ಯುದ್ಧ ಮಾಡದೆಯೇ ಗೆಲ್ಲಲು ಚೀನಾ ಬಯಸುತ್ತಿದೆ, ಇದು ಜಗತ್ತಿಗೆ ಒಳ್ಳೆಯ ಸಂದೇಶವಲ್ಲ ಎಂದು ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ ಅಬಾಟ್(Tony Abbott) ಹೇಳಿದ್ದಾರೆ. ಟಿವಿ9 ನೆಟ್ವರ್ಕ್ ಆಯೋಜಿಸಿರುವ ಮೂರು ದಿನಗಳ ಜಾಗತಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯಾವುದೇ ದೇಶವನ್ನು ಗೆಲ್ಲಬೇಕಾದರೆ ಅಥವಾ ಪ್ರದೇಶವನ್ನು ಗೆಲ್ಲಬೇಕಿದ್ದರೆ ಯುದ್ಧ ಮಾಡಲೇಬೇಕು, ಹಿಂಬಾಗಿಲಿನಿಂದ ಗೆದ್ದರೆ ಅದು ಹೇಡಿತನವೆನಿಸಿಕೊಳ್ಳುತ್ತದೆ ಎಂದು ಟಿವಿ9ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಾಗೆಯೇ ಪ್ರಧಾನಿ ಮೋದಿಯನ್ನು ಹೊಗಳಿರುವ ಟೋನಿ ಮೋದಿ ನಿಜವಾದ ದೇಶಭಕ್ತ ಅವರು ಭಾರತವನ್ನು ಬಲಿಷ್ಠಗೊಳಿಸುತ್ತಿದ್ದಾರೆ, ಅವರ ನಾಯಕತ್ವವು ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ, ಅವರು ಸಾಮಾನ್ಯ ನಾಯಕರಲ್ಲ ಅಸಾಮಾನ್ಯ ಎಂದು ಹೇಳಿದರು.
ಭಾರತವು ಏಷ್ಯಾದ ಸೂಪರ್ ಪವರ್
ಭಾರತವು ಏಷ್ಯಾದ ಸೂಪರ್ ಪವರ್ ಆಗಿದ್ದು, ವಿಶ್ವದಲ್ಲಿಯೂ ಅದರ ಶಕ್ತಿ ಹೆಚ್ಚುತ್ತಿದೆ, ಭಾರತ ಈಗಾಗಲೇ ದೊಡ್ಡ ಸಾಧನೆಗಳನ್ನು ಮಾಡಿದ ದೇಶವಾಗಿದೆ, ಇದು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದರು. ನ್ಯೂಜಿಲೆಂಡ್ನಲ್ಲಿ ಸಕ್ರಿಯವಾಗಿರುವ ಗುಂಪು ಆಸ್ಟ್ರೇಲಿಯಾದಲ್ಲಿ ವಿಧ್ವಂಸಕತೆಯನ್ನು ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದರೆ , ಅಂತಹ ವ್ಯಕ್ತಿಗಳನ್ನು ಹತ್ತಿಕ್ಕಲು ನಾವು ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದೆವು. ಪ್ರವಾಸೋದ್ಯಮಕ್ಕಾಗಿ ಅಲ್ಲ ರಾಜಕೀಯಕ್ಕಾಗಿ ಬ್ರಿಟನ್ನಿಂದ ಆಸ್ಟ್ರೇಲಿಯಾ ಪ್ರವೇಶಿಸಲು ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ ಅವಕಾಶ ನೀಡಿರುವುದು ತಪ್ಪು ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ