Watch ಉತ್ತರ ಪ್ರದೇಶ: ಬಿಜೆಪಿ ಶಾಸಕ, ನಗರ ಪಾಲಿಕೆ ಅಧ್ಯಕ್ಷರಿಗೆ ಕೆಸರು ಸ್ನಾನ ಮಾಡಿಸಿ ಮಳೆಗಾಗಿ ಪ್ರಾರ್ಥಿಸಿದ ಮಹಿಳೆಯರು
ಆ ಪ್ರದೇಶದ ಮುಖ್ಯಸ್ಥರಿಗೆ ಕೆಸರಿನಲ್ಲಿ ಸ್ನಾನ ಮಾಡಿಸಿದರೆ ಮಳೆ ದೇವರು ವರುಣ ಪ್ರಸನ್ನನಾಗಿ ಆ ಊರಿಗೆ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿದೆ. ಮಹಾರಾಜ್ಗಂಜ್ ಜಿಲ್ಲೆಯ ಪಿಪಾರ್ದೆವುರಾದಲ್ಲಿನ ಮಹಿಳೆಯರು ಬಿಜೆಪಿ ಶಾಸಕ...
ಗೋರಖ್ಪುರ್ :ಉತ್ತರ ಪ್ರದೇಶದ (Uttar Pradesh) ಮಹಾರಾಜ್ಗಂಜ್ (Maharajganj )ಜಿಲ್ಲೆಯಲ್ಲಿ ಮಹಿಳೆಯರ ಗುಂಪೊಂದು ಸ್ಥಳೀಯ ಶಾಸಕ ಮತ್ತು ನಗರ ಪಾಲಿಕೆ ಅಧ್ಯಕ್ಷರ ಮೇಲೆ ಕೆಸರು ಸುರಿದು ಮಳೆಗಾಗಿ ಇಂದ್ರನಲ್ಲಿ ಪ್ರಾರ್ಥಿಸಿದೆ. ಆ ಪ್ರದೇಶದ ಮುಖ್ಯಸ್ಥರಿಗೆ ಕೆಸರಿನಲ್ಲಿ ಸ್ನಾನ (Mud Bath) ಮಾಡಿಸಿದರೆ ಮಳೆ ದೇವರು ಪ್ರಸನ್ನನಾಗಿ ಆ ಊರಿಗೆ ಮಳೆ ಬರುತ್ತದೆ ಎಂಬ ನಂಬಿಕೆ ಇಲ್ಲಿದೆ. ಮಹಾರಾಜ್ಗಂಜ್ ಜಿಲ್ಲೆಯ ಪಿಪಾರ್ದೆವುರಾದಲ್ಲಿನ ಮಹಿಳೆಯರು ಬಿಜೆಪಿ ಶಾಸಕ ಜೈಮಂಗಲ್ ಕನೊಜಿಯಾ ಮತ್ತು ನಗರ ಪಾಲಿಕೆ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾನ್ ಅವರಿಗೆ ಕೆಸರು ಸ್ನಾನ ಮಾಡಿಸುವಾಗ ಹಾಡುಗಳನ್ನು ಹಾಡಿದ್ದಾರೆ. ನಗರದ ಮುಖ್ಯಸ್ಥರಿಗೆ ಕೆಸರು ಸ್ನಾನ ಮಾಡಿಸಿದರೆ ಇಂದ್ರದೇವ ಪ್ರಸನ್ನನಾಗುತ್ತಾನೆ. ಮಳೆಯಿಲ್ಲದೆ ಇಲ್ಲಿನ ಭತ್ತದ ಗದ್ದೆಗಳು ಹಾಳಾಗಿವೆ ಎಂದು ಮುನ್ನೀದೇವಿ ಎಂಬ ಮಹಿಳೆ ಹೇಳಿದ್ದಾರೆ. ಇಂದ್ರದೇವನನ್ನು ಒಲಿಸಲು ಮಕ್ಕಳಿಗೂ ಕೆಸರು ಸ್ನಾನ ಮಾಡಿಸಲಾಗುತ್ತದೆ. ಇದನ್ನು ಇಲ್ಲಿ ಕಲ್ ಕಲೌತಿ ಎಂದು ಕರೆಯಲಾಗುತ್ತದೆ.
ಕೆಸರು ಸ್ನಾನ ಹಳೇ ಸಂಪ್ರದಾಯ: ಬಿಜೆಪಿ ಶಾಸಕ
ಮಳೆಗಾಗಿ ಕೆಸರು ಸ್ನಾನ ಮಾಡಲು ಶಾಸಕ ಕನೊಜಿಯಾ ಮತ್ತು ನಗರ ಪಾಲಿಕೆ ಮುಖ್ಯಸ್ಥ ಜೈಸ್ವಾಲ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಬಿರಿ ಬಿಸಿಲಿನಿಂದಾಗಿ ಇಲ್ಲಿನ ಜನ ಹೈರಾಣಾಗಿದ್ದಾರೆ. ಇಂದ್ರ ದೇವನನ್ನು ಪ್ರಸನ್ನನಾಗಿಸುವುದಕ್ಕೆ ಕೆಸರು ಸ್ನಾನ ಮಾಡಿಸುವುದು ಹಳೇ ಸಂಪ್ರದಾಯ. ಮಳೆಗಾಗಿ ಪ್ರಾರ್ಥಿಸಿದ ಮಹಿಳೆಯರು ನನಗೆ ಕೆಸರು ಸ್ನಾನ ನೀಡಿದರು ಎಂದು ಕನೋಜಿಯ ಹೇಳಿದ್ದಾರೆ. ಬರದಿಂತಿರುವ ಪರಿಸ್ಥಿತಿ ಇಲ್ಲಿದೆ. ಮಳೆ ದೇವರನ್ನು ಪ್ರಾರ್ಥಿಸಲು ಮಹಿಳೆಯರು ಮಾತ್ರ ಈ ಹಳೇ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ ಎಂದು ಜೈಸ್ವಾನ್ ಹೇಳಿದ್ದಾರೆ.
Published On - 2:49 pm, Thu, 14 July 22