Lulu Mall: ಲುಲು ಮಾಲ್ನೊಳಗೆ ನಮಾಜ್ ಮಾಡಿದ ವಿಡಿಯೋ ವೈರಲ್; ಹಿಂದೂ ಸಂಘಟನೆಗಳ ಆಕ್ಷೇಪ
ಲುಲು ಮಾಲ್ನೊಳಗೆ ಕೆಲವರು ನೆಲದ ಮೇಲೆ ಕುಳಿತು ನಮಾಜ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಾಲ್‌ನಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹೇಗೆ ಅನುಮತಿ ನೀಡಲಾಗಿದೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಉದ್ಘಾಟನೆಯಾಗಿರುವ ಲುಲು ಮಾಲ್ (Lulu Mall) ನೋಡಲು ರಾತ್ರಿಯಿಡೀ ಜನರು ಕ್ಯೂ ನಿಂತ ವಿಡಿಯೋಗಳು ಈಗ ಭಾರೀ ವೈರಲ್ (Viral Video) ಆಗಿವೆ. ಈ ಮಾಲ್ ಲಕ್ನೋದ ಅತಿದೊಡ್ಡ ಮಾಲ್ ಎಂಬ ಖ್ಯಾತಿ ಪಡೆದಿದೆ. ಇದರ ನಡುವೆ ಈ ಲುಲು ಮಾಲ್ ಈಗ ಹೊಸ ವಿವಾದಕ್ಕೆ ಒಳಗಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಲುಲು ಮಾಲ್ ಒಳಗೆ ಕೆಲವರು ನಮಾಜ್ (Namaz) ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಇದಕ್ಕೆ ಹಿಂದೂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಲುಲು ಮಾಲ್ನೊಳಗೆ ಕೆಲವರು ನೆಲದ ಮೇಲೆ ಕುಳಿತು ನಮಾಜ್ ಮಾಡುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಮಾಲ್‌ನಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹೇಗೆ ಅನುಮತಿ ನೀಡಲಾಗಿದೆ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹಿಂದೂ ಸಂಘಟನೆಗಳು ಕೂಡ ಈ ನಮಾಜ್ಗೆ ಆಕ್ಷೇಪ ವ್ಯಕ್ತಪಡಿಸಿವೆ. ಹಿಂದೂ ಮಹಾಸಭಾ ಪ್ರಕಾರ, ಲುಲು ಮಾಲ್ ಈ ಹಿಂದೆಯೂ ಇಂತಹ ವಿವಾದಗಳ ಮೂಲಕ ಚರ್ಚೆಗೊಳಗಾಗಿತ್ತು.
ಹಿಂದೂ ಮಹಾಸಭಾದ ಮುಖಂಡ ಶಿಶಿರ್ ಚತುರ್ವೇದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಲುಲು ಮಾಲ್ ಈಗ ತನ್ನ ನಿಜಬಣ್ಣವನ್ನು ತೋರಿಸುತ್ತಿದೆ. ಈ ಮಾಲ್ ಈಗಾಗಲೇ ಇದೇ ರೀತಿಯ ಕಾರಣಗಳಿಂದ ಸುದ್ದಿಯಲ್ಲಿದೆ. ಈಗ ಉತ್ತರ ಪ್ರದೇಶದಲ್ಲೂ ಅದೇ ರೀತಿ ಮಾಡುತ್ತಿದೆ” ಎಂದು ಹೇಳಿದ್ದಾರೆ. ಮಸೀದಿಯಾಗಿ ಬಳಕೆಯಾಗುತ್ತಿರುವ ಪ್ರತಿಯೊಂದು ಮಾಲ್ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂ ಮಹಾಸಭಾ ಆಗ್ರಹಿಸಿದೆ.
ಇದನ್ನೂ ಓದಿ: ಮಾಲ್ಗಳು ಗ್ರಾಹಕರಿಂದ ಪಾರ್ಕಿಂಗ್ ಶುಲ್ಕ ಪಡೆಯುವಂತಿಲ್ಲ; ಲುಲು ಮಾಲ್ ಕೇಸ್ನಲ್ಲಿ ಕೇರಳ ಹೈಕೋರ್ಟ್ ಅಭಿಮತ
ಮಾಲ್ನೊಳಗೆ ನಮಾಜ್ ಮಾಡಿರುವುದಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿ ಎಲ್ಲಾ ಹಿಂದೂಗಳು ಲುಲು ಮಾಲ್ ಅನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿದೆ. ಈ ವೈರಲ್ ವಿಡಿಯೋ ಕುರಿತು ಲುಲು ಮಾಲ್ ವಿರುದ್ಧ ಹಿಂದೂ ಸಂಘಟನೆಯು ಲಕ್ನೋ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದೆ.
Namaz inside Lulu Mall, Lucknow …. even malls are not spared now ? pic.twitter.com/lES84Sqhuy
— Vikas (@VikasPronamo) July 13, 2022
ಈ ವಿವಾದದ ಕುರಿತು ಲುಲು ಮಾಲ್ ಸ್ಪಷ್ಟನೆ ನೀಡಿದೆ. ಈ ವಿಡಿಯೋದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದೆ. ಮಾಲ್ನೊಳಗೆ ನಮಾಜ್ ಮಾಡಿದವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಮಾಲ್ ಒಳಗೆ ನಾವು ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Viral Video: ಕೇರಳದ ಲುಲು ಮಾಲ್‌ನಲ್ಲಿ ಖರೀದಿಗಾಗಿ ಮಧ್ಯರಾತ್ರಿಯಲ್ಲಿ ಹರಿದು ಬಂದ ಜನಸಾಗರ
22 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿ ಹರಡಿರುವ ಈ ಲುಲು ಮಾಲ್ ಅನ್ನು ಜುಲೈ 11ರಿಂದ ಸಾರ್ವಜನಿಕರಿಗೆ ತೆರೆಯಲಾಗಿದೆ. ಗಾಲ್ಫ್ ಸಿಟಿಯ ಅಮರ್ ಶಹೀದ್ ಪಥ್‌ನಲ್ಲಿರುವ ಈ ಮಾಲ್ ಲುಲು ಸೂಪರ್ ಮಾರ್ಕೆಟ್, ಲುಲು ಫ್ಯಾಶನ್ ಸ್ಟೋರ್ ಮತ್ತು ಲುಲು ಕನೆಕ್ಟ್ ಸೇರಿದಂತೆ ದೇಶದ ಕೆಲವು ದೊಡ್ಡ ಬ್ರ್ಯಾಂಡ್‌ಗಳನ್ನು ಹೊಂದಿದೆ.
ಲಕ್ನೋ ಮಾಲ್ 15 ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳನ್ನು ಹೊಂದಿದೆ. ಜೊತೆಗೆ 25 ಬ್ರಾಂಡ್ ಔಟ್‌ಲೆಟ್‌ಗಳೊಂದಿಗೆ ಫುಡ್ ಕೋರ್ಟ್ ಮತ್ತು 1,600 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ಆಭರಣಗಳು, ಫ್ಯಾಷನ್ ಮತ್ತು ಪ್ರೀಮಿಯಂ ವಾಚ್ ಬ್ರ್ಯಾಂಡ್‌ಗಳೊಂದಿಗೆ ಮೀಸಲಾದ ಮದುವೆಯ ಶಾಪಿಂಗ್ ಕಲೆಕ್ಷನ್ ಅನ್ನು ಹೊಂದಿದೆ. ಈಗಾಗಲೇ ಕೊಚ್ಚಿ, ತ್ರಿಶೂರ್, ಬೆಂಗಳೂರು ಮತ್ತು ತಿರುವನಂತಪುರಂನಲ್ಲಿ ಮಾಲ್‌ಗಳನ್ನು ಸ್ಥಾಪಿಸಲಾಗಿದೆ.