ನಂತರ ಕರ್ನಾಟಕದ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ವಿವಾದ ಭುಗಿಲೆದ್ದಿತು.

Pragya Thakur
ಮುಂದಿನ ಕೆಲವು ವಾರಗಳಲ್ಲಿ, ಪ್ರತಿಭಟನೆಗಳು ನೆರೆಯ ಜಿಲ್ಲೆಗಳಲ್ಲಿ ಹರಡಿತು ಮತ್ತು ಬಲಪಂಥೀಯ ಹಿಂದೂ ಗುಂಪುಗಳು ಕೇಸರಿ ಸ್ಕಾರ್ಫ್‌ಗಳು ಮತ್ತು ಧ್ವಜಗಳನ್ನು ಝಳಪಿಸುತ್ತಾ ಪ್ರತಿಭಟನೆಗಳನ್ನು ನಡೆಸಿದವು. ಇದು ಉದ್ವಿಗ್ನ ನಿಲುವುಗಳಿಗೆ ಮತ್ತು ಯುವತಿಯರನ್ನು ಶಿಕ್ಷಣ ಸಂಸ್ಥೆಗಳಿಂದ ದೂರವಿಡುವ ಗೊಂದಲದ ದೃಶ್ಯಗಳಿಗೆ ಕಾರಣವಾಯಿತು.

ಕರ್ನಾಟಕ ಉಚ್ಚ ನ್ಯಾಯಾಲಯವು ಪ್ರಸ್ತುತ ಉಡುಪಿ ವಿದ್ಯಾರ್ಥಿಗಳ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದೆ, ಅವರ ವಕೀಲರು ನಿನ್ನೆ “ನೂರಾರು ಧಾರ್ಮಿಕ ಚಿಹ್ನೆಗಳಾದ ದುಪಟ್ಟಾಗಳು, ಬಳೆಗಳು, ಪೇಟಗಳು, ಶಿಲುಬೆಗಳು ಮತ್ತು ಬಿಂದಿಗಳನ್ನು” ಪ್ರತಿ ದಿನ ಪ್ರಶ್ನಿಸದೆ ಧರಿಸುತ್ತಾರೆ. ಆದರೆ ಹಿಜಾಬ್ ಅನ್ನು ಧಾರ್ಮಿಕ ಆಧಾರದ ಮೇಲೆ ಗುರಿಪಡಿಸಲಾಗಿದೆ ಎಂದು ಸೂಚಿಸಿದರು.

ಇದನ್ನೂ ಓದಿ: ಹಿಜಾಬ್ ಪರ ಹೋರಾಟಗಾರ್ತಿ ಸೀಮಾಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ; ಸಿಇಎನ್ ಠಾಣೆ, ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು

Published On - 11:51 am, Thu, 17 February 22