ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ; ವಿವಾದಕ್ಕೀಡಾಯ್ತು ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿಕೆ

| Updated By: ಸುಷ್ಮಾ ಚಕ್ರೆ

Updated on: Aug 19, 2022 | 9:35 AM

ಟಿಎಂಸಿ ಪಕ್ಷದ ಪ್ರಮುಖ ನಾಯಕರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ ನಂತರ ಈ ಕೆಸರೆರಚಾಟ ಹೆಚ್ಚಾಗಿದೆ.

ಟಿಎಂಸಿ ನಾಯಕನಿಗೆ ಶೂನಲ್ಲಿ ಹೊಡೆಯುತ್ತೇವೆ; ವಿವಾದಕ್ಕೀಡಾಯ್ತು ಬಿಜೆಪಿ ನಾಯಕ ದಿಲೀಪ್ ಘೋಷ್ ಹೇಳಿಕೆ
ದಿಲೀಪ್ ಘೋಷ್
Follow us on

ನವದೆಹಲಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ (Dilip Ghosh) ಬಿಜೆಪಿ ಪಕ್ಷದ ವಿರೋಧಿಗಳನ್ನು ಟೀಕಿಸಿ ಭಾಷಣ ಮಾಡಿದ್ದರು. ಅಲ್ಲದೆ, ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ರಾಜಕಾರಣಿ ಸೌಗತ ರಾಯ್ (Sougata Roy) ಬೂಟುಗಳಿಂದ ಹೊಡೆತ ತಿನ್ನಬೇಕಾದೀತು ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ದಿಲೀಪ್ ಘೋಷ್ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸೌಗತ ರಾಯ್, ಬಿಜೆಪಿಯ ನಾಯಕ ದಿಲೀಪ್ ಘೋಷ್​ಗೆ ಔಪಚಾರಿಕ ಶಿಕ್ಷಣ ಸಿಗಲಿಲ್ಲ. ಬಿಜೆಪಿ ಪಕ್ಷದ ಬೆಂಬಲವನ್ನು ಕಳೆದುಕೊಂಡ ನಂತರ ಅವರು ಟಿಎಂಸಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಚುನಾವಣೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ದಿಲೀಪ್ ಘೋಷ್ ಬಿಜೆಪಿ ಬಿಟ್ಟು ಟಿಎಂಸಿ ಸೇರಲು ಪ್ಲಾನ್ ಮಾಡಿದ್ದಾರೆ ಎಂದು ಹೊಸ ಬಾಂಬ್ ಹಾಕಿದ್ದಾರೆ.

ಇಬ್ಬರು ಟಿಎಂಸಿ ನಾಯಕರನ್ನು ಬಂಧಿಸಿದ ನಂತರ, ಸೌಗತ ರಾಯ್ ಪ್ರತಿಭಟನೆಯ ನೆಪದಲ್ಲಿ “ಟಿಎಂಸಿ ಪಕ್ಷವನ್ನು ಕೆಡಿಸುವ ಮೂಲಕ ತಪ್ಪಿಸಿಕೊಳ್ಳಬಹುದು ಎಂದುಕೊಂಡಿರುವವರ ಚರ್ಮವನ್ನು ಸುಲಿದು ಶೂಗಳನ್ನು ತಯಾರಿಸಲಾಗುವುದು” ಎಂದು ಹೇಳಿದ್ದರು. ವಿರೋಧ ಪಕ್ಷವಾದ ಬಿಜೆಪಿ ವಿರುದ್ಧ ಹರಿಹಾಯ್ದಿದ್ದ ಅವರು ಕೊನೆಗೆ ತಾವೇ ಅದರ ಪರಿಣಾಮವನ್ನು ಅನುಭವಿಸಬೇಕಾಯಿತು.

ಇದನ್ನೂ ಓದಿ: Viral Video: ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಟಿಎಂಸಿ ನಾಯಕನ ಬಂಧನ; ಕಳ್ಳ ಕಳ್ಳ ಎಂದು ಕೂಗಿದ ಜನರು

ಸೌಗತ ರಾಯ್ ಒಬ್ಬ ಹಿರಿಯ ರಾಜಕಾರಣಿ, ಅವರು ಒಂದು ಕಾಲದಲ್ಲಿ ಪ್ರಾಧ್ಯಾಪಕರಾಗಿದ್ದರು. ಆದರೆ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವಾಗ ಬಳಸಿದ ಭಾಷೆಯನ್ನು ಕೇಳಿ ನಾವು ದಿಗ್ಭ್ರಮೆಗೊಂಡಿದ್ದೇವೆ. ತಮ್ಮ ವಿರೋಧಿಗಳ ಚರ್ಮವನ್ನು ಸುಲಿದು ಶೂಗಳನ್ನು ಮಾಡುವುದಾಗಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದಾರೆ. ಆದರೆ, ಜನರು ಸೌಗತ್ ರಾಯ್ ಅವರನ್ನು ಬೂಟಿನಿಂದ ಹೊಡೆಯುವ ದಿನ ದೂರವಿಲ್ಲ. ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಟಿಎಂಸಿ ನಾಯಕರನ್ನು ಶೂಗಳಿಂದ ಥಳಿಸಲಾಗುವುದು ಎಂದು ದಿಲೀಪ್ ಘೋಷ್ ಹೇಳಿದ್ದರು.

ಆದರೆ, ಬಿಜೆಪಿ ನಾಯಕ ದಿಲೀಪ್ ಘೋಷ್ ಮಾಡಿದ ಕಾಮೆಂಟ್‌ಗಳ ಬಗ್ಗೆ ಸೌಗತ್ ರಾಯ್ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರದ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದರ ಕುರಿತು ಪ್ರತಿಕ್ರಿಯಿಸುವುದು ನನ್ನ ಘನತೆಗೆ ತಕ್ಕ ವಿಚಾರವಲ್ಲ. ದಿಲೀಪ್ ಘೋಷ್ ಅವರಿಗೆ ಬಿಜೆಪಿ ನಾಯಕತ್ವದ ಬಗ್ಗೆ ವಿಶ್ವಾಸವಿಲ್ಲದ ಕಾರಣದಿಂದಾಗಿಯೇ ಅವರು ನಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಆಡಿಯೋ ವೈರಲ್ ಪ್ರಕರಣ: ಚಿಕ್ಕಮಗಳೂರು ಯುವ ಮೋರ್ಚಾ ಜಿಲ್ಲಾಧ್ಯಕ್ಷರಿಗೆ ಕೊಕ್ ನೀಡಿದ ಬಿಜೆಪಿ

ಟಿಎಂಸಿ ಪಕ್ಷದ ಪ್ರಮುಖ ನಾಯಕರಾದ ಪಾರ್ಥ ಚಟರ್ಜಿ ಮತ್ತು ಅನುಬ್ರತಾ ಮೊಂಡಲ್ ಅವರನ್ನು ಬಂಧಿಸಿದ ನಂತರ ಈ ಕೆಸರೆರಚಾಟ ಹೆಚ್ಚಾಗಿದೆ. ಶಾಲಾ ನೇಮಕಾತಿ ವಂಚನೆಯಲ್ಲಿನ ಅಕ್ರಮಕ್ಕಾಗಿ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು. ದನ ಕಳ್ಳಸಾಗಣೆ ಜಾಲದ ತನಿಖೆಯಲ್ಲಿ ಸಹಾಯ ಮಾಡಲು ನಿರಾಕರಿಸಿದ ಆರೋಪದಲ್ಲಿ ಅನುಬ್ರತಾ ಮೊಂಡಲ್ ಅವರನ್ನು ಸಿಬಿಐ ಬಂಧಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ