AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯ, ಚಂದ್ರ ಗ್ರಹಣ ಎಫೆಕ್ಟ್: ಭಕ್ತರಿಗೆ ಎರಡು ದಿನ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲ

ತಿರುಪತಿ ತಿರುಮಲ ದೇವಸ್ಥಾನ ಎರಡು ದಿನಗಳ ಕಾಲ ಬಂದ್​ ಆಗಿರಲಿದೆ. ಆದ್ದರಿಂದ ಭಕ್ತರು ಈ ಎರಡು ದಿನ ತಿರುಪತಿಗೆ ಹೋಗು ಪ್ಲಾನ್ ಮಾಡಿಕೊಳ್ಳಬೇಡಿ.

ಸೂರ್ಯ, ಚಂದ್ರ ಗ್ರಹಣ ಎಫೆಕ್ಟ್:  ಭಕ್ತರಿಗೆ ಎರಡು ದಿನ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲ
Tirupathi
TV9 Web
| Edited By: |

Updated on:Oct 12, 2022 | 3:59 PM

Share

ತಿರುಪತಿ:  ಎರಡು ದಿನ  ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯವೆನಿಸಿದ ತಿರುಪತಿ ತಿರುಮಲ ದೇವಾಲಯದ (Tirumala Temple) ಬಾಗಿಲು ಮುಚ್ಚಲಿದೆ.  ಸೂರ್ಯ ಹಾಗೂ ಚಂದ್ರ ಗ್ರಹಣ ಪರಿಣಾಮ ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಭಕ್ತರಿಗೆ ತಿರುಪತಿ ತಿರುಮಲನ ದರ್ಶನ ಭಾಗ್ಯ ಇರುವುದಿಲ್ಲ.

ಅಕ್ಟೋಬರ್ 25 ಸೂರ್ಯ ಗ್ರಹಣ (solar eclipse) ಮತ್ತು ನವೆಂಬರ್ 8ರಂದು ಚಂದ್ರ ಗ್ರಹಣ ಇರುವುದರಿಂದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಈ ಬಗ್ಗೆ ಟಿಟಿಡಿ ಮಾಹಿತಿ ನೀಡಿದೆ.

Solar Eclipse 2022: ಅ. 25ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ; ಭಾರತದಲ್ಲೂ ಗೋಚರವಾಗುತ್ತಾ?

ಟಿಟಿಡಿ ಪ್ರಕಾರ, . ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ತಿರುಮಲ ದೇವಸ್ಥಾನದಲ್ಲಿ ಹೇಳಿದ ದಿನಗಳಲ್ಲಿ ವಿಐಪಿ, ಶ್ರೀವಾಣಿ, 300 ವಿಶೇಷ ಪ್ರವೇಶ ದರ್ಶನವನ್ನು, ಮತ್ತು ಇತರ ಎಲ್ಲಾ ರೀತಿಯ ಸವಲತ್ತು ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಶುದ್ಧಿ ಮತ್ತು ಪುಣ್ಯಾಹವಾಚನದಂತಹ ಆಚರಣೆಗಳ ನಂತರ ಬೆಟ್ಟದ ದೇವಾಲಯದಲ್ಲಿ ಪೂಜೆ ಪುನರಾರಂಭವಾಗುತ್ತದೆ.

ಕೇವಲ ತಿರುಪತಿ ದೇವಾಲಯ ಮಾತ್ರವಲ್ಲದೆ ದೇಶಾದ್ಯಂತ ತಿರುಮಲ ತಿರುಪತಿ ದೇವಸ್ಥಾನಗಳ ಆಡಳಿತದಲ್ಲಿರುವ ಸುಮಾರು 60 ಇತರ ದೇವಾಲಯಗಳು ಅಕ್ಟೋಬರ್ 25ರಂದು ಸೂರ್ಯ ಗ್ರಹಣ ಮತ್ತು ನವೆಂಬರ್ 8ರಂದು ಬಂದ್​ ಮಾಡಲಾಗುತ್ತದೆ. ಅಲ್ಲದೇ ಸೂರ್ಯ ಮತ್ತು ಚಂದ್ರಗ್ರಹಣದ ಸಮಯದಲ್ಲಿ ನಿತ್ಯ ಅನ್ನದಾನ ಸಂಕೀರ್ಣದಲ್ಲಿ ಯಾವುದೇ ಆಹಾರ ನೀಡಲಾಗುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.

ಸೂರ್ಯಗ್ರಹಣವು ಅಕ್ಟೋಬರ್ 25ರ ಸಂಜೆ 5.11ರಿಂದ 6.27 PMವರೆಗೆ ಇರುತ್ತದೆ. ನವೆಂಬರ್ 8ರಂದು ಚಂದ್ರಗ್ರಹಣವು ಮಧ್ಯಾಹ್ನ 2.39ಕ್ಕೆ ಪ್ರಾರಂಭವಾಗಿ ಅಂದು ಸಂಜೆ 6.19ಕ್ಕೆ ಕೊನೆಗೊಳ್ಳುತ್ತದೆ.

ಹಾಗಾಗಿ ಭಕ್ತರು ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ತಿರುಪತಿಗೆ ಹೋಗುವ ಪ್ಲಾನ್ ಮಾಡಿಕೊಂಡಿದ್ದರೇ   ಮುಂದೂಡಬಹುದು.

Published On - 3:57 pm, Wed, 12 October 22

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?