ರಾಂಚಿ ಜನವರಿ 31: ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ (Jharkhand ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರನ್ನು ಇಡಿ ಬಂಧಿಸಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದ ಬೆನ್ನಲ್ಲೇ ಹೇಮಂತ್ ಸೊರೇನ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹೇಮಂತ್ ಸೊರೇನ್ ಬಂಧನದ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದ ಜಾರ್ಖಂಡ್ (Jharkhand ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರ ರಾಂಚಿಯಲ್ಲಿರುವ ನಿವಾಸದಲ್ಲಿ ಮೊಕ್ಕಾಂ ಹೂಡಿದ್ದು, ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಸೋರೆನ್ ಅವರ ನಿವಾಸದ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಇದೆ.ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕ ತನ್ನ ದೆಹಲಿ ನಿವಾಸದಿಂದ “ಕಾಣೆಯಾಗಿದ್ದರು.
48ರ ಹರೆಯದ ಸೊರೆನ್ ಅವರನ್ನು ಈ ಹಿಂದೆ ಜನವರಿ 20 ರಂದು ಪ್ರಶ್ನಿಸಲಾಗಿತ್ತು, ನಂತರ ಸಂಸ್ಥೆಯು ಈ ವಾರಕ್ಕೆ ಎರಡನೇ ಸಮನ್ಸ್ ನೀಡಿತು. ಏಜೆನ್ಸಿಯು ಅವರಿಗೆ ಜನವರಿ 29 ಅಥವಾ 31 ರಂದು ಎರಡು ದಿನಾಂಕಗಳನ್ನು ನೀಡಿದೆ ಎಂದು ಮೂಲಗಳು ಎಎನ್ಐಗೆ ತಿಳಿಸಿವೆ.
#WATCH | Minibuses seen leaving the premises of Jharkhand CM Hemant Soren’s residence in Ranchi
A team of ED officials is at the residence of CM Soren for questioning in connection with a money laundering case linked to an alleged land scam. pic.twitter.com/kMntOpOUjz
— ANI (@ANI) January 31, 2024
ಸೊರೆನ್ ಖಾಸಗಿ ವಿಮಾನದಲ್ಲಿ ಶನಿವಾರ ದೆಹಲಿಗೆ ಹೋಗಿದ್ದು ಭಾನುವಾರ ರಾತ್ರಿಯ ಹೊತ್ತಿಗೆ ರಾಷ್ಟ್ರ ರಾಜಧಾನಿಯಲ್ಲಿರುವ ಅವರ ಮನೆಯಿಂದ ಕಣ್ಮರೆಯಾದ್ದರು. ಅವರು ಸುಮಾರು 1,300-ಕಿಮೀ ರಸ್ತೆಯಲ್ಲಿ ವಾಹನ ಚಾಲನೆ ಮಾಡಿಕೊಂಡು ವಾಪಸ್ ಮನೆಗೆ ಹಿಂದಿರುಗಿದ್ದರು.
ಏತನ್ಮಧ್ಯೆ, ಇಡಿ ಸೋಮವಾರ (ಜನವರಿ 29) ಮುಂಜಾನೆ ದೆಹಲಿ ಮನೆಗೆ ಇಡಿ ಲಗ್ಗೆ ಇಟ್ಟಿತ್ತು. ಅಲ್ಲಿ ಹುಡುಕಿದಾಗ ₹ 36 ಲಕ್ಷ ನಗದು ಪತ್ತೆಯಾಗಿದೆ, ಅವರ ಐಷಾರಾಮಿ ಎಸ್ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ
ಜಾರ್ಖಂಡ್‌ನಲ್ಲಿ “ಮಾಫಿಯಾದಿಂದ ಭೂಮಿಯ ಮಾಲೀಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆಯ” ತನಿಖೆಯ ಭಾಗವಾಗಿ ಸೊರೆನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 14 ಮಂದಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:39 pm, Wed, 31 January 24