ಮುಂಬೈ ಜುಲೈ 27: ಇಂದು (ಶನಿವಾರ) ಬೆಳಗ್ಗೆ ನವಿ ಮುಂಬೈನ (Navi Mumbai) ಶಹಬಾಜ್ ಗ್ರಾಮದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು (building collapses) ಬಿದ್ದಿದ್ದು, ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ ಎಂದು ನವಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಕೈಲಾಸ್ ಶಿಂಧೆ ತಿಳಿಸಿದ್ದಾರೆ. “ಇದು G+3 ಕಟ್ಟಡ. ಶಹಬಾಜ್ ಗ್ರಾಮವು ಬೇಲಾಪುರ್ ವಾರ್ಡ್ ವ್ಯಾಪ್ತಿಗೆ ಬರುತ್ತದೆ. ಕಟ್ಟಡದಲ್ಲಿ 13 ಫ್ಲಾಟ್‌ಗಳಿದ್ದವು. ಇಬ್ಬರನ್ನು ರಕ್ಷಿಸಲಾಗಿದೆ ಮತ್ತು ಇಬ್ಬರು ಸಿಲುಕಿರುವ ಸಾಧ್ಯತೆಯಿದೆ. ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಸುದ್ದಿಗಾರರೊಂದಗೆ ಮಾತನಾಡಿದ ಶಿಂಧೆ ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಕೈಲಾಸ್ ಶಿಂಧೆ ತಿಳಿಸಿದ್ದಾರೆ.
#WATCH | Maharashtra: Kailas Shinde, Navi Mumbai Municipal Corporation Commissioner says, “The building collapsed around 5 am. It is a G+3 building. Two people have been rescued and two are likely trapped. NDRF team is here, rescue operation is underway…” https://t.co/0EOI2Iemmg pic.twitter.com/By1E4E4LlF
— ANI (@ANI) July 27, 2024
“ಇದು 10 ವರ್ಷಗಳ ಹಳೆಯ ಕಟ್ಟಡ. ತನಿಖೆ ನಡೆಯುತ್ತಿದೆ. ಕಟ್ಟಡದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ನವಿ ಮುಂಬೈ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ದಕ್ಷಿಣ ಮುಂಬೈನಲ್ಲಿ ನಾಲ್ಕು ಅಂತಸ್ತಿನ ವಸತಿ ಕಟ್ಟಡದ ಬಾಲ್ಕನಿಯ ಒಂದು ಭಾಗವು ಕುಸಿದುಬಿದ್ದ ನಂತರ 80 ವರ್ಷದ ಮಹಿಳೆ ಸಾವಿಗೀಡಾದ ಪ್ರಕರಣದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಕಳೆದ ವಾರ ಶನಿವಾರ ಘಟನೆ ನಡೆದ ರುಬಿನ್ನಿಸಾ ಮಂಜಿಲ್ ಗ್ರಾಂಟ್ ರೋಡ್ ರೈಲು ನಿಲ್ದಾಣದ ಬಳಿಯ ಸ್ಲೀಟರ್ ರಸ್ತೆಯಲ್ಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:47 am, Sat, 27 July 24