ಹಿಜಾಬ್ ಪರ ಹೋರಾಟಗಾರ್ತಿ ಸೀಮಾಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ; ಸಿಇಎನ್ ಠಾಣೆ, ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು
ಸಾಮಾಜಿಕ ಕಾರ್ಯಕರ್ತೆ ಸೀಮಾ ಇನಾಂದಾರ್‌ಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನಂತೆ. ವಾಟ್ಸಪ್ ಕಾಲ್ ಮಾಡಿ ಹಿಜಾಬ್ ಹಿಜಾಬ್ ಅಂತಾ ಏನ್ ಹೇಳ್ತಿದೆಯಾ ಆಜಾದಿ ಬೇಕಾ ನಿಮಗೆ?
ಬೆಳಗಾವಿ: ರಾಜ್ಯಾದ್ಯಂತ ಹಿಜಾಬ್ ಕಿಚ್ಚು ಧಗಧಗಿಸ್ತಿದೆ. ಭವಿಷ್ಯದ ಚಿಂತೆ ಮರೆತು ವಿದ್ಯಾರ್ಥಿಗಳು ಧರ್ಮ ಸಂಘರ್ಷಕ್ಕಿಳಿದಿದ್ದಾರೆ. ಕಿತಾಬ್ಗಿಂತ ಹಿಜಾಬೇ ಮುಖ್ಯ ಅಂತಾ ಕಾಲೇಜುಗಳಲ್ಲೇ ಕಾಳಗ ಶುರುಮಾಡಿದ್ದಾರೆ. ಸದ್ಯ ಹಿಜಾಬ್ ಪರವಿದ್ದ ಹೋರಾಟಗಾರ್ತಿಗೆ ಜೀವ ಬೆದರಿಕೆಯ ಕರೆ ಬಂದಿದೆ. ಹಿಜಾಬ್ ಪರ ಧ್ವನಿ ಎತ್ತಿದ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತೆ ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ ಕರೆ ಬಂದಿದ್ದು ಈ ಬಗ್ಗೆ ಸೀಮಾ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಸೀಮಾ ಇನಾಂದಾರ್‌ಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ಕಾಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನಂತೆ. ವಾಟ್ಸಪ್ ಕಾಲ್ ಮಾಡಿ ಹಿಜಾಬ್ ಹಿಜಾಬ್ ಅಂತಾ ಏನ್ ಹೇಳ್ತಿದೆಯಾ ಆಜಾದಿ ಬೇಕಾ ನಿಮಗೆ? ನಿನ್ನನ್ನು ಅಟ್ಟಾಡಿಸಿ ಹೊಡೀತೀವಿ ಎಂದು ಅಪರಿಚಿತ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನಂತೆ. ಹೀಗಾಗಿ ಸೀಮಾ ಬೆಳಗಾವಿ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸೀಮಾರಿಗೆ ಹಿಂದಿ ಭಾಷೆಯಲ್ಲಿ ಜೀವ ಬೆದರಿಕೆ ಹಾಕಿದ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಾಟ್ಸಪ್ ವಾಯ್ಸ್ ಕಾಲ್ ಬೇರೆ ಮೊಬೈಲ್‌ನಿಂದ ರೆಕಾರ್ಡ್ ಮಾಡಿಕೊಂಡಿದ್ದಾರೆ. ವಾಟ್ಸಪ್ ವಾಯ್ಸ್ ಕಾಲ್ ವಿಡಿಯೋ ಮಾಡಿಕೊಂಡು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇತ್ತೀಚೆಗೆ ಹಿಜಾಬ್ ಪರ ಪ್ರತಿಭಟನೆಯಲ್ಲಿ ಸೀಮಾ ಇನಾಂದಾರ್ ಭಾಗವಹಿಸಿದ್ದರು.
ಹಿಜಾಬ್ ಗಲಾಟೆ ನಡೆದ ಶಾಲೆಯಲ್ಲಿ ಮಕ್ಕಳಿಗೆ ಡಿಸಿ, ಎಸ್ಪಿಯಿಂದ ಪಾಠ ಹಿಜಾಬ್ ವಿವಾದ ಹಿನ್ನೆಲೆ, ಶಾಲಾ ಕಾಲೇಜುಗಳಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತಿದೆ ಎಂದು ಬೆಳಗಾವಿಯ ಹ್ಯೂಮನ್ ರೈಟ್ಸ್ ಅಡ್ವೋಕೆಟ್ಸ್ ಫೋರಂದಿಂದ ಡಿಸಿಗೆ ಮನವಿ ಮಾಡಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಶಾಲಾ ಗೇಟ್ ಬಳಿ ವಿದ್ಯಾರ್ಥಿಗಳನ್ನ ತಡೆದು ಅಪಮಾನ ಮಾಡುತ್ತಿದ್ದಾರೆ. ಶಾಲಾ ಸಿಬ್ಬಂದಿ ಹಿಜಾಬ್ ಧರಿಸಿದ್ರೂ ತೆಗೆಸುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಎಲ್ಲೂ ಉಲ್ಲೇಖ ಇಲ್ಲ. ಕೆಲ ಕಾಲೇಜುಗಳಲ್ಲಿ ಶಾಲಾ ಆವರಣದಲ್ಲಿ ಹಿಜಾಬ್‌ಗೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲರ ನಿಯೋಗ ಮನವಿ ಮಾಡಿದೆ.
ಇದನ್ನೂ ಓದಿ: ಬುರ್ಕಾ, ನಿಖಾಬ್, ಹಿಜಾಬ್ಗಳೆಲ್ಲ ಶೋಷಣೆಯ ಸಂಕೇತಗಳು ಎಂದ ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನ್