PM Modi in Chhattisgarh: ಕಾಂಗ್ರೆಸ್​​ನ ‘ಪಂಜ’ ನಿಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ: ವಿಜಯ್​​​ ಸಂಕಲ್ಪ್​​​ ಮಹಾರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ

ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ನೀಡಿದ 36 ಭರವಸೆಗಳಲ್ಲೊಂದು ರಾಜ್ಯದಲ್ಲಿ ಮದ್ಯ ನಿಷೇಧ. ಇದೀಗ ಐದು ವರ್ಷಗಳು ಕಳೆದಿವೆ, ಆದರೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸಾವಿರಾರು ಕೋಟಿಗಳ ಮದ್ಯ ಹಗರಣ ನಡೆದಿರುವ ಸಂಪೂರ್ಣ ಮಾಹಿತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ಮೋದಿ

PM Modi in Chhattisgarh: ಕಾಂಗ್ರೆಸ್​​ನ ಪಂಜ ನಿಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ: ವಿಜಯ್​​​ ಸಂಕಲ್ಪ್​​​ ಮಹಾರ‍್ಯಾಲಿಯಲ್ಲಿ ಮೋದಿ ವಾಗ್ದಾಳಿ
ಛತ್ತೀಸ್‌ಗಢದ ರಾಯ್‌ಪುರದಲ್ಲಿ ಮೋದಿ
ರಶ್ಮಿ ಕಲ್ಲಕಟ್ಟ

Updated on: Jul 07, 2023 | 12:58 PM

ಶುಕ್ರವಾರ ಛತ್ತೀಸ್‌ಗಢದ (Chhattisgarh) ರಾಯ್‌ಪುರದಲ್ಲಿ ವಿಜಯ್ ಸಂಕಲ್ಪ್ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ಪಕ್ಷವು (Congress) ರಾಜ್ಯದ ಅಭಿವೃದ್ಧಿಯ ಹಾದಿಯಲ್ಲಿ ನಿಂತಿರುವ ‘ಪಂಜ’ (ಚೂಪಾದ ಉಗುರು) ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ಅಭಿವೃದ್ಧಿಯ ಮುಂದೆ ದೊಡ್ಡ ‘ಪಂಜ’ ಗೋಡೆಯಂತೆ ನಿಂತಿದೆ. ಇದು ನಿಮ್ಮ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ಕಾಂಗ್ರೆಸ್ ನ ಚೂಪಾದ ಉಗುರು. ಇದು ಛತ್ತೀಸ್‌ಗಢವನ್ನು ಲೂಟಿ ಮಾಡಿ ಹಾಳುಮಾಡಲು ನಿರ್ಧರಿಸಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಛತ್ತೀಸ್‌ಗಢಕ್ಕೆ ಕಾಂಗ್ರೆಸ್ ನೀಡಿದ 36 ಭರವಸೆಗಳಲ್ಲೊಂದು ರಾಜ್ಯದಲ್ಲಿ ಮದ್ಯ ನಿಷೇಧ. ಇದೀಗ ಐದು ವರ್ಷಗಳು ಕಳೆದಿವೆ, ಆದರೆ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸಾವಿರಾರು ಕೋಟಿಗಳ ಮದ್ಯ ಹಗರಣ ನಡೆದಿರುವ ಸಂಪೂರ್ಣ ಮಾಹಿತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಛತ್ತೀಸ್‌ಗಢ ರಚನೆಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿರುವ ರಾಜ್ಯವಾಗಿದೆ. ಬಿಜೆಪಿಗೆ ಮಾತ್ರ ಛತ್ತೀಸ್‌ಗಢದ ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡಿದೆ. ಇಂದು ಇಲ್ಲಿ 7,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ ಎಂದು ಹೇಳಿದ್ದಾರೆ.

ಈ ಜನರು ನನ್ನನ್ನು ಹಿಂಬಾಲಿಸುತ್ತಾರೆ, ನನಗೆ ಸಮಾಧಿ ತೋಡುತ್ತಾರೆ, ನನ್ನ ವಿರುದ್ಧ ಪಿತೂರಿ ಮಾಡುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲ, ಹೆದರುವವನು ಮೋದಿಯಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.ಶುಕ್ರವಾರ ಛತ್ತೀಸ್‌ಗಢಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಸುಮಾರು 7,000 ಕೋಟಿ ರೂಪಾಯಿಗಳ ಬಹು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.


ಅಂತಗಢದಿಂದ (ಕಾಂಕೇರ್ ಜಿಲ್ಲೆ) ರಾಯ್‌ಪುರಕ್ಕೆ ಹೊಸ ರೈಲು ಮತ್ತು ಬಹು ನಾಲ್ಕು-ಪಥದ ರಾಷ್ಟ್ರೀಯ ಹೆದ್ದಾರಿಗಳಿಗೆ ಚಾಲನೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಫಲಾನುಭವಿಗಳಿಗೆ 75 ಲಕ್ಷ ಕಾರ್ಡ್‌ಗಳ ವಿತರಣೆಯನ್ನು ಮೋದಿ ಮಾಡಿದ್ದಾರೆ.

ಇದನ್ನೂ ಓದಿ: Uttarakhand Cloudburst: ಉತ್ತರಾಖಂಡದಲ್ಲಿ ಮೇಘಸ್ಫೋಟ, 200ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ

ಈ ಕಾರ್ಯಕ್ರಮದ ನಂತರ ಪ್ರಧಾನಿ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಗೀತಾ ಪ್ರೆಸ್‌ನ ಶತಮಾನೋತ್ಸವ ಆಚರಣೆಗೆ ತೆರಳಲಿದ್ದಾರೆ. ಗೋರಖ್‌ಪುರದಲ್ಲಿ ಗೀತಾ ಪ್ರೆಸ್‌ನ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಜೊತೆಗೆ, ಪ್ರಧಾನಿ ಮೋದಿ ಉತ್ತರ ಪ್ರದೇಶದಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us