ತಿರುಪತಿ ತಿಮ್ಮಪ್ಪನಿಗೆ ಗರುಡ ಸೇವೆ: ಶುಕ್ರವಾರ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ

Tirumala Tirupati Garuda Seva ಸೆಪ್ಟೆಂಬರ್ 22 ರಂದು ಶುಕ್ರವಾರ ತಿರುಪತಿ ತಿಮ್ಮಪ್ಪನಿಗೆ ಗರುಡ ಸೇವೆ ನಡೆಯಲಿದ್ದು, ಕನಿಷ್ಠ 3 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ ವಿಧಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ

ತಿರುಪತಿ ತಿಮ್ಮಪ್ಪನಿಗೆ ಗರುಡ ಸೇವೆ: ಶುಕ್ರವಾರ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ
ತಿಮ್ಮಪ್ಪನಿಗೆ ಗರುಡ ಸೇವೆ: ಶುಕ್ರವಾರ ಘಾಟ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ
Follow us
|

Updated on: Sep 21, 2023 | 1:58 PM

ತಿರುಪತಿ, ಸೆಪ್ಟೆಂಬರ್​ 21: ತಿರುಮಲ ವೇಂಕಟೇಶ್ವರನಿಗೆ ಬ್ರಹ್ಮೋತ್ಸವದ (Brahmotsavams) ಸಂದರ್ಭದಲ್ಲಿ ಗರುಡ ಸೇವೆ ನಡೆಯಲಿದ್ದು ತಿರುಮಲ ಘಾಟ್ ರಸ್ತೆಗಳಲ್ಲಿ (Tirumala ghat roads) ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸೆಪ್ಟೆಂಬರ್ 21ರ ಸಂಜೆ 6 ರಿಂದ ಸೆ. 23ರ ಬೆಳಗ್ಗೆ 6ರವರೆಗೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ದ್ವಿಚಕ್ರ ವಾಹನಗಳಲ್ಲಿ ತಿರುಮಲ ತಲುಪುವ ಭಕ್ತರು ತಮ್ಮ ವಾಹನಗಳನ್ನು ಅಲಿಪಿರಿ ಹಳೆಯ ಚೆಕ್ ಪಾಯಿಂಟ್‌ನಲ್ಲಿ (Alipiri old check point) ನಿಲ್ಲಿಸಿ, ಕಾಲ್ನಡಿಗೆಯಲ್ಲಿ ಅಥವಾ ಬಸ್‌ನಲ್ಲಿ ತಿರುಮಲಕ್ಕೆ ತೆರಳಬಹುದು.

ಸೆಪ್ಟೆಂಬರ್ 22 ರಂದು ನಡೆಯಲಿರುವ ಗರುಡ ಸೇವೆಗೆ ಕನಿಷ್ಠ 3 ಲಕ್ಷ ಭಕ್ತರು (Devotees) ಬರುವ ನಿರೀಕ್ಷೆಯಿದೆ. ನಾಲ್ಕು ಗ್ಯಾಲರಿಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 5 ಸಾವಿರ ಭದ್ರತಾ ಸಿಬ್ಬಂದಿ ಮತ್ತು 1,900 ಇತರ ಟಿಟಿಡಿ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ Tirumala Tirupati Devasthanam -TTD) ಅಧಿಕಾರಿಗಳು ತಿಳಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯು (ಟಿಟಿಡಿ) ಸುಮಾರು 2 ಲಕ್ಷ ಭಕ್ತರಿಗೆ ಆಹಾರ ನೀಡಲು ಸಾಕಷ್ಟು ಅಡುಗೆಯವರು ಮತ್ತು ಇತರ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಮತ್ತು ದಿನಕ್ಕೆ ಆರು ಲಕ್ಷ ಲಡ್ಡುಗಳ ಹೆಚ್ಚುವರಿ ಬಫರ್ ಅನ್ನು ರಚಿಸಲಾಗಿದೆ. ಆರೋಗ್ಯ ಇಲಾಖೆಯು ನೈರ್ಮಲ್ಯ ಉದ್ದೇಶಗಳಿಗಾಗಿ ಹೆಚ್ಚುವರಿ ನೌಕರರನ್ನು ನೇಮಿಸಿಕೊಂಡಿದೆ.

ಗರುಡ ವಾಹನದ ಮೆರವಣಿಗೆಯು ಸಂಜೆ 7 ಗಂಟೆಗೆ ಪ್ರಾರಂಭವಾಗಿ ಮಧ್ಯರಾತ್ರಿ 2 ಗಂಟೆಯವರೆಗೆ ನಡೆಯಲಿದೆ. ಈ ವಿಸ್ತರಿತ ಕಾಲಾವಕಾಶದಿಂದಾಗಿ ಯಾತ್ರಾರ್ಥಿಗಳಿಗೆ ಹೆಚ್ಚುವರಿಯಾಗಿ ಗರುಡ ವಾಹನ ದರ್ಶನ ಒದಗಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ