Manipur Violence: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್​​ನಲ್ಲಿ ಹಿಂಸಾಚಾರ, 4 ಸಾವು

|

Updated on: Sep 07, 2024 | 12:57 PM

17 ತಿಂಗಳ ಹಿಂದೆ ಸಂಘರ್ಷ ಭುಗಿಲೆದ್ದ ನಂತರ ಶುಕ್ರವಾರದ ದಾಳಿಯು ರಾಜ್ಯದಲ್ಲಿ ರಾಕೆಟ್‌ಗಳ ಮೊದಲ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಕಿ ಉಗ್ರಗಾಮಿಗಳು "ಲಾಂಗ್ ರೇಂಜ್ ರಾಕೆಟ್‌ಗಳನ್ನು" ಬಳಸಿದ್ದಾರೆ ಎಂದು ಮಣಿಪುರ ಪೊಲೀಸರು ಹೇಳಿಕೆ ನೀಡಿದ್ದಾರೆ. ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಮಣಿಪುರ ಆಡಳಿತವು ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಶನಿವಾರ ಮುಚ್ಚುವಂತೆ ಆದೇಶಿಸಿದೆ.

Manipur Violence: ರಾಕೆಟ್ ದಾಳಿಯ ನಂತರ ಮಣಿಪುರದ ಜಿರಿಬಾಮ್​​ನಲ್ಲಿ  ಹಿಂಸಾಚಾರ, 4 ಸಾವು
ಮಣಿಪುರ ಹಿಂಸಾಚಾರ
Follow us on

ಜಿರಿಬಾಮ್ ಸೆಪ್ಟೆಂಬರ್ 07: ಮಣಿಪುರದ (Manipur) ಜಿರಿಬಾಮ್ (Jiribam) ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಮಣಿಪುರದ ಉಗ್ರಗಾಮಿಗಳು ಬಿಷ್ಣುಪುರದ ಎರಡು ಸ್ಥಳಗಳಲ್ಲಿ ನಡೆಸಿದ ರಾಕೆಟ್‌ ದಾಳಿಯಿಂದ ಹಿರಿಯ ನಾಗರಿಕರೊಬ್ಬರು ಸಾವಿಗೀಡಾಗಿದ್ದು, ಐವರಿಗೆ ಗಾಯಗಳಾಗಿತ್ತು. ಇದರ ಬೆನ್ನಲ್ಲೇ ಈ ಹಿಂಸಾಚಾರ ನಡೆದಿದೆ. ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ವರದಿಯಾದ ಹಿಂಸಾಚಾರದಲ್ಲಿ  ನಾಲ್ವರು ಉಗ್ರರು ಮತ್ತು ಒಬ್ಬ ನಾಗರಿಕ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಾಗರಿಕನನ್ನು ಅವನ ಮನೆಯೊಳಗೆ ಕೊಲ್ಲಲಾಯಿತು . ನಂತರ ನಡೆದ ಇದು ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಮಣಿಪುರದಲ್ಲಿ ನಿಯೋಜಿಸಲಾದ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಸಾವುನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. “ಬೆಳಿಗ್ಗೆ ಉಗ್ರರು ಗ್ರಾಮಕ್ಕೆ ನುಗ್ಗಿ ಒಬ್ಬ ವ್ಯಕ್ತಿಯನ್ನು ಕೊಂದ ನಂತರ ಗುಂಡಿನ ಚಕಮಕಿ ಪ್ರಾರಂಭವಾಯಿತು. ಈ ಹತ್ಯೆಯು ಜನಾಂಗೀಯ ಘರ್ಷಣೆಯ ಭಾಗವಾಗಿತ್ತು. ಗುಂಡಿನ ಚಕಮಕಿ ನಡೆಯುತ್ತಿದೆ. ಸಾವಿಗೀಡಾದವರು ಕುಕಿ ಮತ್ತು ಮೈತಿ ಎರಡೂ ಸಮುದಾಯದವರು ಎಂಬ ವರದಿಗಳು ನಮ್ಮ ಬಳಿ ಇವೆ ಎಂದು ಅಧಿಕಾರಿ ಹೇಳಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ನಡೆಯುತ್ತಿದ್ದರೆ, ಇದೀಗ ನಡೆದ ಹಿಂಸಾಚಾರದಿಂದ ಕಳೆದ 5 ದಿನಗಳಲ್ಲಿ ಪರಿಸ್ಥಿತಿಯು ತೀವ್ರ ಉದ್ವಿಗ್ನವಾಗಿದೆ. ಶುಕ್ರವಾರ ರಾತ್ರಿ, ಬಿಷ್ಣುಪುರದಲ್ಲಿ ರಾಕೆಟ್ ದಾಳಿಯ ಕೆಲವೇ ಗಂಟೆಗಳ ನಂತರ, ಇಂಫಾಲ್‌ನಲ್ಲಿ ಗುಂಪುಗಳು 2 ಮಣಿಪುರ ರೈಫಲ್ಸ್ ಮತ್ತು 7 ಮಣಿಪುರ ರೈಫಲ್ಸ್‌ನ ಪ್ರಧಾನ ಕಚೇರಿಯಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲು ಪ್ರಯತ್ನಿಸಿದವು. ಭದ್ರತಾ ಪಡೆಗಳು ಅವರ ಪ್ರಯತ್ನವನ್ನು ವಿಫಲಗೊಳಿಸಿದವು.

ಮಣಿಪುರದಲ್ಲಿ ರಾಕೆಟ್ ದಾಳಿ

17 ತಿಂಗಳ ಹಿಂದೆ ಸಂಘರ್ಷ ಭುಗಿಲೆದ್ದ ನಂತರ ಶುಕ್ರವಾರದ ದಾಳಿಯು ರಾಜ್ಯದಲ್ಲಿ ರಾಕೆಟ್‌ಗಳ ಮೊದಲ ಬಳಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಕಿ ಉಗ್ರಗಾಮಿಗಳು “ಲಾಂಗ್ ರೇಂಜ್ ರಾಕೆಟ್‌ಗಳನ್ನು” ಬಳಸಿದ್ದಾರೆ ಎಂದು ಮಣಿಪುರ ಪೊಲೀಸರು ಹೇಳಿಕೆ ನೀಡಿದ್ದಾರೆ. ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಮಣಿಪುರ ಆಡಳಿತವು ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಶನಿವಾರ ಮುಚ್ಚುವಂತೆ ಆದೇಶಿಸಿದೆ.

ಕಳೆದ ವರ್ಷ ಮೇ 3 ರಿಂದ ಕುಕಿಗಳು ಮತ್ತು ಮೈತಿ ನಡುವಿನ ಜನಾಂಗೀಯ ಘರ್ಷಣೆಯಿಂದ ಹೊತ್ತಿ ಉರಿದ ಮಣಿಪುರದಲ್ಲಿ ಭಾನುವಾರದಿಂದ ಸಂಘರ್ಷ ಉಲ್ಬಣಗೊಂಡಿದೆ. ಉಗ್ರಗಾಮಿಗಳು ಈಗ ದಾಳಿಗೆ ಡ್ರೋನ್ ಮತ್ತು ರಾಕೆಟ್‌ಗಳನ್ನು ಬಳಸುತ್ತಿದ್ದಾರೆ, ರೈಫಲ್ಸ್ ಮತ್ತು ಗ್ರೆನೇಡ್ ದಾಳಿಯೂ ನಡೆಯುತ್ತಿದೆ. ಶುಕ್ರವಾರ ಉಡಾಯಿಸಲಾದ ರಾಕೆಟ್‌ಗಳು ಕನಿಷ್ಠ ನಾಲ್ಕು ಅಡಿ ಉದ್ದವಿದ್ದವು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಡ್ರೋನ್, ರಾಕೆಟ್ ದಾಳಿ; ಮಣಿಪುರದ ಶಾಲೆಗಳಿಗೆ ಇಂದು ರಜೆ

ಸ್ಫೋಟಕಗಳನ್ನು ಜಿಐ ಪೈಪ್‌ನಲ್ಲಿ ತುಂಬಿಸಲಾಗಿದೆ ಎಂದು ತೋರುತ್ತದೆ. ನಂತರ ಸ್ಫೋಟಕಗಳನ್ನು ಹೊಂದಿರುವ ಜಿಐ ಪೈಪ್‌ಗಳನ್ನು ದೇಶ ನಿರ್ಮಿತ ರಾಕೆಟ್ ಲಾಂಚರ್‌ನಲ್ಲಿ ಅಳವಡಿಸಲಾಯಿತು ಮತ್ತು ಏಕಕಾಲದಲ್ಲಿ ಗುಂಡು ಹಾರಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

“ಇದು ಹೆಚ್ಚು ದೂರ ಪ್ರಯಾಣಿಸಲು, ಉಗ್ರಗಾಮಿಗಳು ಸ್ಫೋಟಕಗಳ ಪರಿಮಾಣವನ್ನು ಬದಲಾಯಿಸಬೇಕಾಗುತ್ತದೆ. ಅವರು ವಿರಾಮದ ತಿಂಗಳುಗಳಲ್ಲಿ ಇದನ್ನು ಅಭ್ಯಾಸ ಮಾಡುತ್ತಿದ್ದಾರೆಂದು ತೋರುತ್ತದೆ, ”ಎಂದು ಮತ್ತೊಬ್ಬ ಅಧಿಕಾರಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Sat, 7 September 24