ಈಗಿನ ಸರ್ಕಾರವು ಇತಿಹಾಸವನ್ನು ಬದಲಾಯಿಸಲು ಬಯಸುತ್ತದೆ, ಭವಿಷ್ಯದ ಬಗ್ಗೆ ಭಯಪಡುತ್ತಿದೆ: ಮಹುವಾ ಮೊಯಿತ್ರಾ

Mahua Moitra ನೀವು ಭವಿಷ್ಯದ ಭಾರತವನ್ನು ಭಯಪಡುತ್ತೀರಿ ಅದು ತನ್ನದೇ ಆದ ರೀತಿಯಲ್ಲಿ ಆರಾಮವಾಗಿದೆ. ಇದು ಸಂಘರ್ಷದ ವಾಸ್ತವಗಳೊಂದಿಗೆ ಆರಾಮವಾಗಿದೆ. ನೀವು ಕೇವಲ ನಮ್ಮ ಮತದಿಂದ ತೃಪ್ತರಾಗುವುದಿಲ್ಲ, ನೀವು ನಮ್ಮ ತಲೆಯೊಳಗೆ, ನಮ್ಮ ಮನೆಯೊಳಗೆ ನುಗ್ಗಿ ಏನು ತಿನ್ನಬೇಕೆಂದು ನಮಗೆ ಹೇಳಲು ಬಯಸುತ್ತೀರಿ

ಈಗಿನ ಸರ್ಕಾರವು ಇತಿಹಾಸವನ್ನು ಬದಲಾಯಿಸಲು ಬಯಸುತ್ತದೆ, ಭವಿಷ್ಯದ ಬಗ್ಗೆ ಭಯಪಡುತ್ತಿದೆ: ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ
TV9kannada Web Team

| Edited By: Rashmi Kallakatta

Feb 03, 2022 | 8:29 PM

ದೆಹಲಿ: ಲೋಕಸಭೆಯಲ್ಲಿ(Loksabha) ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರು ಗುರುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಸ್ತುತ ಸರ್ಕಾರವು ಇತಿಹಾಸವನ್ನು ಬದಲಾಯಿಸಲು ಬಯಸುತ್ತದೆ. ಅವರು ಭವಿಷ್ಯದ ಬಗ್ಗೆ ಭಯಪಡುತ್ತಾರೆ. ಅವರಿಗೆ ವರ್ತಮಾನದ ಬಗ್ಗೆ ಅಪನಂಬಿಕೆ ಇದೆ ಎಂದು ಮಹುವಾ ಹೇಳಿದ್ದಾರೆ. ನೀವು ಭವಿಷ್ಯದ ಭಾರತವನ್ನು ಭಯಪಡುತ್ತೀರಿ ಅದು ತನ್ನದೇ ಆದ ರೀತಿಯಲ್ಲಿ ಆರಾಮವಾಗಿದೆ. ಇದು ಸಂಘರ್ಷದ ವಾಸ್ತವಗಳೊಂದಿಗೆ ಆರಾಮವಾಗಿದೆ. ನೀವು ಕೇವಲ ನಮ್ಮ ಮತದಿಂದ ತೃಪ್ತರಾಗುವುದಿಲ್ಲ, ನೀವು ನಮ್ಮ ತಲೆಯೊಳಗೆ, ನಮ್ಮ ಮನೆಯೊಳಗೆ ನುಗ್ಗಿ ಏನು ತಿನ್ನಬೇಕೆಂದು ನಮಗೆ ಹೇಳಲು ಬಯಸುತ್ತೀರಿ. ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಎಂದು ಹೇಳುತ್ತೀರಿ. ಆದರೆ ನಿನ್ನ ಭಯ ಮಾತ್ರ ಭವಿಷ್ಯವನ್ನು ದೂರದಲ್ಲಿಡಲು ಸಾಧ್ಯವಿಲ್ಲ ಎಂದು ಮೊಯಿತ್ರಾ ಹೇಳಿದ್ದಾರೆ. ಬುಧವಾರ ರಾಜ್ಯಸಭೆಯು “ದೀರ್ಘ ಸಮಯದ ನಂತರ ಅಡ್ಡಿ-ಮುಕ್ತ ಕಲಾಪಗಳಿಗೆ” ಸಾಕ್ಷಿಯಾಯಿತು ಎಂದು ಸಭಾಪತಿ ವೆಂಕಯ್ಯ ನಾಯ್ಡು ಗುರುವಾರ ಹೇಳಿದ್ದಾರೆ. “ಈ ಸ್ಥಿತಿ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಸದನದಲ್ಲಿ ನಡೆದ ಚರ್ಚೆಯ ವೇಳೆ ತಮ್ಮ ಹೇಳಿಕೆಗಳ ಮೂಲಕ ಸಂಸದರು ಮತ್ತು ರಾಷ್ಟ್ರವನ್ನು “ಪ್ರಚೋದನೆ” ಮಾಡಲು ಯತ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯ ಸೆಕ್ರೆಟರಿಯೇಟ್‌ಗೆ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕೃಷಿ ಕಾನೂನುಗಳ ಬಗ್ಗೆ ಸರ್ಕಾರವನ್ನು ಟೀಕಿಸಿದ ಮಹುವಾ ಕೇಂದ್ರ ಅಂತಿಮವಾಗಿ ಕೃಷಿ ಬಿಲ್‌ಗಳನ್ನು ವಾಪಸ್ ಪಡೆದಿದ್ದು ಯುಪಿಯಲ್ಲಿ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಎಂದು ಹೇಳಿದ್ದಾರೆ. ಮಹುವಾ ರೋಜರ್ ಎಫ್ ಕೆನಡಿಯನ್ನು ಮಾತುಗಳನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಇತಿಹಾಸವನ್ನು ಅದರ ಟ್ರಾಕ್​​ಗಳಲ್ಲಿ ನಿಲ್ಲಿಸಲು ಬಯಸುವ ಜನರು ವರ್ತಮಾನವನ್ನು ನಂಬುವುದಿಲ್ಲ ಎಂದಿದ್ದಾರೆ. ಈ ಸರ್ಕಾರವು ಮತದಾನದ ಹಕ್ಕಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವ ಕಾಯಿದೆಯನ್ನು ತಂದಾಗ ಈ ಸರ್ಕಾರವು ನಮ್ಮ ಗಣರಾಜ್ಯದ ಆತ್ಮವನ್ನು ನಂಬುವುದಿಲ್ಲ. ಏಕೆಂದರೆ ನೀವು ನಿಜವಾದ ಮತದಾರರನ್ನು ಅಮಾನ್ಯಗೊಳಿಸಲು ಅಗಾಧವಾದ ಸಾಧ್ಯತೆಗಳನ್ನು ಸೃಷ್ಟಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

“ನಾವು ಯಾವ ರೀತಿಯ ಗಣರಾಜ್ಯವನ್ನು ಬಯಸುತ್ತೇವೆ, ಇಂದು ನಾವು ಬಯಸುತ್ತಿರುವ ಭಾರತ ಯಾವುದು, ನಾವು ಭಾರತಕ್ಕಾಗಿ ನಿಲ್ಲಲು, ಹೋರಾಡಲು, ಜೈಲು ಶಿಕ್ಷೆಗೆ ಒಳಗಾಗಲು ಬಯಸುವ ಭಾರತದ ಕಲ್ಪನೆ ಯಾವುದು? ನಮ್ಮದು ಜೀವಂತ ಸಂವಿಧಾನ. ಅದು ಉಸಿರಾಡುತ್ತದೆ. ನಾವು ಅದರಲ್ಲಿ ಜೀವವನ್ನು ಉಸಿರಾಡಲು ಇಷ್ಟಪಡುವವರೆಗೆ ಅದು ಇರುತ್ತದೆ ಇಲ್ಲದಿದ್ದರೆ ಅದು ಕೇವಲ ಕಾಗದದ ತುಂಡು ಎಂದು ಹೇಳಿದ್ದಾರೆ.

ನಮ್ಮ ಗಣರಾಜ್ಯದ ಯಜಮಾನರು ವರ್ತಮಾನದ ಬಗ್ಗೆ ಅಪನಂಬಿಕೆ ತೋರುವ ರೀತಿಯನ್ನು ಪೆಗಾಸಸ್ ವಿವಾದದಿಂದ ಸ್ಪಷ್ಟವಾಗಿ  ತಿಳಿಯುತ್ತದೆ ಎಂದು ಮಹುವಾ ಮೊಯಿತ್ರಾ ಹೇಳುತ್ತಾರೆ. ಸರ್ಕಾರವು ತನ್ನ ಸ್ವಂತ ನಾಗರಿಕರ ಮೇಲೆ ಕಣ್ಣಿಡಲು ಸಾಫ್ಟ್ ವೇರ್ ಖರೀದಿಸಲು ತೆರಿಗೆದಾರರ ಹಣವನ್ನು ಖರ್ಚು ಮಾಡಿದೆ ಎಂಬ ಆರೋಪ ಸರ್ಕಾರದ ಮೇಲಿದೆ ಎಂದಿದ್ದಾರೆ ಮಹುವಾ.

ಲೋಕಸಭೆಯ ಭಾಷಣದ ನಂತರ ಟ್ವೀಟ್ ಮಾಡಿದ ಸಂಸದೆ “ಅದೆಂಥಾ ಭಯ, ಎಂಥಾ ನಾಚಿಕೆಗೇಡು. ನನ್ನ ಭಾಷಣ ಮುಗಿಸಲು ಪ್ಯಾರಾಗ್ರಾಫ್ ಮಾತ್ರ ಉಳಿದಿತ್ತು, ನನ್ನ ನಿಗದಿತ 13 ನಿಮಿಷಗಳ ಸಮಯ ಮುಗಿದಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಕ್ರಿಯಿಸಿ ಇತಿಹಾಸದ ಪಾಠ ಹೇಳಿದ ವಿದೇಶಾಂಗ ಸಚಿವ ಎಸ್ ಜೈಶಂಕರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada